ETV Bharat / state

ಕಿರುಕುಳಕ್ಕೆ ಹೆಡ್​ಮಾಸ್ಟರ್​ ಆತ್ಮಹತ್ಯೆ; ಶಿಕ್ಷಕರು ಸೇರಿ ನಾಲ್ವರು ಅಮಾನತು - etv bharat kannada

ಮಾನಸಿಕ ಕಿರುಕುಳ ಆರೋಪ- ಡೆತ್​ ನೋಟ್​ ಬರೆದಿಟ್ಟು ಮುಖ್ಯೋಪಾಧ್ಯಾಯ ಆತ್ಮಹತ್ಯೆ - ಸಿಂದಗಿ ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಘಟನೆ

headmaster
ಮುಖ್ಯೋಪಾಧ್ಯಾಯ
author img

By

Published : Feb 13, 2023, 2:12 PM IST

Updated : Feb 13, 2023, 4:59 PM IST

ಡೆತ್​ ನೋಟ್​ ಬರೆದಿಟ್ಟು ಮುಖ್ಯೋಪಾಧ್ಯಾಯ ಆತ್ಮಹತ್ಯೆ

ವಿಜಯಪುರ: ಮೇಲಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಎಚ್​ಪಿಎಸ್ ಶಾಲೆಯ ಮುಖ್ಯೋಪಾಧ್ಯಾಯರು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ರಾತ್ರಿ ನಡೆದಿದೆ. ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಮೃತರ ಸಂಬಂಧಿಕರು, ಸರ್ಕಾರಿ ನೌಕರರು, ಶಿಕ್ಷಕ ಸಂಘದವರು ಪ್ರತಿಭಟನೆ ನಡೆಸಿದ್ದರು. ಇದೀಗ ಘಟನೆಗೆ ಸಂಬಂಧಿಸಿದಂತೆ ಬಿಇಓ, ಸಿಆರ್​ಪಿ ಹಾಗೂ ಶಾಲಾ ಮುಖ್ಯ ಶಿಕ್ಷಕರನ್ನು ಅಮಾನತು ಮಾಡಲಾಗಿದೆ.

ಜಿಲ್ಲೆಯ ಸಿಂದಗಿ ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಮಾನಸಿಕ ಕಿರುಕುಳ ತಾಳದೇ ಭಾನುವಾರ ರಾತ್ರಿ ಸಾಸಾಬಾಳ ಗ್ರಾಮದ ಸರ್ಕಾರಿ ಎಚ್​ಪಿಎಸ್ ಶಾಲೆಯ ಮುಖ್ಯೋಪಾಧ್ಯಾಯರು ಆತ್ಮಹತ್ಯೆ ಮಾಡಿಕೊಂಡಿದ್ದರು. ಮೂಲತಃ ಕೋರವಾರ ಗ್ರಾಮದ ಮುಖ್ಯೋಪಾಧ್ಯಾಯ ಬಸವರಾಜ ಮಲ್ಲಪ್ಪ ನಾಯಕಲ್ (54) ಮೃತರು. ತನ್ನ ಸಾವಿನ ಬಗ್ಗೆ ಎರಡು ಪುಟಗಳ ಡೆತ್ ನೋಟ್ ಬರೆದಿಟ್ಟು, ಅದರಲ್ಲಿ ಕೆಲ ಮೇಲಾಧಿಕಾರಿಗಳು ತನಗೆ ಮಾನಸಿಕ ಹಿಂಸೆ ನೀಡುತ್ತಿದ್ದರು ಎಂಬುದಾಗಿ ಅವರ ಹೆಸರನ್ನು ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಡೆತ್​ ನೋಟ್​ನಲ್ಲಿ ಏನಿದೆ?: "ಕೆಲ ಅಧಿಕಾರಿಗಳು ನನಗೆ ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯ ಸ್ಥಾನ ಬಿಟ್ಟುಕೊಡುವ ವೇಳೆ, ಸಮರ್ಪಕ ಶಾಲಾ ದಾಖಲಾತಿಗಳನ್ನು ಬರೆಯದೇ ಇದ್ದ ಕಾರಣ ಇದೇ ವ್ಯಾಪ್ತಿಗೆ ಸಿಆರ್‌ಸಿ ಆಗಿರುವೆ. ಅವರು ಎಲ್ಲವನ್ನು ಸರಿಪಡಿಸಿಕೊಡುವೆ ಎನ್ನುತ್ತ ಕಾಲಕಳೆದರು. ನಾನೇ ಬೆನ್ನು ಬಿದ್ದರೂ ಆ ಕೆಲಸಗಳನ್ನು ಮಾಡಲಿಲ್ಲ. ಬಿಇಒ ಎಚ್.ಎಂ.ಹರನಾಳ ಅವರಿಗೆ ಈ ವಿಷಯವನ್ನು ಮೌಖಿಕವಾಗಿ ತಿಳಿಸಿದರೂ, ನನ್ನ ಮೇಲೆ ನೋಟಿಸ್ ಕೊಡುವ ಮೂಲಕ ಮಾನಸಿಕ ಹಿಂಸೆ ನೀಡಿದ್ದಾರೆ. ಇವರೆಲ್ಲರ ನಡುವೆ ಶಾಲಾ ಉಸ್ತುವಾರಿಯ ಜೊತೆಗೆ ಮಕ್ಕಳ ಭವಿಷ್ಯವನ್ನು ರೂಪಿಸಲು ಸಾಧ್ಯವಾಗದ ಹಿಂಸೆ ನನ್ನನ್ನು ಈ ಸ್ಥಿತಿಗೆ ತಳ್ಳಿದೆ" ಎಂದು ಬರೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಅಂಬೇಡ್ಕರ್​ಗೆ ಅವಮಾನ ಆರೋಪ: ಜೈನ್ ವಿವಿ ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್, ತನಿಖೆಗೆ ಸಚಿವರ ಸೂಚನೆ

