ಮುದ್ದೇಬಿಹಾಳ: ಪಟ್ಟಣದಲ್ಲಿ ಬುಧವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ನಾಲ್ಕೈದು ಅಂಗಡಿಗಳಿಗೆ ಚರಂಡಿ ನೀರು ತುಂಬಿತು.
ತಾಲೂಕಿನಾದ್ಯಂತ ಅರ್ಧಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ. ಕಿರಾಣಿ, ಮೊಬೈಲ್ ಶಾಪ್, ಹಾರ್ಡ್‌ವೇರ್ ಮತ್ತಿತರ ಅಂಗಡಿಗೆ ನೀರು ನುಗ್ಗಿದೆ. ವಿಷಯ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿ ನೀರು ಹೊರ ಹಾಕಿದರು.