ETV Bharat / state

ವಿಜಯಪುರ ಪ್ರವಾಸೋದ್ಯಮ ಅಭಿವೃದ್ಧಿಗೆ ಡಿಸಿಯಿಂದ ಹೆರಿಟೇಜ್ ನಡಿಗೆ - ವಿಜಯಪುರ ಪ್ರವಾಸೋದ್ಯಮ ಅಭಿವೃದ್ಧಿಗೆ ಡಿಸಿಯಿಂದ ಹೆರಿಟೇಜ್ ನಡಿಗೆ

ಜಿಲ್ಲಾಧಿಕಾರಿ ಪಿ. ಸುನೀಲ್​ಕುಮಾರ್​ ಅವರು ಪ್ರವಾಸೋದ್ಯಮ ಹಾಗೂ ಪುರಾತತ್ವ ಇಲಾಖೆಯ ಅಧಿಕಾರಿಗಳ ತಂಡ ಮೊದಲು‌ ನಾರಿಮಹಲ್ ವೀಕ್ಷಿಸಿದರು. ಸ್ಥಳೀಯ ಗೈಡ್​ಗಳು ಇದರ ನಿರ್ಮಾಣದ ಹಿಂದಿನ ಉದ್ದೇಶ, ಸ್ಥಾಪನೆ ಯಾವ ಕಾಲದಲ್ಲಿ ನಡೆದಿದೆ. ಸದ್ಯದ ಅದರ ಪರಿಸ್ಥಿತಿಯನ್ನು ಸವಿವರವಾಗಿ ಮಾಹಿತಿ ನೀಡಿದರು..

heritage-walk-from-dc-p-sunil-kumar-to-vijayapura-tourism-development
ವಿಜಯಪುರ ಪ್ರವಾಸೋದ್ಯಮ ಅಭಿವೃದ್ಧಿಗೆ ಡಿಸಿಯಿಂದ ಹೆರಿಟೇಜ್ ನಡಿಗೆ
author img

By

Published : Mar 20, 2022, 4:18 PM IST

ವಿಜಯಪುರ : ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣ ವೀಕ್ಷಣೆಗೆ ಪ್ರವಾಸಿಗರನ್ನು ಸೆಳೆಯಲು ಜಿಲ್ಲಾಧಿಕಾರಿ ಭಾನುವಾರ ಪಾರಂಪರಿಕ (ಹೆರಿಟೇಜ್) ನಡಿಗೆ ನಡೆಸಿದರು.

ನಗರದ ಹೊರವಲಯದ ತೊರವಿಯ ನವರಸಪುರದ ಸಂಗೀತ ಮಹಲ್​ ಹಾಗೂ ನಾರಿ ಮಹಲ್ ಪ್ರವಾಸಿ ತಾಣಗಳನ್ನು ವೀಕ್ಷಿಸಿದರು. ವಿಜಯಪುರ ಸುತ್ತಮುತ್ತಲು ಸುಮಾರು 84 ಆದಿಲ್​ಶಾಹಿ ನಿರ್ಮಿಸಿದ ಪಾರಂಪರಿಕ ಪ್ರವಾಸಿ ತಾಣಗಳು ಇವೆ. ಇವುಗಳನ್ನು ರಕ್ಷಿಸಿ ಅದರ ಸೌಂದರ್ಯ ಮತ್ತು ಆಕರ್ಷಣೆಯನ್ನು ಬರುವ ಪ್ರವಾಸಿಗರಿಗೆ ಉಣಬಡಿಸುವ ಉದ್ದೇಶ ಈ ಪಾರಂಪರಿಕ ನಡಿಗೆಯದ್ದಾಗಿದೆ.