ಈ ಕುರಿತು ಡೆತ್ ನೋಟಿನಲ್ಲಿ ಬಸವರಾಜ ಮಲ್ಲಪ್ಪ ನಾಯಕಲ್​ ಉಲ್ಲೇಖಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ.ಹರನಾಳ ಮತ್ತು ಡೆತ್ ನೋಟ್​ನಲ್ಲಿ ಉಲ್ಲೇಖಿಸಿರುವ ಅಧಿಕಾರಿಗಳೇ ನನ್ನ ಗಂಡನ ಸಾವಿಗೆ ನೇರ ಕಾರಣ ಎಂದು ಆರೋಪಿಸಿ ನಾಯಕಲ್​ ಅವರ ಪತ್ನಿ ಮಹಾದೇವಿ ಬಸವರಾಜ ನಾಯಕಲ್ ಅವರು ಸಿಂದಗಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಸಿಂದಗಿಯಲ್ಲಿ ಪ್ರತಿಭಟನೆ: ಮಾನಸಿಕ‌ ಕಿರುಕುಳ ನೀಡಿ ಮುಖ್ಯೋಪಾಧ್ಯಾಯರೊಬ್ಬರ ಆತ್ಮಹತ್ಯೆಗೆ ಕಾರಣರಾದವರನ್ನು ಈ ಕೂಡಲೇ ಬಂಧಿಸಬೇಕು ಹಾಗೂ ಕೆಲಸದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ಮೃತನ ಸಂಬಂಧಿಕರು, ಸರ್ಕಾರಿ ನೌಕರರು, ಶಿಕ್ಷಕ ಸಂಘದವರು ಸಿಂದಗಿಯಲ್ಲಿ ಪ್ರತಿಭಟನೆ ನಡೆಸಿದರು. ಮೃತ ಮುಖ್ಯೋಪಾಧ್ಯಾಯರ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಶವವನ್ನು ತಾಲೂಕು ಆಸ್ಪತ್ರೆಯಿಂದ ಮೆರವಣಿಗೆ ಮೂಲಕ ತಂದು ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಸಹೋದ್ಯೋಗಿ ಶಿಕ್ಷಕರು "ಎಷ್ಟು ಒತ್ತಡ ನಮ್ಮ ಮೇಲೆ ಇದೆ ಎನ್ನುವುದನ್ನು ಅವರು ತಮ್ಮ ಡೆತ್ ನೋಟ್​ನಲ್ಲಿ ಬರೆದಿಟ್ಟಿದ್ದಾರೆ. ಇದಕ್ಕೆ ನ್ಯಾಯ ದೊರಕಬೇಕು" ಎಂದು ಆಗ್ರಹಿಸಿದರು.‌

