ETV Bharat / state

ವ್ಯಾಪಾರವಿಲ್ಲದೆ ಖಾಲಿ ಹೊಡೆಯುತ್ತಿರುವ ಮದ್ಯದಂಗಡಿಗಳು: ತೆರಿಗೆ ವಿನಾಯಿತಿಗೆ ಮಾಲೀಕರ ಒತ್ತಾಯ - ವ್ಯಾಪಾರವಿಲ್ಲದೆ ಖಾಲಿ ಹೊಡೆಯುತ್ತಿರುವ ಬಾರ್​ಗಳು

ಸರ್ಕಾರ ಲಾಕ್​ಡೌನ್​ನಲ್ಲಿ ಕೆಲವೊಂದು ಸಡಿಲಿಕೆಯನ್ನು ನೀಡುವ ಮೂಲಕ ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ. ಆದರೆ ಅಬಕಾರಿ ಸುಂಕ ಹೆಚ್ಚಳ ಮಾಡಿದ ಪರಿಣಾಮ ಮೊದಲಿನಂತೆ ಮದ್ಯ ಮಾರಾಟವಾಗಿಲ್ಲ. ಹಾಗಾಗಿ ಸರ್ಕಾರ ಮದ್ಯ ತೆರಿಗೆಯಲ್ಲಿ ವಿನಾಯಿತಿ ನೀಡುಬೇಕೆಂದು ಮದ್ಯದಂಗಡಿ ಮಾಲೀಕರು ಒತ್ತಾಯಿಸಿದ್ದಾರೆ.

Heavy loose facing bars
ವ್ಯಾಪಾರವಿಲ್ಲದೆ ಖಾಲಿ ಹೊಡೆಯುತ್ತಿರುವ ಬಾರ್​ಗಳು
author img

By

Published : May 22, 2020, 4:59 PM IST

Updated : May 23, 2020, 6:03 PM IST

ವಿಜಯಪುರ: ಸರ್ಕಾರ ಲಾಕ್​ಡೌನ್​ನಲ್ಲಿ ಕೆಲವೊಂದು ಸಡಿಲಿಕೆ ನೀಡುವ ಮೂಲಕ ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ. ಆದರೆ ಅಬಕಾರಿ ಸುಂಕ ಹೆಚ್ಚಳ ಮಾಡಿದ ಪರಿಣಾಮ ಮೊದಲಿನಂತೆ ಮದ್ಯ ಮಾರಾಟವಾಗಿಲ್ಲ. ಇದರಿಂದ ಬಾರ್​ ಮಾಲೀಕರು ಸರ್ಕಾರಕ್ಕೆ ಹೇಗೆ ತೆರಿಗೆ ಕಟ್ಟಬೇಕೆಂಬ ಚಿಂತೆಯಲ್ಲಿದ್ದಾರೆ.

ಲಾಕ್​​​ಡೌನ್ ಸಡಿಲಿಕೆ ನಂತರ ಸರ್ಕಾರ ಮದ್ಯ ಮಾರಾಟಕ್ಕೆ ಅನುಮತಿ ನೀಡದ್ದು, ಇದರ ಜೊತೆಗೆ ಅಬಕಾರಿ ಸುಂಕವನ್ನು ಹೆಚ್ಚು ಮಾಡಿದೆ. ಜಿಲ್ಲೆಯಲ್ಲಿ ಸಿಎಲ್-7 32, ಸಿಎಲ್-11 40, ಸಿಎಲ್-2 82, ಸಿಎಲ್-13, ಸಿಎಲ್-9 45 ಸೇರಿದಂತೆ ಒಟ್ಟು 188 ಮದ್ಯದಂಗಳಿದ್ದು, ಪ್ರತಿ ತಿಂಗಳು 1 ಲಕ್ಷ ಬಾಕ್ಸ್‌ಗಳಷ್ಟು ಮಾರಾಟವಾಗುತ್ತಿದ್ದ ಮದ್ಯ, ಮೇ 4ರ ಬಳಿಕ 69,646 ಬಾಕ್ಸ್ ಹಾಗೂ 12,038 ಲೀಟರ್ ಬಿಯರ್ ಮಾರಾಟವಾಗಿದ್ದು, ಮದ್ಯಂಗಡಿ ಮಾಲೀಕರು ತೆರಿಗೆ ಭಾರದಿಂದ ತತ್ತರಿಸುತ್ತಿದ್ದಾರೆ.

