ವಿಜಯಪುರ : ಜಿಲ್ಲಾ ಪಂಚಾಯತ್‌ನ ನಾಲ್ಕು ಬಿಜೆಪಿ ಸದಸ್ಯರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್ ಎಸ್ ಪಾಟೀಲ್ ಕೂಚಬಾಳ ಆದೇಶ ಹೊರಡಿಸಿದ್ದಾರೆ.
ಫೇಸ್‌ಬುಕ್‌ನಲ್ಲಿ ಈ ಕುರಿತು ಅವರು ಮಾಹಿತಿ ನೀಡಿದ್ದಾರೆ. ನಿನ್ನೆ ನಡೆದ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಮತ ಚಲಾಯಿಸಿದ್ದ ನಾಲ್ಕು ಜನ ಸದಸ್ಯರನ್ನು ಪಕ್ಷದಿಂದ 6 ವರ್ಷ ಉಚ್ಛಾಟಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.
ಜಿಪಂ ಸದಸ್ಯರಾದ ಮಹಾಂತಗೌಡ ಪಾಟೀಲ್(ಯಂಕಂಚಿ), ಬಿಂದುರಾಯಗೌಡ ಬಿರಾದಾರ(ಮೋರಟಗಿ), ಕಲ್ಲಪ್ಪ ಮಟ್ಟಿ (ಇಂಗಳೇಶ್ವರ), ಜ್ಯೋತಿ ಅಸ್ಕಿ(ಕೊಣ್ಣೂರು) ಉಚ್ಛಾಟನೆಯಾದವರು.
ಆರು ವರ್ಷಗಳ ಕಾಲ ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಇವರನ್ನೆಲ್ಲ ಉಚ್ಛಾಟನೆ ಮಾಡಲಾಗಿದೆ. ಕಾನೂನು ಕ್ರಮ ಕೂಡ ಕೈಗೊಳ್ಳಲಾಗುವುದು ಎಂದು ಫೇಸ್‌ಬುಕ್‌ನಲ್ಲಿ ಆರ್ ಎಸ್ ಪಾಟೀಲ್ ಕೂಚಬಾಳ ಮಾಹಿತಿ ಹಂಚಿಕೊಂಡಿದ್ದಾರೆ.