ಡೆತ್​ ನೋಟ್​ನಲ್ಲಿದ್ದವರ ಅಮಾನತು: ಹೆಡ್ ಮಾಸ್ಟರ್ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಬಿಇಓ, ಸಿಆರ್​ಪಿ ಹಾಗೂ ಶಾಲಾ ಮುಖ್ಯ ಶಿಕ್ಷಕರನ್ನು ಡಿಡಿಪಿಐ ಉಮೇಶ ಶಿರಹಟ್ಟಿಮಠ ಅಮಾನತು ಮಾಡಿ ಆದೇಶಿಸಿದ್ದಾರೆ. ಸೋಮವಾರ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತರ ಶವ ಪರೀಕ್ಷೆ ವೇಳೆ ಅವರ ಕುಟುಂಬದವರನ್ನು ಭೇಟಿ ಮಾಡಿ, ಸಾಂತ್ವನ ಹೇಳಿದ್ದಾರೆ. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಶಿಕ್ಷಣಾಧಿಕಾರಿ ಎಚ್.ಎಮ್. ಹರನಾಳ, ಸಿಆರ್​ಪಿ ಜಿ.ಎನ್.ಪಾಟೀಲ ಹಾಗೂ ಮಾಡಬಾಳ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಸ್.ಎಲ್.ಭಜಂತ್ರಿ ಮತ್ತು ಸಹ ಶಿಕ್ಷಕ ಬಿ.ಎಂ.ತಳವಾರ ಅವರನ್ನು ಅಮಾನತುಪಡಿಸಿ ಆದೇಶಿಸಿರುವುದಾಗಿ ಹೇಳಿದ್ದಾರೆ.

"ತನ್ನ ಆತ್ಮಹತ್ಯೆಗೆ ಹಿಂಸೆ ನೀಡಿದವರ ಕುರಿತು ಬರೆದ ಡೆತ್ ನೋಟ್ ಆಧಾರ ಹಾಗೂ ಮೃತನ ಪತ್ನಿ ನೀಡಿದ ದೂರಿನನ್ವಯ ಎಫ್ಐಆರ್ ದಾಖಲಾಗಿದ್ದು, ಶಾಲಾ ಕಾರ್ಯ ಸುಗಮವಾಗಿ ನಡೆಸಿಕೊಂಡು ಹೋಗುವಲ್ಲಿ ವಿಫಲರಾದ ಮತ್ತು ಶಾಲಾ ಆಡಳಿತಕ್ಕೆ ತೊಂದರೆಯನ್ನುಂಟು ಮಾಡಿದ ಆರೋಪದ ಹಿನ್ನಲೆ ಸರ್ಕಾರಿ ನೌಕರರ ನಡುವಳಿಕೆಗೆ ಸಲ್ಲದ ರೀತಿಯ ನಡೆ, ಕರ್ನಾಟಕ ಸಿವ್ಹಿಲ್ ಸೇವಾ(ನಡತೆ) ನಿಯಮ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಕರ್ನಾಟಕ ಸೇವಾ ನಿಯಮಗಳನ್ವಯ ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಗೂಗಲ್​​ ಸಹಾಯದಿಂದ ರೋಗಿಗಳಿಗೆ ಔಷಧ ನೀಡುತ್ತಿದ್ದ ನಕಲಿ ವೈದ್ಯನ ಬಂಧನ.. ಇತಿಹಾಸ ಕೇಳಿದರೆ ಬೆಚ್ಚಿ ಬೀಳೋದು ಗ್ಯಾರಂಟಿ!

Last Updated : Feb 13, 2023, 4:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.