ವಿಜಯಪುರ: ಕುಡಿದ ಮತ್ತಿನಲ್ಲಿದ್ದ ವ್ಯಕ್ತಿವೋರ್ವ ತನ್ನ ಪತ್ನಿಯನ್ನು ಕುಡುಗೋಲದಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಅಲಮೇಲ ತಾಲೂಕಿನ ದೇವಣಗಾಂವ್ ಗ್ರಾಮದಲ್ಲಿ ನಡೆದಿದೆ.
ಪತ್ನಿ ಮಲಕವ್ವ ಹರಗೋಲ (45) ಅವರನ್ನು ಪತಿ ಶಿವಪ್ಪ ಹರಗೋಲ ಕೊಚ್ಚಿ ಕೊಲೆ ಮಾಡಿದ್ದಾನೆ. ಮದ್ಯ ಸೇವಿಸಲು ಹಣ ನೀಡದ ಕಾರಣ ಈ ಕೃತ್ಯ ಎಸಗಿದ್ದಾನೆ ಎನ್ನಲಾಗ್ತಿದೆ.
ಹತ್ಯೆಗೈದ ಬಳಿಕ ಆರೋಪಿ ಶಿವಪ್ಪ ಪರಾರಿಯಾಗಿದ್ದಾನೆ. ಈ ಕುರಿತು ಅಲಮೇಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.