ETV Bharat / state

ವಿಜಯಪುರ ಪೊಲೀಸರ ಭರ್ಜರಿ‌ ಕಾರ್ಯಾಚರಣೆ: ಕಳ್ಳತನ ಪ್ರಕರಣಗಳ ನಾಲ್ವರು ಆರೋಪಿಗಳ ಬಂಧನ

ಎರಡು ಪ್ರತ್ಯೇಕ ಕಳ್ಳತನ ಪ್ರಕರಣ ಭೇದಿಸಿರುವ ಗೋಲಗುಮ್ಮಟ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

four arrested in two different robbery cases

author img

By

Published : Apr 15, 2021, 4:28 PM IST

ವಿಜಯಪುರ: ಪ್ರತ್ಯೇಕ ಎರಡು ಕಳ್ಳತನ ಪ್ರಕರಣ ಭೇದಿಸಿರುವ ಗೋಲಗುಮ್ಮಟ ಪೊಲೀಸರು, ಆರೋಪಿಗಳಿಂದ 14.75 ಲಕ್ಷ ರೂ. ಮೌಲ್ಯದ ಲಾರಿ ಹಾಗೂ ಬೈಕ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ವಿಜಯಪುರದಲ್ಲಿ ಕಳ್ಳತನ ಪ್ರಕರಣಗಳ ನಾಲ್ವರು ಆರೋಪಿಗಳ ಬಂಧನ

ಮೊದಲ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆಸಾರಗಲ್ಲಿ ನಿವಾಸಿ ಮಹಿಬೂಬ ಹುಸೇನ್ ಹವಾಲ್ದಾರ ಹಾಗೂ ಬಸವೇಶ್ವರ ಕಾಲೋನಿಯ ನಿವಾಸಿ‌ ಮೊಹಮ್ಮದ ಆಸೀಫ್ ಶೇಖ್ ಎಂಬುವರಿಂದ ಎರಡು ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ. ಬಡಿಕಮಾನ ರಸ್ತೆಯಲ್ಲಿ ಲಾರಿ ಕಳ್ಳತನವಾದ ಬಗ್ಗೆ ವರದಿಯಾಗಿತ್ತು. ರಾತ್ರಿ ಗಸ್ತು ತಿರುಗುತ್ತಿದ್ದಾಗ ಅನುಮಾನಾಸ್ಪದವಾಗಿ ಲಾರಿ ನಿಂತಿತ್ತು. ಆರೋಪಿಗಳನ್ನು ಠಾಣೆಗೆ ಕರೆ ತಂದು ವಿಚಾರಣೆಗೆ ಒಳಪಡಿಸಿದಾಗ ಲಾರಿ ಕಳ್ಳತನ ಮಾಡಿದ್ದು ಒಪ್ಪಿಕೊಂಡರು. ಇದರ ಜತೆಗೆ ಈ ಹಿಂದೆ ಕಳ್ಳತನವಾಗಿದ್ದ ಲಾರಿಯನ್ನು ಸಹ ವಶಪಡಿಸಿಕೊಂಡಿದ್ದಾರೆ. ಇದರ ಬೆಲೆ ಸುಮಾರು 7.25 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.

four arrested in two different robbery cases
ವಶಪಡಿಸಿಕೊಂಡ ಲಾರಿ ಹಾಗೂ ಬೈಕ್​ಗಳು

ಇನ್ನೊಂದು ಪ್ರಕರಣದಲ್ಲಿಯೂ ಸಹ ಗೋಲಗುಮ್ಮಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೈಕ್​ಗಳು ಕಳ್ಳತನವಾದ ದೂರು ಕೇಳಿ ಬಂದಿತ್ತು. ಪೊಲೀಸರು ಗಸ್ತು ತಿರುಗುವಾಗ ಚಡಚಣದ ನಿವರಗಿ ಗ್ರಾಮದ ಗಾಂಧಿ ಸದಾಶಿವ ಎಮ್ಮೆ ಹಾಗೂ ಅದೇ ಗ್ರಾಮದ ಗಂಗಾಧರ ತುಕಾರಾಮ ಬಗಲಿಯನ್ನು ಬಂಧಿಸಿ ಅವರಿಂದ 13 ಬೈಕ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಬೆಲೆ ಸುಮಾರು 7.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಪೊಲೀಸರ ಕಾರ್ಯಕ್ಕೆ ಎಸ್​ಪಿ ಅನುಪಮ್ ಅಗರವಾಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.