ವಿಜಯಪುರ: 6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರದಿಂದ ಒಬ್ಬೊಬ್ಬರಾಗಿ ಮುಷ್ಕರ ಕೈ ಬಿಟ್ಟು ಕೆಲಸಕ್ಕೆ ಹಾಜರಾಗುತ್ತಿದ್ದಾರೆ.
ಬೆಳಗ್ಗೆ ಖಾಸಗಿ ವಾಹನಗಳು ಬಸ್ ನಿಲ್ದಾಣಕ್ಕೆ ಆಗಮಿಸಿ, ಪ್ರಯಾಣಿಕರಿಗೆ ಸೇವೆ ಒದಗಿಸಲು ಅವಕಾಶ ನೀಡಲಾಗಿತ್ತು. ಈಗ ಮಧ್ಯಾಹ್ನದೊಳಗೆ 245 ಚಾಲಕರು, ನಿರ್ವಾಹಕರು ಕರ್ತವ್ಯಕ್ಕೆ ಬಂದಿದ್ದಾರೆ ಎಂದು ಕೆಎಸ್ಆರ್ಟಿಸಿ ಡಿಸಿ ನಾರಾಯಣಪ್ಪ ಕುರುಬರ ಮಾಹಿತಿ ನೀಡಿದ್ದಾರೆ.
ಇಲ್ಲಿಯವರೆಗೆ ಸಾತಾರ, ಸಾಂಗ್ಲಿ, ಹುಣಸಗಿ, ರಾಯಚೂರ ಯಾದಗಿರಿ ಹಾಗೂ ಶ್ರೀಶೈಲಗೆ ತೆರಳುವ ವಾಹನಗಳು ಸೇವೆ ಆರಂಭಿಸಿವೆ.
ನಿನ್ನೆ ಹಾಗೂ ಇಂದು ಶ್ರೀಶೈಲ ಸೇರಿ ಇತರ ಕಡೆಗೆ ತೆರಳಿರುವ ಸಿಬ್ಬಂದಿ ಸೇರಿ ಇಲ್ಲಿವರೆಗೆ 245 ಸಿಬ್ಬಂದಿ ಕೆಲಸಕ್ಕೆ ಹಾಜರಾಗಿದ್ದಾರೆ. ಇಂದು ಮತ್ತೆ ಮಧ್ಯಾಹ್ನ 31 ಬಸ್ಗಳು ಕಾರ್ಯ ಆರಂಭಿಸಿವೆ ಎಂದು ತಿಳಿಸಿದ್ದಾರೆ.