ETV Bharat / state

ಕೈ ಇಲ್ಲದಿದ್ದರೇನಂತೆ... ಇತರರನ್ನು ನಾಚಿಸುವಂತಿದೆ ಈಕೆಯ ಬರವಣಿಗೆ...

ಅಕ್ಕಪಕ್ಕದ ಮಕ್ಕಳನ್ನು ನೋಡಿ ಕೈಗಳು ಇಲ್ಲ ಎನ್ನುವ ಕೊರಗು ಕಾಡಿತ್ತಾದರೂ, ತಂದೆಯ ಪ್ರೋತ್ಸಾಹ, ತಾಯಿಯ ಕಾಳಜಿ ದೇವಮ್ಮಗೆ ಪ್ರೇರಣೆ ನೀಡಿದೆಯಂತೆ. ಅದರಂತೆ ಬಾಲಕಿ ಕಾಲಿನಿಂದಲೇ ಬರೆಯುವುದನ್ನು ಶುರುಮಾಡಿ ಉತ್ತಮವಾಗಿ ಅಭ್ಯಾಸ ಮಾಡಿಕೊಂಡಿದ್ದಾಳೆ.

ಕಾಲಿನಲ್ಲೇ ಸ್ಪಷ್ಟ ಹಾಗೂ ಶುದ್ಧವಾಗಿ ಬರೆಯುವ ದೇವಮ್ಮ
author img

By

Published : Jun 19, 2019, 4:50 AM IST

ವಿಜಯಪುರ: ಎರಡು ಕೈ ಸರಿಯಾಗಿ ಇದ್ದವರೇ ಕೆಟ್ಟದಾಗಿ ಬರಹ ರೂಢಿಸಿಕೊಂಡಿರುವ ಈ ದಿನಗಳಲ್ಲಿ ಎರಡೂ ಕೈ ಇಲ್ಲದಿದ್ದರೂ ಬಲಗಾಲನ್ನೇ ಕೈಯಂತೆ ಬಳಸಿ ಸ್ಪಷ್ಟ ಹಾಗೂ ಶುದ್ಧ ಬರಹ ಬರೆಯವುದನ್ನು 14 ವರ್ಷದ ಬಾಲಕಿ ರೂಢಿಸಿಕೊಂಡಿದ್ದಾಳೆ.

ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ 14 ವರ್ಷದ ಬಾಲಕಿ ದೇವಮ್ಮ ಕಾಲಿನಲ್ಲಿಯೇ ಬರೆಯುವ ಮೂಲಕ ಸ್ಪೂರ್ತಿಯ ಚಿಲುಮೆಯಾಗಿದ್ದಾಳೆ. ಈಕೆ ಸ್ಥಳೀಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೆ ತರಗತಿ ಓದುತ್ತಿದ್ದು, ಈಕೆಯ ತಂದೆ ಮಲ್ಲಪ್ಪ ಹೊಸಮನಿ ಆಟೋ ಡ್ರೈವರ್ ಆಗಿದ್ದಾಳೆ. ಇವರ ಮೂವರು ಮಕ್ಕಳಲ್ಲಿ ದೇವಮ್ಮ 2ನೇ ಮಗಳು.

ಕಾಲಿನಲ್ಲೇ ಸ್ಪಷ್ಟ ಹಾಗೂ ಶುದ್ಧವಾಗಿ ಬರೆಯುವ ದೇವಮ್ಮ

ಎರಡು ಕೈ ಇಲ್ಲದೇ ಜನಿಸಿದ ಈಕೆಯನ್ನು ಆಕೆಯ ತಂದೆ-ತಾಯಿ ಬಹು ಕಾಳಜಿಯಿಂದ ನೋಡಿಕೊಂಡಿದ್ದರಿಂದ ಆಕೆ ಸ್ವಾವಲಂಬಿಯಾಗುವತ್ತ ದಾಪುಗಾಲು ಹಾಕುತ್ತಿದ್ದಾಳೆ. ಬಲಗಾಲಿನ ಹೆಬ್ಬೆರಳು ಮತ್ತು ಎರಡನೇ ಬೆರಳಿನ ಮಧ್ಯೆ ಪೆನ್ ಹಿಡಿದು ಬರೆಯುತ್ತಾಳೆ. ಶಾಲೆಯಲ್ಲಿ ಸಾಮಾನ್ಯ ವಿದ್ಯಾರ್ಥಿಗಳಿಗಿಂತ ಹೆಚ್ಚು ಪ್ರತಿಭಾವಂತಳಾಗಿರುವ ದೇವಮ್ಮಗೆ ಹುಟ್ಟಿದಾಗಿನಿಂದಲೂ ಎರಡು ಕೈಗಳಿಲ್ಲ. ಆದರೆ ಆಕೆಯ ಆತ್ಮಸ್ಥೈರ್ಯ ಮಾತ್ರ ಇಮ್ಮಡಿಯಾಗಿದೆ.

