ETV Bharat / state

ಸಿಡಿ ಇಟ್ಕೊಂಡೇ ನಮ್ಮ ಬಿಜೆಪಿಯೊಳಗೆ ಮಂತ್ರಿ ಆಗ್ಯಾರ, ₹50-100 ಕೋಟಿ ಎಲ್ಲಿಂದ ಕೋಡೋದು?: ಯತ್ನಾಳ್​ - ​ ಯತ್ನಾಳ್ ಹೊಸ ಬಾಂಬ್

ನಾನು ಯಾರಿಗೂ ರೊಕ್ಕಾ ಕೊಡುವ ಮಗನಲ್ಲ. 50 ಕೋಟಿ ರೂ., 100 ಕೋಟಿ ರೂ. ಎಲ್ಲಿಂದ ಕೊಡುವುದು?. ಇಷ್ಟೊಂದು ಹಣ ಎಲ್ಲಿಂದ ಕೊಡುವುದಕ್ಕೆ ಆಗುತ್ತೆ?. ಎಷ್ಟು ಲೂಟಿ ಮಾಡೋದು ಎಂದು ಯತ್ನಾಳ್ ಪ್ರಶ್ನೆ ಎತ್ತಿದ್ದಾರೆ..

BJP MLA Basanagouda patil yatnal
ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್
author img

By

Published : May 8, 2022, 7:12 PM IST

ವಿಜಯಪುರ : ಧ್ವನಿ ಇಲ್ಲದ ಸಮಾಜಗಳಿಗೆ ಮೀಸಲಾತಿ ಬಗ್ಗೆ ಧ್ವನಿ ಎತ್ತುವುದು ಬ್ಲ್ಯಾಕ್​ಮೇಲ್ ಆಗುವುದಿಲ್ಲ. ಆದರೆ, ​ಯಾರ‍್ಯಾರದ್ದೋ ಸಿಡಿ ಇಟ್ಟುಕೊಂಡು, ವೀಕ್​ನೆಸ್​ ಇಟ್ಟುಕೊಂಡು, ನನಗೆ ಮಂತ್ರಿ ಮಾಡುವುದಿಲ್ಲ ಎಂದರೆ ಸಿಡಿ ಹೊರಗಡೆ ಬಿಡುತ್ತೀನಿ ಎಂಬುವುದು ಬ್ಲ್ಯಾಕ್​ಮೇಲ್ ಆಗುತ್ತದೆ.

ನಮ್ಮ ಬಿಜೆಪಿಯೊಳಗೆ ​ಯಾರ‍್ಯಾರದ್ದೋ ಸಿಡಿ ಇಟ್ಟುಕೊಂಡೇ ಮಂತ್ರಿ ಆಗಿದ್ದಾರೆ ಎಂದು ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ವಿಜಯಪುರ ತಾಲೂಕಿನ ಹಿಟ್ನಳ್ಳಿಯಲ್ಲಿ ನಡೆದ ಕಿತ್ತೂರು ರಾಣಿ ಚೆನ್ನಮ್ಮ ಕಂಚಿನ ಪುತ್ಥಳಿ ಅನಾವರಣಗೊಳಿಸಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಒಬ್ಬ ಇದ್ದಾನೆ, ಅವ ಅರ್ಹತೆ ಮೇಲೆ ಮಂತ್ರಿ ಆಗಿಲ್ಲ. 2ಎ ಮೀಸಲಾತಿ ಕೇಳುವುದು, ಕುರುಬ, ಹಡಪದ ಸೇರಿ ಧ್ವನಿ ಇಲ್ಲದ ಸಮಾಜಗಳಿಗೆ ಮೀಸಲಾತಿ ಕೊಡಿ ಎಂಬುವುದು ಬ್ಲ್ಯಾಕ್​ಮೇಲ್​ ಆಗಲ್ಲ ಎಂದು ಪರೋಕ್ಷವಾಗಿ ಸಚಿವ ಮುರುಗೇಶ್ ನಿರಾಣಿ ವಿರುದ್ಧ ವಾಗ್ದಾಳಿ‌ ನಡೆಸಿದರು.

ಸಚಿವ ನಿರಾಣಿ ವಿರುದ್ಧ ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ವಾಗ್ದಾಳಿ ನಡೆಸಿರುವುದು..

50-100 ಕೋಟಿ ಎಲ್ಲಿಂದ ಕೊಡೋದು? : ನಾನು ಯಾರಿಗೂ ರೊಕ್ಕಾ ಕೊಡುವ ಮಗನಲ್ಲ. 50 ಕೋಟಿ ರೂ., 100 ಕೋಟಿ ರೂ. ಎಲ್ಲಿಂದ ಕೊಡುವುದು?. ಇಷ್ಟೊಂದು ಹಣ ಎಲ್ಲಿಂದ ಕೊಡುವುದಕ್ಕೆ ಆಗುತ್ತೆ?. ಎಷ್ಟು ಲೂಟಿ ಮಾಡೋದು?. 50 ಕೋಟಿ ರೂ. ಕೊಟ್ಟು ಸುಮ್ಮನೆ ಮನೆಯೊಳಗೆ ಇರಬಹುದು. ತಮ್ಮ ಸಿದ್ಧಸಿರಿ ಬ್ಯಾಂಕ್​ನಲ್ಲೇ 50 ಕೋಟಿ ರೂ. ಡಿಪಾಸಿಟ್ ಇಟ್ಟರೆ. ಎಷ್ಟು ಆಗುತ್ತೆ ಬಡ್ಡಿ ಗೊತ್ತಿದೆ ಏನು ಎಂದರು.

50 ಕೋಟಿ ರೂ.ಗೆ ಶೇ.1ರಷ್ಟು ಬಡ್ಡಿಯಾದರೂ ತಿಂಗಳಿಗೆ 50 ಲಕ್ಷ ಆಗುತ್ತೆ. ಇದಕ್ಕೆಲ್ಲಾ ಸುಮ್ಮನೆ ನಿಮಗೆ ನಮಸ್ಕಾರ ಮಾಡ್ಕೋತಾ, ಕಾಕಾರೋ, ಅಣ್ಣಾರೋ ಅನ್ಕೊಂತಿರುವ ಜಾಯಮಾನ ನನ್ನದಲ್ಲ. ₹50 ಲಕ್ಷ ತಿಂದುಂಡು ಆರಾಮ ಇರಬಹುದು.

ಯಾರ ಬಿಡೆ ಇಲ್ಲ, ಏನಿಲ್ಲ. 50 ಲಕ್ಷ ರೂ. ಪೈಕಿ 25 ಲಕ್ಷ ತಿಂಗಳ ದಾನ ಮಾಡಿಕೊಂಡು ಆರಾಮ ಇರುತ್ತೇನೆ. ನನಗೆ ಎಲೆಕ್ಷನ್​ನಲ್ಲಿ ಜನ ರೊಕ್ಕಾನೂ ಕೇಳಿಲ್ಲ. ನೀವೂ ಹೆಂಗೆಲ್ಲಾ ಆಯ್ಕೆ ಆಗಿ ಬರುತ್ತೀರಿ, ಬೈದುಕೊಂಡು ಅಂತಾ ನನ್ನ ದೋಸ್ತರೇ ನನಗೆ ಕೇಳುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ: ಮಾನ ಇದ್ದವರಿಗೆ ಮಾನನಷ್ಟ ಮೊಕದ್ದಮೆ ಹಾಕುತ್ತಾರೆ, ಇಲ್ಲದವರಿಗೆ ಏನು ಹಾಕಬೇಕು?: ಯತ್ನಾಳ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.