ETV Bharat / state

ಮುದ್ದೇಬಿಹಾಳದಲ್ಲಿ ಕೊರೊನಾ ವಾರಿಯರ್ಸ್​, ಪತ್ರಕರ್ತರಿಗೆ ಸನ್ಮಾನ.. - Greeting to Corona warioris in Muddebihal

ಕಾರ್ಯಕ್ರಮದಲ್ಲಿ ಕೊರೊನಾ ವಾರಿಯರ್ಸ್​ಗಳಾದ ವೈದ್ಯರು, ಆ್ಯಂಬುಲೆನ್ಸ್​ ಚಾಲಕರು ಹಾಗೂ ಪತ್ರಕರ್ತರನ್ನು ಸನ್ಮಾನಿಸಲಾಯಿತು.

ಮುದ್ದೇಬಿಹಾಳದಲ್ಲಿ ಕೊರೊನಾ ವಾರಿಯರ್ಸ್​, ಪತ್ರಕರ್ತರಿಗೆ ಸನ್ಮಾನ

author img

By

Published : Jun 1, 2020, 9:32 PM IST

ಮುದ್ದೇಬಿಹಾಳ (ವಿಜಯಪುರ) : ಪಟ್ಟಣದ ಸುಕಾಲಿ ಕಾಂಪ್ಲೆಕ್ಸ್​ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ನೇತೃತ್ವದಲ್ಲಿ ಸಂಘದ ರಾಜ್ಯಾಧ್ಯಕ್ಷ ಪಿ ಕೃಷ್ಣೇಗೌಡರ ಜನ್ಮದಿನದ ಹಿನ್ನೆಲೆ ಕೊರೊನಾ ವಾರಿಯರ್ಸ್​ಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕೊರೊನಾ ವಾರಿಯರ್ಸ್​ಗಳಾದ ವೈದ್ಯರು, ಆ್ಯಂಬುಲೆನ್ಸ್​ ಚಾಲಕರು ಹಾಗೂ ಪತ್ರಕರ್ತರನ್ನು ಸನ್ಮಾನಿಸಲಾಯಿತು.

ಕೊರೊನಾ ವಾರಿಯರ್ಸ್​, ಪತ್ರಕರ್ತರಿಗೆ ಸನ್ಮಾನ..

ಈ ವೇಳೆ ಮಾತನಾಡಿದ ಜಿಲ್ಲಾ ಪಂಚಾಯತ್‌ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಪತ್ರಕರ್ತರಾದವರು ತಮ್ಮ ಆತ್ಮಸಾಕ್ಷಿಗನುಗುಣವಾಗಿ ಕಾರ್ಯನಿರ್ವಹಿಸಬೇಕು. ಅವರಿಗೆ ಯಾರ ಸರ್ಟಿಫಿಕೇಟ್ ಬೇಕಾಗಿಲ್ಲ ಎಂದರು.

ಕುಂಟೋಜಿ ಹಿರೇಮಠದ ಚೆನ್ನವೀರ ದೇವರು ಮಾತನಾಡಿ, ಆತ್ಮನಿರ್ಭರ್​ ಭಾರತಕ್ಕೆ ನಾವೆಲ್ಲ ಕೈ ಜೋಡಿಸಬೇಕು. ಆರ್ಯುವೇದವನ್ನು ಮೈಗೂಡಿಸಿಕೊಳ್ಳಬೇಕು. ಆಯುರ್ವೇದದ ಮಾತ್ರೆ, ಔಷಧಿಗಳನ್ನು ಸೇವಿಸಬೇಕು. ಅಂದಾಗ ಭಾರತ ಮುನ್ನಡೆಯಲು ಸಾಧ್ಯವಾಗುತ್ತದೆ ಎಂದರು.

ಪತ್ರಕರ್ತ ಪುಂಡಲೀಕ ಮುರಾಳ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪತ್ರಕರ್ತರಿಗೆ ಸೌಲಭ್ಯ ನೀಡದೆ ಕಡೆಗಣಿಸುತ್ತಿದ್ದಾರೆ. ಮಾಧ್ಯಮರಂಗ ಬರೀ ಹೆಸರಿಗೆ ಮಾತ್ರ ಸಂವಿಧಾನದ 4ನೇ ರಂಗ ಎಂದಾಗಿದೆ. ಪತ್ರಕರ್ತರಿಗೂ ಜೀವ ವಿಮೆ ಒದಗಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

For All Latest Updates

TAGGED:

MUDDEBIHAL
ETV Bharat Logo

Copyright © 2025 Ushodaya Enterprises Pvt. Ltd., All Rights Reserved.