ವಿಜಯಪುರ : ಕೊರೊನಾ ಮಹಾಮಾರಿಯಿಂದ ಹೋಟೆಲ್ ಉದ್ಯಮದಲ್ಲಿ ಭಾರಿ ನಷ್ಟ ಅನುಭವಿಸಿದ್ದ ಉದ್ಯಮಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ.
ಇಂಡಿಯಲ್ಲಿ ಅಮರ್ ಹೋಟೆಲ್ ನಡೆಸುತ್ತಿದ್ದ ಗಣೇಶ್ ಎಂಬುವರು ಆತ್ಯಹತ್ಯೆ ಮಾಡಿಕೊಂಡವರು. ಇವರು ಮಂಗಳೂರು ಮೂಲದ ಉದ್ಯಮಿಯಾಗಿದ್ದರು. ಹೋಟೆಲ್ ನಡೆಸಲು 30 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
ಸಾಲದ ಬಡ್ಡಿ ಕಟ್ಟಲು ಮೃತ ಗಣೇಶ್ ಪರದಾಡುತ್ತಿದ್ದರು. ಇದೇ ವೇಳೆ ಹೋಟೆಲ್ ಕೂಡ ಸರಿಯಾಗಿ ನಡೆಯದೆ ಚಿಂತೆಗೀಡಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಇಂಡಿ ನಗರ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ.. "ನಾನು ವಿಡಿಯೋ ಮಾಡಿಕೊಂಡು ಪಿಜಿಯಲ್ಲಿಟ್ಟಿದ್ದೆ, ಇನ್ನೊಂದು ಕಾಪಿ ನರೇಶಣ್ಣನ ಕೈಗೆ ಕೊಟ್ಟಿದ್ದೆ"- ಎಸ್ಐಟಿ ಮುಂದೆ ಯುವತಿ ಹೇಳಿಕೆ.!?