ವಿಜಯಪುರ: ನಗರದ ಐಒಸಿ ಹಿಂಬದಿಯಲ್ಲಿರುವ ರೈಲ್ವೆ ಹಳಿಗಳ ಮೇಲೆ ಹೈ ಮಾಸ್ಕ್ ವಿದ್ಯುತ್ ಕಂಬ ಬಿದ್ದ ಪರಿಣಾಮ ಸುಮಾರು ಮೂರು ಗಂಟೆಗಳ ಕಾಲ ರೈಲು ಸಂಚಾರದಲ್ಲಿ ವ್ಯತ್ಯಯಗೊಂಡಿದೆ.
ಸಂಜೆ 6ಗಂಟೆ ಸುಮಾರಿಗೆ ಹೈ ಮಾಸ್ಕ್ ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದ್ದು, ವಿದ್ಯುತ್ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ. ಲಾರಿ ಚಾಲಕನ ಎಡವಟ್ಟಿನಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ.
ನಂತರ ಸಿಬ್ಬಂದಿ ಹೈ ಮಾಸ್ಕ್ ವಿದ್ಯುತ್ ಕಂಬ ತೆರವು ಮಾಡಿದ ಕಾರಣ ಮತ್ತೆ ರೈಲು ಸಂಚಾರ ಆರಂಭಿಸಲಾಯಿತು. ಬಾಗಲಕೋಟೆ-ಮೈಸೂರು, ಸೋಲಾಪುರ-ಮೈಸೂರು, ಗದಗ-ಮುಂಬೈ ರೈಲು ಸಂಚಾರ ಸ್ಥಗಿತವಾಗಿತ್ತು.