ಈಕೆಗೆ ಮನೆಯ ಅಕ್ಕಪಕ್ಕದ ಮಕ್ಕಳನ್ನು ನೋಡಿ ಕೈಗಳು ಇಲ್ಲ ಎನ್ನುವ ಕೊರಗು ಕಾಡಿತ್ತಾದರೂ, ತಂದೆಯ ಪ್ರೋತ್ಸಾಹ, ತಾಯಿಯ ಕಾಳಜಿ ಆಕೆಗೆ ಪ್ರೇರಣೆ ನೀಡಿದೆಯಂತೆ. ಅದರಂತೆ ಬಾಲಕಿ ಕಾಲಿನಿಂದಲೇ ಬರೆಯುವುದನ್ನು ಶುರು ಮಾಡಿಕೊಂಡಿದ್ದಾಳೆ. ಅಲ್ಲದೇ ದೇವಮ್ಮ ಕೆಲವು ಚಟುವಟಿಕೆಗಳನ್ನು ಹೊರತುಪಡಿಸಿ ಬಹುತೇಕ ಸ್ವಾವಲಂಬಿಯಾಗಿ ಜೀವಿಸುತ್ತಿದ್ದಾಳೆ.

Intro:File name: handicape student
Formate: av
Reporter: Suraj Risaldar
Place: vijaypur
Date: 18-06-2019

ಸ್ಲಗ್:

Anchor: ಎರಡು ಕೈ ಸರಿಯಾಗಿ ಇದ್ದವರೆ ಕೆಟ್ಟದಾಗಿ ಬರಹ ರೂಢಿಸಿಕೊಂಡಿರುವ ಈ ದಿನಗಳಲ್ಲಿ ಎರಡೂ ಕೈ ಇಲ್ಲದಿದ್ದರೂ ಬಲಗಾಲವನ್ನೆ ಕೈಯಂತೆ ಬಳಸಿ ಸ್ಪಷ್ಟ ಶುದ್ಧ ಬರಹ ಬರೆಯವುದನ್ನು 14 ವರ್ಷದ ಬಾಲಕಿ ರೂಢಿಸಿಕೊಂಡಿದ್ದಾಳೆ. Body:ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ 14 ವರ್ಷದ ಬಾಲಕಿ ದೇವಮ್ಮ ಈ ರೀತಿ ಬರೆದು ಸ್ಪೂರ್ತಿಯ ಚಿಲುಮೆಯಾಗಿದ್ದಾಳೆ. ಸ್ಥಳೀಯ ಪ್ರಾಥಮಿಕ ಶಾಲೆ ಯಲ್ಲಿ ನಾಲ್ಕನೆ ತರಗತಿ ಓದುತ್ತಿದ್ದಾಳೆ. ತಡವಾಗಿ‌ ಶಾಲೆಗೆ ಸೇರಿಸಿದ್ದರಿಂದ ತರಗತಿಯಲ್ಲಿ ಹಿಂದಿದ್ದಾಳೆ. ವೃತ್ತಿಯಿಂದ ಆಟೋ ಡ್ರಾವರ್ ಆಗಿರುವ ಈಕೆಯ ತಂದೆ ಮಲ್ಲಪ್ಪ ಹೊಸಮನಿಗೆ ಮೂವರು ಮಕ್ಕಳು ಇವರಲ್ಲಿ ದೇವಮ್ಮ 2ನೇಯವಳು. ಎರಡು ಕೈ ಇಲ್ಲದೇ ಜನಿಸಿದ ಈಕೆಯನ್ನು ಆಕೆಯ ತಂದೆ ತಾಯಿ ಬಹು ಕಾಳಜಿಯಿಂದ ನೋಡಿಕೊಂಡಿದ್ದರಿಂದ ಆಕೆ ಸ್ವಾವಲಂಬಿಯಾಗುವತ್ತ ದಾಪುಗಾಲ ಹಾಕುತ್ತಿದ್ದಾಳೆ. ಬಲಗಾಲಿನ ಹೆಬ್ಬೆರಳು ಮತ್ತು ಎರಡನೇ ಬರಳಿನ ಮಧ್ಯ ಪೆನ್ ಹಿಡಿದು ಬರೆಯುತ್ತಾಳೆ...

