ವಿಜಯಪುರ: ಗ್ರಾಮ ಪಂಚಾಯಿತಿ ಚುನಾವಣೆ ಅಖಾಡ ರಂಗೇರತೊಡಗಿದ್ದು, ನಾಳೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಈ ನಡುವೆ ಚುನಾವಣೆ ಅಖಾಡ ಹಲವು ಸ್ವಾರಸ್ಯಕರ ಘಟನೆಗಳಿಗೂ ಕಾರಣವಾಗುತ್ತಿದೆ.
ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಸಂಕನಾಳ ಗ್ರಾಮದ ಟೈಲರ್ ವೃತ್ತಿಯಲ್ಲಿರುವ ಹುಸೇನಸಾಬ್ ಮುಲ್ಲಾ ಹಾಗೂ ಅವರ ಪತ್ನಿ ಮಾಲನಬಿ ಹುಸೇನಸಾಬ್ ಮುಲ್ಲಾ ಇಬ್ಬರೂ ಹುಣಶ್ಯಾಳ ಪಿ.ಬಿ. ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದಾರೆ.
ಹುಣಶ್ಯಾಳ ಪಿ.ಬಿ. ಗ್ರಾಮ ಪಂಚಾಯಿತಿಗೆ ಎರಡು ಸ್ಥಾನಗಳಿವೆ. ಇವುಗಳಲ್ಲಿ ಒಂದು ಸ್ಥಾನ ಹಿಂದುಳಿದ ವರ್ಗ ಮಹಿಳೆಗೆ ಮೀಸಲಿದ್ದು, ಇನ್ನೊಂದು ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಪತಿ ಹುಸೇನಸಾಬ್ ಮುಲ್ಲಾ ಸಾಮಾನ್ಯ ವರ್ಗದಿಂದ ಹಾಗೂ ಪತ್ನಿ ಮಾಲನಬಿ ಮುಲ್ಲಾ ಹಿಂದುಳಿದ ವರ್ಗದ ಮಹಿಳೆ ಮೀಸಲು ಕೋಟಾದಡಿ ನಾಮಪತ್ರ ಸಲ್ಲಿಸಿದ್ದಾರೆ.
ಓದಿ: ಗ್ರಾಪಂ ಸದಸ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು 10ಕ್ಕೂ ಹೆಚ್ಚು ಕಾರುಗಳಲ್ಲಿ ಬಂದ್ರು!
ನಾಳೆ ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿದೆ. ಇಬ್ಬರಲ್ಲಿ ಒಬ್ಬರು ನಾಮಪತ್ರ ಹಿಂದಕ್ಕೆ ಪಡೆಯುತ್ತಾರೋ ಅಥವಾ ಅಖಾಡದಲ್ಲಿ ಇಬ್ಬರೂ ಉಳಿಯುತ್ತಾರೋ ಎಂಬುದನ್ನು ಕಾದು ನೋಡಬೇಕಾಗಿದೆ.
ಓದಿ: ಗ್ರಾಪಂ ಚುನಾವಣೆಗೆ ಪತ್ನಿ ಸ್ಪರ್ಧೆ: ಎಸ್ಟಿ ಪ್ರಮಾಣಪತ್ರ ಸಿಗಲಿಲ್ಲವೆಂದು ಆತ್ಮಹತ್ಯೆಗೆ ಯತ್ನಿಸಿದ ಪತಿ!