ಮುದ್ದೇಬಿಹಾಳ: ಲಾಕ್‌ಡೌನ್‌ದಿಂದ ಬಂದ್ ಆಗಿದ್ದ ಹೋಟೆಲ್ ಉದ್ಯಮ ಸೋಮವಾರದಿಂದ ಆರಂಭಗೊಳ್ಳಲು ಸರ್ಕಾರ ಅನುಮತಿ ನೀಡಿದ ಬೆನ್ನಲ್ಲೇ ಹೋಟೆಲ್ ಉದ್ಯಮಿಗಳಲ್ಲಿ ಉತ್ಸಾಹ ಮೂಡಿದೆ.
ಪಟ್ಟಣದ ಪ್ರಮುಖ ದೊಡ್ಡ ದೊಡ್ಡ ಹೋಟೆಲ್ಗಳ ಮಾಲೀಕರು ಸೋಮವಾರ ಹೋಟೆಲ್ಗಳ ಆರಂಭಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳುತ್ತಿರುವ ದೃಶ್ಯಗಳು ಕಂಡು ಬಂದವು. ಪಟ್ಟಣದ ಮುಖ್ಯರಸ್ತೆಯಲ್ಲಿರುವ ಬಸವೇಶ್ವರ ವೃತ್ತದ ಸುತ್ತಮುತ್ತ ಹಾಗೂ ಬಸ್ ನಿಲ್ದಾಣದಲ್ಲಿರುವ ಹೋಟೆಲ್ಗಳ ಮಾಲೀಕರು ಶುಚಿತ್ವ ಕಾರ್ಯ ಕೈಗೊಂಡಿದ್ದು ಕಂಡು ಬಂತು.
ಸಂಕಷ್ಟದಲ್ಲಿದ್ದ ಕಾರ್ಮಿಕರು :
ಲಾಕ್‌ಡೌನ್ ಘೋಷಣೆ ಮಾಡಿದಾಗಿನಿಂದಲೂ ಹೋಟೆಲ್ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಅಲ್ಲದೇ ಮಾಲೀಕರು ಲಕ್ಷಾಂತರ ರೂಪಾಯಿ ಬಾಡಿಗೆ ಕಟ್ಟಬೇಕಾಗಿ ಬಂದಿತ್ತು. ಕೊನೆಗೂ ಮತ್ತೆ ಹೋಟೆಲ್ ಆರಂಭಕ್ಕೆ ಸರ್ಕಾರ ಅನುಮತಿ ನೀಡಿದ್ದು ಉದ್ಯಮಿಗಳಲ್ಲಿ ಖುಷಿ ತಂದಿದೆ.