ವಿಜಯಪುರ ಪ್ರವಾಸೋದ್ಯಮ ಅಭಿವೃದ್ಧಿಗೆ ಡಿಸಿಯಿಂದ ಹೆರಿಟೇಜ್ ನಡಿಗೆ

ಈ ಮೂಲಕ ಗುಮ್ಮಟನಗರಿ ವ್ಯಾಪಾರ, ವಹಿವಾಟು, ಸ್ವಂತ ಉದ್ಯೋಗ ಸೃಷ್ಠಿಸುವ ಕೆಲಸ ಈ ಮೂಲಕ ಮಾಡಬೇಕಾಗಿದೆ. ಪ್ರತಿ ತಿಂಗಳು ಮೂರನೇ ಭಾನುವಾರ ಪಾರಂಪರಿಕ‌ ನಡಿಗೆ ಮಾಡಲು ಉದ್ದೇಶಿಸಲಾಗಿದೆ.

ನವರಸ ಮಹಲ್ ನಿರ್ಮಾಣ.. ಜಿಲ್ಲಾಧಿಕಾರಿ ಪಿ. ಸುನೀಲ್​ಕುಮಾರ್​ ಅವರು ಪ್ರವಾಸೋದ್ಯಮ ಹಾಗೂ ಪುರಾತತ್ವ ಇಲಾಖೆಯ ಅಧಿಕಾರಿಗಳ ತಂಡ ಮೊದಲು‌ ನಾರಿಮಹಲ್ ವೀಕ್ಷಿಸಿದರು. ಸ್ಥಳೀಯ ಗೈಡ್​ಗಳು ಇದರ ನಿರ್ಮಾಣದ ಹಿಂದಿನ ಉದ್ದೇಶ, ಸ್ಥಾಪನೆ ಯಾವ ಕಾಲದಲ್ಲಿ ನಡೆದಿದೆ. ಸದ್ಯದ ಅದರ ಪರಿಸ್ಥಿತಿಯನ್ನು ಸವಿವರವಾಗಿ ಮಾಹಿತಿ ನೀಡಿದರು. ನಂತರ ಆದಿಲ್ ಶಾಹಿ‌‌ ಕಾಲದಲ್ಲಿ ಸಂಗೀತಕ್ಕೆ ಎಷ್ಟು ಮಹತ್ವ ನೀಡುತ್ತಿದ್ದರು. ಸಂಗೀತ ಕಚೇರಿ ನಡೆಸಲು ನವರಸ ಮಹಲ್ ನಿರ್ಮಾಣ ಮಾಡಿರುವ ಕುರಿತು ಮಾಹಿತಿ ನೀಡಿದರು.

ಈ ಬಗ್ಗೆ ಡಿಸಿ ಸುನೀಲ್​ಕುಮಾರ್ ಮಾತನಾಡಿ, ಬರುವ ಪ್ರವಾಸಿಗರು ನಗರದಲ್ಲಿರುವ ಪಾರಂಪರಿಕ ಕಟ್ಟಡಗಳನ್ನು ವೀಕ್ಷಿಸಿ ಅದರ ಮಾಹಿತಿ ನೀಡುವ ಉದ್ದೇಶದಿಂದ ವ್ಯಾಕ್ಸಿನ್​ ಕೇಂದ್ರ ಸ್ಥಾಪನೆ ಮಾಡುವ ಉದ್ದೇಶ ಹೊಂದಲಾಗಿದೆ. ದೇಶ, ವಿದೇಶಗಳಿಂದ ಬರುವ ಪ್ರವಾಸಿಗರಿಗೆ ನಮ್ಮ ಜಿಲ್ಲೆಯ ಪಾರಂಪರಿಕ ಸ್ಮಾರಕ ವೀಕ್ಷಣೆ ಜತೆ ಮಾಹಿತಿ ನೀಡುವ ಉದ್ದೇಶ ಹೊಂದಲಾಗಿದೆ ಎಂದರು.

