ವಿಜಯಪುರ: ಸಾರ್ವಜನಿಕರಿಗಾಗಿ ಉಚಿತ ಕಣ್ಣಿನ ತಪಾಸಣೆ ಹಾಗೂ ಕಣ್ಣಿನ ಶಸ್ತ್ರ ಚಿಕಿತ್ಸೆ ಯನ್ನು ಅನುಗ್ರಹ ಆಸ್ಪತ್ರೆಯ ವೈದ್ಯಕೀಯ ತಂಡ ನಗರದ ಜ್ಞಾನ ಯೋಗಾಶ್ರಮದಲ್ಲಿ ಹಮ್ಮಿಕೊಂಡಿದ್ದರು.
ಡಾ.ಪ್ರಭುಗೌಡಾ ಬಿ ಎಲ್ ನೇತೃತ್ವದಲ್ಲಿ ಕಣ್ಣಿನ ತಪಾಸಣಾ ಶಿಬಿರ ಆಯೋಜಿಸಿದ್ದು, 200ಕ್ಕೂ ಅಧಿಕ ಜನರು ಬಂದು ಕಣ್ಣಿನ ತಪಾಸಣೆ ಮಾಡಿಸಿಕೊಂಡಿದ್ದಾರೆ. ಈ ಶಿಬಿರದಲ್ಲಿ 30 ಜನರಿಗೆ ತೀವ್ರ ಕಣ್ಣಿನ ಸಮಸ್ಯೆ ಇದ್ದು, ಉಚಿತ ನೇತ್ರ ಶಸ್ತ್ರಚಿಕಿತ್ಸೆ ಕೂಡ ಮಾಡಲಿದ್ದೇವೆ ಎಂದು ವೈದ್ಯರ ತಂಡ ತಿಳಿಸಿದೆ.
ತಪಾಸಣ ವಾಹನದಲ್ಲಿ 10 ವೈದ್ಯರ ತಂಡ ಸಕ್ರೀಯರಾಗಿದ್ದು, ಬಂದಿದ್ದ ಎಲ್ಲಾ ಜನರ ನೇತ್ರ ತಪಾಸಣೆ ಸಂಪೂರ್ಣಗೊಳಿಸಿದರು. ಶಿಬಿರಕ್ಕೆ ಬಂದ ಸಾರ್ವಜನಿಕರಿಗೆ ಊಟದ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು.