ವಿಜಯಪುರ: ವಿಧಾನ ಪರಿಷತ್ ಸದಸ್ಯ ನಾಸೀರ್ ಅಹ್ಮದ್ ನೀಡಿದ 3,000 ಮಾಸ್ಕ್ಗಳನ್ನ ಮಾಜಿ ಸಚಿವ ಸಿ.ಎಸ್.ನಾಡಗೌಡ ಅಪ್ಪಾಜಿ ಆರೋಗ್ಯ, ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಿದರು.
ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಜೀವ ಒತ್ತೆ ಇಟ್ಟು ದುಡಿಯುತ್ತಿರುವ ಪೊಲೀಸರು, ವೈದ್ಯರಿಗೆ ಮಾಜಿ ಸಚಿವ ನಾಡಗೌಡರು ಕೈ ಮುಗಿದು ಅಭಿನಂದನೆ ಹೇಳಿದರು.
ಈ ವೇಳೆ ಪಕ್ಷದ ಮುಖಂಡರಾದ ಎಸ್.ಜಿ.ಪಾಟೀಲ ಶೃಂಗಾರಗೌಡ್ರು, ಎಪಿಎಂಸಿ ಅಧ್ಯಕ್ಷ ಗುರು ತಾರನಾಳ, ಪುರಸಭೆ ಸದಸ್ಯ ಮೆಹಿಬೂಬ ಗೊಳಸಂಗಿ, ಮುಖಂಡ ಚಿನ್ನು ನಾಡಗೌಡ, ಮಾಜಿ ಸದಸ್ಯ ಹೆಚ್.ಬಿ.ಸಾಲಿಮನಿ, ಕಾಂಗ್ರೆಸ್‌ನ ಯುವ ಘಟಕದ ಅಧ್ಯಕ್ಷ ಮಹ್ಮದ್ ರಫೀಕ್ ಶಿರೋಳ ಉಪಸ್ಥಿತರಿದ್ದರು.