ಪುರಾತತ್ವ ಇಲಾಖೆ ‌ಮೂಲಕ ಸರಿಪಡಿಸುವ ವ್ಯವಸ್ಥೆ.. ಬಾದಾಮಿ, ಪಟ್ಟದಕಲ್ಲು, ಹಂಪಿ ಸೇರಿದಂತೆ ಸುತ್ತಮುತ್ತಲಿನ ಪ್ರವಾಸಿತಾಣಗಳನ್ನು ವೀಕ್ಷಿಸಲು ಬರುವ ಪ್ರವಾಸಿಗರನ್ನು ವಿಜಯಪುರ ಪ್ರವಾಸಿತಾಣ ವೀಕ್ಷಣೆಗೆ ಸೆಳೆಯಲು ಬಾಗಲಕೋಟೆ, ವಿಜಯನಗರ ಡಿಸಿ ಜತೆ ಮಾತುಕತೆ ಮಾಡಲಿದ್ದೇವೆ.

ಈ ಕಡೆ ಬರುವ ಪ್ರವಾಸಿಗರನ್ನು ನಮ್ಮ ಜಿಲ್ಲೆಗೆ ಸೆಳೆದು ಎರಡು ದಿನ ಹೆಚ್ಚುವರಿಯಾಗಿ ವಾಸ್ತವ್ಯ ಹೂಡಿ ನಮ್ಮ ಪ್ರವಾಸಿ ತಾಣ, ಅದರ ಮಹತ್ವ ಅವರಿಗೆ ತಿಳಿ ಹೇಳುವ ವ್ಯವಸ್ಥೆ ಮಾಡಲಾಗುವುದು. ಇದರ ಜತೆ ಪಾರಂಪರಿಕ ತಾಣ ಬಿರುಕು ಬಿಟ್ಟಿದ್ದರೆ ಅದನ್ನು ಪುರಾತತ್ವ ಇಲಾಖೆ ‌ಮೂಲಕ ಸರಿಪಡಿಸುವ ವ್ಯವಸ್ಥೆ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದರು.

ಆದಿಲ್‌ಶಾಹಿಗಳ ರಾಜ್ಯ ವೈಭವ ಹಾಗೂ ನಿರ್ಮಿಸಿದ ಪಾರಂಪರಿಕ ಸ್ಮಾರಕಗಳ ಕುರಿತು ಅಧ್ಯಯನ ನಡೆಸಿರುವ ಇತಿಹಾಸ ತಜ್ಞ ಪೀಟರ್ ಅಲೆಕ್ಸಾಂಡರ್ ಮಾತನಾಡಿ, ರೋಮ್ ದೇಶದ ಪಾರಂಪರಿಕ ಸ್ಮಾರಕ ಬಿಟ್ಟರೆ ವಿಶ್ವದಲ್ಲಿ ವಿಜಯಪುರ ಸ್ಮಾರಕ ಸಾಕಷ್ಟು ಅದ್ಭುತಗಳಿಂದ ಕೂಡಿದೆ. ಅದನ್ನು ಉಳಿಸಿ ಬೆಳೆಸುವ ಮೂಲಕ ಈ ಭಾಗದ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಬೇಕಾಗಿದೆ. ಇದಕ್ಕೆ ಕೇವಲ ಡಿಸಿ ಕೆಲಸ ಮಾಡಿದರೆ ಸಾಕಾಗುವುದಿಲ್ಲ. ಎಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು.

ಸದ್ಯ ನಗರದಲ್ಲಿ 82 ಸ್ಮಾರಕಗಳು ಇವೆ. ಸಾಕಷ್ಟು ಕೆರೆ, ಬಾವಿ, ಬಾವಡಿಗಳು ನಶಿಸಿ ಹೋಗಿವೆ. ಅವುಗಳ ರಕ್ಷಣೆ ಮಾಡಿದರೆ ವಿಜಯಪುರ ಜಿಲ್ಲೆ ವಾಣಿಜ್ಯ ಕೇಂದ್ರವಾಗಬಹುದು ಎಂದು ಅಭಿಪ್ರಾಯಪಟ್ಟರು.

ಓದಿ: ಪಾವಗಡ ಬಸ್ ದುರಂತ : ಮೃತರ ಕುಟುಂಬಗಳಿಗೆ ₹25 ಲಕ್ಷ ಪರಿಹಾರ ನೀಡಲು ಮಾಜಿ ಸಿಎಂ ಕುಮಾರಸ್ವಾಮಿ ಆಗ್ರಹ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.