ವಿಜಯಪುರ: ಆರೋಗ್ಯ ಬಂಧು ಯೋಜನೆಯಡಿ ಸರ್ಕಾರಿ ಆಸ್ಪತ್ರೆಗಳ ನಿರ್ವಹಣೆಯ ಜವಾಬ್ದಾರಿಯನ್ನು, ಖಾಸಗಿ ಸಂಘ-ಸಂಸ್ಥೆಗಳಿಗೆ ನೀಡಿರುವುದು ಜಿಲ್ಲಾ ಪಂಚಾಯತ್ ಸದಸ್ಯರನ್ನು ಕೆರಳಿಸಿದೆ. ಈ ಕ್ರಮದ ಕುರಿತು ಜಿಲ್ಲಾ ಪಂಚಾಯತ್ 16ನೇ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಇದರಲ್ಲಿ ₹ 1.43 ಕೋಟಿ ಅವ್ಯವಹಾರ ನಡೆದಿದೆ ಎನ್ನಲಾಗ್ತಿದೆ. ಈ ಬಗ್ಗೆ ತನಿಖೆ ನಡೆಸಲು, ಎಸಿಬಿಗೆ ವಹಿಸಿ ಎಂದು ಜಿ.ಪಂ. ಸದಸ್ಯರು ಒತ್ತಾಯಿಸಿದರು. ಆದ್ರೆ ಸದಸ್ಯರ ಮನವಿಗೆ ಅಧ್ಯಕ್ಷ ಶಿವಯೋಗಿ ನೇದಲಗಿ ಅನುಮತಿ ನೀಡಲಿಲ್ಲ. ಇದರಿಂದ ಬೇಸತ್ತ ಸದಸ್ಯರೊಬ್ಬರು ಸಭಾತ್ಯಾಗ ಮಾಡಿದರು.
ಗ್ರಾಮೀಣ ಜನತೆಗೆ ಉತ್ತಮ ಆರೋಗ್ಯ ಸಿಗಬೇಕು. ಅದನ್ನು ಸರ್ಕಾರ ನಿರ್ವಹಿಸಬೇಕು. ಅದು ಬಿಟ್ಟು, ಖಾಸಗಿ ಸಂಘ-ಸಂಸ್ಥೆಗಳಿಗೆ ನೀಡಿದ್ದನ್ನು ರದ್ದುಗೊಳಿಸಬೇಕೆಂದು ಸದಸ್ಯರು ಒತ್ತಾಯಿಸಿದರು. ಇದರಿಂದಾಗಿ ಕೆಲಕಾಲ ಸಭೆಯಲ್ಲಿ ಗದ್ದಲ ಉಂಟಾಗಿತ್ತು.