ETV Bharat / state

ಗೋಡೆಗೆ ಸುಣ್ಣ ಬಳಿಯುವ ಬ್ರಷ್‌ನಿಂದ ಬಣ್ಣ ಹಚ್ಚಿ ವಿನೂತನ ಹೋಳಿ ಹಬ್ಬ ಆಚರಣೆ

ಜಿಲ್ಲಾಡಳಿತ ಸಾಂಪ್ರದಾಯಿಕ ಹೋಳಿ ಹಬ್ಬಕ್ಕೆ ಕೊರೊನಾ ವೈರಸ್ ಕಾರಣ ನೀಡಿ ನಿಷೇಧ ಹೇರಿದೆ. ಅದಕ್ಕೆ ಸಾಮಾಜಿಕ ಅಂತರದೊಂದಿಗೆ ನಾವು ಹಬ್ಬವನ್ನು ಆಚರಿಸಿದ್ದೇವೆ..

Holi
ಹೋಳಿ
author img

By

Published : Mar 29, 2021, 7:50 PM IST

ಮುದ್ದೇಬಿಹಾಳ : ಪಟ್ಟಣದಲ್ಲಿ ಯುವಕರು ಮನೆಗೆ ಸುಣ್ಣ ಬಣ್ಣ ಹಚ್ಚುವ ಬ್ರಷ್‌ಗಳಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ವಿನೂತನವಾಗಿ ಬಣ್ಣ ಹಚ್ಚುವ ಮೂಲಕ ಹೋಳಿ ಆಚರಿಸಿ ಸಂಭ್ರಮಿಸಿದ್ದಾರೆ.

ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಯುವಕರು ಬ್ರಷ್​ಗಳ ಮೂಲಕ ಒಬ್ಬೊರಿಗೊಬ್ಬರು ಬಣ್ಣ ಹಚ್ಚಿಕೊಂಡು ಬಣ್ಣದಲ್ಲಿ ಮಿಂದು ಸಂತಸದಿಂದ ಹೋಳಿ ಆಚರಿಸಿ ಖುಷಿ ಪಟ್ಟಿದ್ದಾರೆ.

ವಿನೂತನವಾಗಿ ಹೋಳಿ ಹಬ್ಬ ಆಚರಣೆ..

ಈ ವೇಳೆ ಮಾತನಾಡಿದ ಮುಖಂಡ ಕಾಮರಾಜ ಬಿರಾದಾರ, ಜಿಲ್ಲಾಡಳಿತ ಸಾಂಪ್ರದಾಯಿಕ ಹೋಳಿ ಹಬ್ಬಕ್ಕೆ ಕೊರೊನಾ ವೈರಸ್ ಕಾರಣ ನೀಡಿ ನಿಷೇಧ ಹೇರಿದೆ. ಅದಕ್ಕೆ ಸಾಮಾಜಿಕ ಅಂತರದೊಂದಿಗೆ ನಾವು ಹಬ್ಬವನ್ನು ಆಚರಿಸಿದ್ದೇವೆ.

ಇದೇ ರೀತಿ ಹಬ್ಬಗಳನ್ನು ನಿಷೇಧಿಸುತ್ತಾ ಹೋದರೆ ಮುಂದೊಂದು ದಿನ ಚಿತ್ರಪಟಗಳಲ್ಲಿ ಹಬ್ಬದ ಆಚರಣೆಯ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಬೇಕಾದ ಪರಿಸ್ಥಿತಿ ಬರುತ್ತದೆ ಎಂದರು. ಈ ವೇಳೆ ಪ್ರಮುಖರಾದ ಸದಾಶಿವ ಮಠ, ಅಶೋಕ ಚಟ್ಟೇರ, ಪತ್ರಕರ್ತ ಶಂಕರ ಹೆಬ್ಬಾಳ, ಅನಿಲ ತೇಲಂಗಿ ಮೊದಲಾದವರು ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.