ವ್ಯಾಪಾರವಿಲ್ಲದೆ ಖಾಲಿ ಹೊಡೆಯುತ್ತಿರುವ ಮದ್ಯದಂಗಡಿಗಳು

ಜಿಲ್ಲೆಯ 188 ಮದ್ಯದಂಗಡಿಗಳ ಪೈಕಿ ಪ್ರತಿ ವರ್ಷಕ್ಕೆ 8 ಲಕ್ಷ ಸಿಎಲ್-7, 3 ಲಕ್ಷ ಸಿಎಲ್-11, ಸಿಎಲ್-2 6 ಲಕ್ಷ, ಸಿಎಲ್-4 8 ಲಕ್ಷ, ಹಾಗೂ ಸಿಎಲ್- 9 ಮದ್ಯದಂಗಡಿಗಳಿಂದ 7.5 ಲಕ್ಷ ಜೂನ್ ಅಂತ್ಯದಲ್ಲಿ ತೆರಿಗೆ ಕಟ್ಟುಬೇಕು. ದಿನಂಪ್ರತಿ ಅಬಕಾರಿ ಸುಂಕ ಹೆಚ್ಚಾಗುತ್ತಿದ್ದು, ಜನರು ಬಾರ್​ಗಳಿಗೆ ಬರದ ಪರಿಣಾಮ ಮಾಲೀಕರು ಸರಿಯಾದ ವ್ಯಾಪಾರ-ವಹಿವಾಟಿಲ್ಲದೆ ಸಂಕಷ್ಟ ಅನುಭವಿಸುವಂತಾಗಿದೆ.

ಜಿಲ್ಲೆಯಿಂದ ಪ್ರತಿ ತಿಂಗಳಿಗೆ 30 ಕೋಟಿ ರೂ. ಆದಾಯ ಅಬಕಾರಿ ಇಲಾಖೆಗೆ ಹೋಗುತ್ತಿದೆ. ಅಬಕಾರಿ ಇಲಾಖೆ ಮದ್ಯವನ್ನು ಪಾರ್ಸಲ್ ಮಾಡುವ ವ್ಯವಸ್ಥೆ ಜಾರಿ ಬಳಿಕ ಸರಿಯಾದ ವಹಿವಾಟು ನಡೆಯುತ್ತಿಲ್ಲ. ಜೂನ್ ಅಂತ್ಯಕ್ಕೆ ಮಾಲೀಕರು ಸರ್ಕಾರಕ್ಕೆ 10 ಕೋಟಿ ಅಧಿಕ ತೆರೆಗೆ ಕಟ್ಟುಬೇಕು. 54 ದಿನಗಳ ಕಾಲ ಮದ್ಯದ ವ್ಯಾಪಾರ ಸ್ಥಗಿತವಾಗಿದ್ದು, ಮಾಲೀಕರ ಕೈಯಲ್ಲಿ ಹಣವಿಲ್ಲ. ಹಾಗಾಗಿ ಸರ್ಕಾರ ಮದ್ಯ ತೆರಿಗೆಯಲ್ಲಿ ವಿನಾಯಿತಿ ನೀಡುಬೇಕೆಂದು ಮದ್ಯದಂಗಡಿ ಮಾಲೀಕರು ಒತ್ತಾಯಿಸಿದ್ದಾರೆ.

Last Updated : May 23, 2020, 6:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.