ETV Bharat / state

ವಿಜಯಪುರ: ಗಾಂಧಿ ಗ್ರಾಮ ಪುರಸ್ಕಾರಕ್ಕೆ 12 ಗ್ರಾಮ ಆಯ್ಕೆ

ಪ್ರತಿ ವರ್ಷ ‌ಗಾಂಧೀ ಜಯಂತಿ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರತಿ ತಾಲೂಕಿನ ಒಂದು ಗ್ರಾಮಕ್ಕೆ ನೀಡುವ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಈ ಬಾರಿ ಜಿಲ್ಲೆಯಿಂದ 12 ಗ್ರಾಮಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ.

vjp
vjp
author img

By

Published : Sep 30, 2020, 7:49 PM IST

ವಿಜಯಪುರ: ಕೊರೊನಾ ಭೀತಿ ಗಾಂಧಿ ಗ್ರಾಮ ಪುರಸ್ಕಾರಕ್ಕೂ ತಟ್ಟಿದೆ. ಪ್ರತಿ ವರ್ಷ ‌ಗಾಂಧೀ ಜಯಂತಿ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರತಿ ತಾಲೂಕಿನ ಒಂದು ಗ್ರಾಮಕ್ಕೆ ನೀಡುವ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಈ ಬಾರಿ ಜಿಲ್ಲೆಯಿಂದ 12 ಗ್ರಾಮಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ.

ಆಯ್ಕೆಯಾದ ಗ್ರಾ.ಪಂ.ಗಳು:

ವಿಜಯಪುರ-ಹಿಟ್ನಳ್ಳಿ , ತಿಕೋಟಾ-ಬಿಜ್ಜರಗಿ, ಬಬಲೇಶ್ವರ-ನಿಡೋಣಿ, ಬ.ಬಾಗೇವಾಡಿ- ಕುದುರೆ ಸಾಲವಾಡಗಿ, ಚಡಚಣ- ಬರಡೋಲ, ತಾಳಿಕೋಟೆ- ಬ.ಸಾಲವಾಡಗಿ, ಮುದ್ದೇಬಿಹಾಳ-ರೂಡಗಿ, ನಿಡಗುಂದಿ-ಬೇನಾಳ ಆರ್.ಸಿ, ಕೊಲ್ಹಾರ-ಕೂಡಗಿ, ಸಿಂದಗಿ- ಚಾಂದಕವಟೆ, ದೇವರ ಹಿಪ್ಪರಗಿ- ಕೊಂಡಗೂಳಿ, ಇಂಡಿ- ಚೌಡಿಹಾಳ ಗ್ರಾಪಂಗಳು ಗಾಂಧಿಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿವೆ.

ಪಾರಿತೋಷಕ ಮಾತ್ರ:
ಪ್ರತಿ ವರ್ಷ ಗಾಂಧಿ ಜಯಂತಿ ನಿಮಿತ್ತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅ.2ರಂದು ಗಾಂಧಿಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ ಗ್ರಾ.ಪಂ.ಗೆ ಸರ್ಕಾರದಿಂದ 5 ಲಕ್ಷ ರೂ. ಬಹುಮಾನ ಹಾಗೂ ಪಾರಿತೋಷಕ ನೀಡಿ ಗೌರವಿಸುತ್ತದೆ.

ಆದರೆ ಈ ಬಾರಿ ಕರೊನಾ ಮಹಾಮಾರಿಯಿಂದಾಗಿ ಆರ್ಥಿಕತೆಗೆ ಹೊಡೆತ ಬಿದ್ದಿರುವ ಕಾರಣ ಈ ವರ್ಷ ಬಹುಮಾನ ನೀಡುವ ಬಗ್ಗೆ ಸರ್ಕಾರದಿಂದ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಬಂದಿಲ್ಲ. ಸರಳವಾಗಿ ಪಾರಿತೋಷಕ ಮಾತ್ರ ವಿತರಿಸುವ ಸಾಧ್ಯತೆಗಳು ಹೆಚ್ಚಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.