ವಿಜಯಪುರ: ಡಿಸಿಎಂ ಹುದ್ದೆ ಸಿಕ್ಕಿರುವುದು ನನಗೆ ಬಯಸದೆ ಬಂದ ಭಾಗ್ಯ. ವರಿಷ್ಠರು ನನ್ನನ್ನು ಗುರುತಿಸಿ ಡಿಸಿಎಂ ಮಾಡಿದ್ದಾರೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ವಿಜಯಪುರದಲ್ಲಿ ಮಾತನಾಡಿದ ಅವರು, 2023ರ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲಲು ಮೂವರಿಗೆ ಡಿಸಿಎಂ ಹುದ್ದೆ ನೀಡಲಾಗಿದೆ. 3 ವರ್ಷ 8 ತಿಂಗಳು ಸರ್ಕಾರ ಸುಭದ್ರವಾಗಿದ್ದು, ಉತ್ತಮ ಆಡಳಿತ ನೀಡಲಿದೆ. 20 ವರ್ಷ ಬಿಜೆಪಿ ರಾಜ್ಯದಲ್ಲಿ ಗಟ್ಟಿಯಾಗಿರಲು ಉತ್ತರ ಕರ್ನಾಟಕ್ಕೆ 2 ಡಿಸಿಎಂ ಕೊಟ್ಟಿದ್ದಾರೆ ಎಂದರು.
ನೆರೆ ಪೀಡಿತ ಪ್ರದೇಶಕ್ಕೆ ಕೇಂದ್ರದ ಅಧಿಕಾರಿಗಳ ತಂಡ ಭೇಟಿ ನೀಡಿದೆ. ಸದ್ಯಕ್ಕೆ ತಾತ್ಕಾಲಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಕೇಂದ್ರ ನಾಯಕರಿಗೆ ಹಾನಿಯ ತೀವ್ರತೆ ಮನವರಿಕೆ ಮಾಡಿಸಿ, ಹೆಚ್ಚಿನ ಪರಿಹಾರಕ್ಕೆ ಪ್ರಯತ್ನಿಸುತ್ತೇವೆ. ಶಾಶ್ವತ ಪರಿಹಾರ ಕಲ್ಪಿಸುವ ಕೆಲಸ ಆಗಲಿದೆ ಎಂದರು
ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮದೇ ಪಕ್ಷ ಅಧಿಕಾರದಲ್ಲಿರುವುದರಿಂದ ಸರ್ವಪಕ್ಷ ನಿಯೋಗ ಹೋಗುವ ವಿಚಾರ ಇಲ್ಲ. ಸಿದ್ದರಾಮಯ್ಯ ಇರೋದು ಪ್ರತಿಪಕ್ಷದಲ್ಲಿ, ಹೀಗಾಗಿ ಎಲ್ಲದಕ್ಕೂ ಅವರ ವಿರೋಧವಿದೆ ಎಂದು ತಿರುಗೇಟು ನೀಡಿದರು.