ವಿಜಯಪುರ: ದುರ್ಗಾಮಾತೆ ಆಶೀರ್ವಾದದಿಂದ ಗೃಹ ಸಚಿವ ಎಂ. ಬಿ. ಪಾಟೀಲ್ ಸಿಎಂ ಆಗಲಿ ಎಂದು ಗೋವಾ ವಿಧಾನಸಭೆಯ ಡೆಪ್ಯೂಟಿ ಸ್ಪೀಕರ್ ಮೈಕೆಲ್ ಲೋಬೋ ಹಾರೈಸಿದ್ದಾರೆ.
ಸೋಮದೇವರ ಹಟ್ಟಿಯಲ್ಲಿ ನಡೆದ ದುರ್ಗಾಮಾತೆಯ ವಾರ್ಷಿಕ ಮಹೋತ್ಸವದಲ್ಲಿ ಅವರು ಮಾತನಾಡಿದರು. ದೇಶದ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದೆ. ಅದೇ ರೀತಿ ಎಂ. ಬಿ. ಪಾಟೀಲ್ ಅವರಿಗೂ ಒಳ್ಳೆಯದಾಗಲಿ ಎಂದರು.
ಈ ಮೂಲಕ ಪರೋಕ್ಷವಾಗಿ ಕರ್ನಾಟಕ ರಾಜ್ಯ ರಾಜಕೀಯದ ಬದಲಾವಣೆಯ ಬಗ್ಗೆ ಆಶಾಭಾವ ವ್ಯಕ್ತಪಡಿಸಿದರು.