ಶಾಲೆಯಲ್ಲಿ ಸಾಮಾನ್ಯ ವಿದ್ಯಾರ್ಥಿಗಳಿಗಿಂತ ಹೆಚ್ಚು ಪ್ರತಿಭಾವಂತಳಾಗಿರುವ ದೇವಮ್ಮಗೆ ಹುಟ್ಟಿದಾಗಿನಿಂದಲೂ ಎರಡು ಕೈಗಳು ಇಲ್ಲ. ಆದರೆ ಆಕೆಯ ಮನೆಯ ಅಕ್ಕಪಕ್ಕದ ಮಕ್ಕಳನ್ನು ನೋಡಿದ ಮೇಲೆ ತನಗೆ ಕೈಗಳೆ ಇಲ್ಲ ಎನ್ನುವ ಕೊರಗು ಕಾಡಿತು. ತಂದೆಯ ಪ್ರೋತ್ಸಾಹ , ತಾಯಿಯ ಕಾಳಜಿ ಆಕೆಗೆ ಪ್ರೇರಣೆ ನೀಡಿತು. ಅದರಂತೆ ಬಾಲಕಿ ಕಾಲಿನಿಂದಲೇ ಬರೆಯುವುದು ಶುರು ಮಾಡಿಕೊಂಡಳು.

ಅಂಗನವಾಡಿ , ಕಿರಿಯ ಪ್ರಾಥಮಿಕ ಶಾಲೆಯ ಮೊದಲ ವರ್ಷಗಳೆಲೆಲ್ಲ ಸಹಪಾಠಿಗಳು ಆಕೆಯನ್ನು ವಿಚಿತ್ರವಾಗಿ ನೋಡಿಕೊಳ್ಳುತ್ತಿದ್ದರು. ಬರಬರುತ್ತ ಆಕೆಯ ಪರಿಸ್ಥಿತಿಗೆ ಕಿಚಾಯಿಸದೆ ಸಹಾನುಭೂತಿಯಿಂದ ಸಾಧ್ಯವಿರುವ ಎಲ್ಲಾ ಸಹಾಯ, ಸಹಕಾರ ನೀಡಿದರು. ಶಿಕ್ಷಕರು ಸಹ ಆಕೆಯನ್ನು ಮೂದಲಿಸದೆ ಪ್ರೋತ್ಸಾಹೀಸಿದರು. ಪರಿಣಾಮ ಆಕೆ ಎಲ್ಲರಂತೆ ಬರೆಯುವುದು, ಓದುವುದು, ಪ್ರಶ್ನೆಗಳಿಗೆ ಉತ್ತರಿಸುವದನ್ನು ರೂಢಿಸಿಕೊಳ್ಳುತ್ತಿದ್ದಾಳೆ.
Conclusion:ದೇವಮ್ಮ ಕೆಲವು ಚಟುವಟಿಕೆಗಳನ್ನು ಹೊರತು ಪಡಿಸಿ ಬಹುತೇಕ ಪರಾವಲಂಬಿಯಾಗಿ ಆಗಿದ್ದಾಳೆ. ಮನುಷ್ಯನ ಕೆಲವು ಮಹತ್ವದ ಚಟುವಟಿಕೆಗಳಿಗೆ ಅತ್ಯವಶ್ಯಕ ದೇವಮ್ಮ ಮಾತ್ರ ತನಗೆ ಸಾಧ್ಯವಿರುವ ಕೆಲಸಗಳನ್ನು ತಾನೆ ಮಾಡಿಕೊಳ್ಳುತ್ತಿದ್ದಾಳೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.