ETV Bharat / state

ವಿಜಯಪುರದಲ್ಲಿ ಧಾರಾಕಾರ ಮಳೆ: ಸಿಡಿಲಿಗೆ ಇಬ್ಬರು ಬಲಿ - ಉಮದಿ ಪೊಲೀಸ್ ಠಾಣೆ

ವಿಜಯಪುರ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಜಿಲ್ಲೆಯ ನಿಡಗುಂದಿ ತಾಲೂಕಿನ ರಾಜನಾಳದಲ್ಲಿ ಸುಸಲವ್ವ ಎಂಬ ಮಹಿಳೆ ಹಾಗೂ ಮಹಾರಾಷ್ಟ್ರದ ಗಡಿ ಭಾಗದ ಉಮದಿಯ ಜರುಗಿ ಗ್ರಾಮದಲ್ಲಿ ಶ್ರೀಶೈಲ ಕಲ್ಲಪ್ಪ ಪಟ್ಟಣಶೆಟ್ಟಿ ಎಂಬ ವ್ಯಕ್ತಿ ಸಿಡಿಲಿಗೆ ಬಲಿಯಾಗಿದ್ದಾರೆ.

ವಿಜಯಪುರದಲ್ಲಿ ಧಾರಾಕಾರ ಮಳೆ
author img

By

Published : Oct 3, 2019, 11:13 PM IST

ವಿಜಯಪುರ: ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ.‌ ಮಳೆಯಿಂದಾಗಿ ನಗರದ ಶಾ ಪೇಟೆ, ಗಣೇಶ‌ನಗರ, ಮನಗೂಳಿ ಅಗಸಿ, ಬಸವೇಶ್ವರ ವೃತ್ತ ಸೇರಿದಂತೆ ರಸ್ತೆಗಳ ಮೇಲೆ ನೀರು ನುಗ್ಗಿದ ಪರಿಣಾಮ‌ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಯಿತು.

ಮತ್ತೊಂದು ಕಡೆ ಸಿಡಿಲಿಗೆ ಮಹಿಳೆ ಸೇರಿ ಇಬ್ಬರು ಬಲಿಯಾಗಿದ್ದಾರೆ. ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ರಾಜನಾಳ ನಿವಾಸಿ ಸುಸಲವ್ವ ಚಿಮ್ಮಲಗಿ (50) ಸಿಡಿಲಿಗೆ ಬಲಿಯಾದ ಮಹಿಳೆ. ಜೋರಾಗಿ ಸುರಿಯುತ್ತಿದ್ದ ಮಳೆಯಿಂದ ತಪ್ಪಿಸಿಕೊಳ್ಳಲು ಸುಸಲವ್ವ ಮರದ ಅಡಿಯಲ್ಲಿ ಆಶ್ರಯ ಪಡೆದಿದ್ದರು.‌ ಈ ವೇಳೆ ಮರಕ್ಕೆ‌ ಸಿಡಿಲು ಹೊಡೆದ ಪರಿಣಾಮ ಮರದ ಕೆಳಗಿದ್ದ ಸುಸಲವ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯಪುರದಲ್ಲಿ ಧಾರಾಕಾರ ಮಳೆ

ಇನ್ನೊಂದು ಪ್ರಕರಣದಲ್ಲಿ ಮಹಾರಾಷ್ಟ್ರದ ಗಡಿ ಭಾಗದ ಉಮದಿಯ ಜರುಗಿ ಗ್ರಾಮದಲ್ಲಿ ಶ್ರೀಶೈಲ ಕಲ್ಲಪ್ಪ ಪಟ್ಟಣಶೆಟ್ಟಿ (45) ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಸಂಜೆ ಮಳೆ ಬರುವ ವೇಳೆ ಮಾಣಿಕನಾಳ ಕೆರೆ ಬಳಿ ಹೋಗುತ್ತಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಉಮದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ವಿಜಯಪುರ Body:ವಿಜಯಪುರ . ವಿಜಯಪುರ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ.‌ ಒಂದೆಡೆ ಜಿಲ್ಲೆಯಾದ್ಯಂತ ಮಳೆಯಾಗ್ತಿರೋದು ರೈತಾಪಿ ವರ್ಗದಲ್ಲಿ ಖುಷಿ ತಂದಿದೆ. ಮತ್ತೊಂದು ಕಡೆಗೆ ಸಿಡಿಲಿಗೆ ಮಹಿಳೆ ಸೇರಿ ಇಬ್ಬರು ಬಲಿಯಾಗಿದ್ದಾರೆ. ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ರಾಜನಾಳ ನಿವಾಸಿ 50 ವರ್ಷದ ಸುಸಲವ್ವ ಚಿಮ್ಮಲಗಿ ಸಿಡಿಲಿಗೆ ಬಲಿಯಾದ ಮಹಿಳೆ. ಜೋರಾಗಿ ಸುರಿಯುತ್ತಿದ್ದ ಮಳೆಯಿಂದ ತಪ್ಪಿಸಿಕೊಳ್ಳಲು ಸುಸಲವ್ವ ಮರದ ಅಡಿಗೆ ಆಶ್ರಯ ಪಡೆದಿದ್ದಳು.‌ ಈ ವೇಳೆ ಮರಕ್ಕೆ‌ ಸಿಡಿಲು ಹೊಡೆದ ಪರಿಣಾಮ, ಮರದ ಕೆಳಗಿದ್ದ ಸುಸಲವ್ವ ಸ್ಥಳದಲ್ಲೆ ಸಾವನ್ನಪ್ಪಿದ್ದಾಳೆ. ಈ ಸಂಬಂಧ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಮಹಾರಾಷ್ಟ್ರದ ಗಡಿಭಾಗದ ಉಮದಿಯ ಜರುಗಿ ಗ್ರಾಮದಲ್ಲಿ ಶ್ರೀಶೈಲ ಕಲ್ಲಪ್ಪ ಪಟ್ಟಣಶೆಟ್ಡಿ (45) ಸಿಡಿಲು ಬಡಿದು ಸಾವನ್ನಪ್ಪಿದ್ದಾನೆ.
ಸಂಜೆ ಮಳೆ ಬರುವ ವೇಳೆ ಮಾಣಿಕನಾಳ ಕೆರೆ ಬಳಿ ಹೋಗುತ್ತಿದ್ದಾಗ ಸಿಡಿಲು ಬಡಿದು ಸಾವನ್ಬಪ್ಪಿದ್ದಾನೆ.
ಉಮದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Conclusion:ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.