ವಿಜಯಪುರ: ಸರ್ಕಾರಿ ಕೆಲಸಗಾರರು ನಿವೃತ್ತಿಯಾದರೆ ಅಲ್ಲಿ ಯಾವುದೇ ಸಡಗರ ಸಂಭ್ರಮ ಇರೋದಿಲ್ಲ. ಆದರೆ, ಇಲ್ಲೋರ್ವರು ನಿವೃತ್ತಿಯಾದ ಹಿನ್ನೆಲೆ ಅದ್ಧೂರಿಯಾಗಿ ಅವರ ಸಹೋದ್ಯೋಗಿಗಳು ಬೀಳ್ಕೊಡುಗೆ ನೀಡಿದ್ದಾರೆ.
ನಿವೃತ್ತಿಗೊಂಡ ಸಾರಿಗೆ ನೌಕರನನ್ನು ಸಾರಿಗೆ ಅಧಿಕಾರಿ ಹಾಗೂ ಸಿಬ್ಬಂದಿ ವಿಶೇಷವಾಗಿ ಅಲಂಕಾರಗೊಂಡ ಬಸ್‌ನಲ್ಲಿ ಮನೆಯವರೆಗೆ ಕರೆದುಕೊಂಡು ಹೋಗಿ ಬೀಳ್ಕೊಡುಗೆ ನೀಡಿದ್ದಾರೆ.
ಮೂಲತಃ ಮಸಬಿನಾಳ ಗ್ರಾಮದವರಾದ ಹಾವಣ್ಣ ಎಸ್ ಗುದ್ದಿ ಎಂಬುವರು ಬಸವನ ಬಾಗೇವಾಡಿಯ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಸಾರಿಗೆ ನಿಯಂತ್ರಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅಕ್ಟೋಬರ್ 31 ರಂದು ಇವರ ಸೇವಾವಧಿ ಮುಗಿದಿತ್ತು. ನಿನ್ನೆ ಕರ್ನಾಟಕ ರಾಜ್ಯೋತ್ಸವ ಇದ್ದ ಹಿನ್ನೆಲೆಯಲ್ಲಿ ವಿಶೇಷವಾಗಿ ಅಲಂಕಾರಗೊಂಡ ಬಸ್‌ನಲ್ಲಿಯೇ ಅವರನ್ನು ಮನೆಯವರಿಗೆ ಬಿಟ್ಟು ಗೌರವ ಸಲ್ಲಿಸಿದ್ದಾರೆ.
ಇನ್ನು 33 ವರ್ಷ ಸೇವೆ ಸಲ್ಲಿಸಿದ ಹಾವಣ್ಣ ಅವರಿಗೆ ಸ್ಥಳದಲ್ಲಿಯೇ ಡಿಪೋ ವ್ಯವಸ್ಥಾಪಕ ವಿನಾಯಕ ಸಾಲಿಮಠ ಅವರು ಗ್ರ್ಯಾಚ್ಯುಯಿಟಿಯ ಮೊದಲ ಕಂತಿನ 2 ಲಕ್ಷ ರೂಗಳನ್ನು ನೀಡಿದ್ದಾರೆ.