ವಿಜಯಪುರ: ಜೆಡಿಎಸ್ ಮುಖಂಡ ಹೆಚ್.ಡಿ.ರೇವಣ್ಣ ವಿರುದ್ಧ ಮಾಜಿ ಸಚಿವ ಶಿವಾನಂದ ಪಾಟೀಲ್ ಅಸಮಾಮಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಜೆಡಿಎಸ್ ನಾಯಕರು ಬಿಜೆಪಿಗೆ ಬಾಹ್ಯ ಬೆಂಬಲ ನೀಡಿದರೆ ಆಶ್ಚರ್ಯ ಪಡುವ ಅವಶ್ಯಕತೆ ಇಲ್ಲ. ರೇವಣ್ಣ ಸರಿಯಾದ ಸಹಕಾರ ನೀಡದ ಕಾರಣ ಸರ್ಕಾರಕ್ಕೆ ಈ ರೀತಿಯಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಸರಿಯಾದ ರೀತಿಯಲ್ಲಿ ಸಭೆ ಮಾಡಲಿಲ್ಲ. ನಮ್ಮ ನಾಯಕರೂ ಇದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈ ಕಾರಣಕ್ಕೆ ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯ ಕೊರತೆ ಎದ್ದು ಕಂಡು ಸರಿಯಾಗಿ ಸರ್ಕಾರ ನಡೆಯದ ಕಾರಣ ಈ ಸ್ಥಿತಿಗೆ ಕಾರಣವಾಯಿತು ಎಂದರು.
ರೇವಣ್ಣ ನನ್ನ ಇಲಾಖೆಯಲ್ಲೂ ಕೈ ಹಾಕಿದ್ದಾರೆ. ಇದು ಸಾಕಷ್ಟು ನೋವು ತಂದಿದೆ. ನಾನು ಈ ಬಗ್ಗೆ ನಮ್ಮ ನಾಯಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ. ನನಗೂ ರೇವಣ್ಣ ವಿರುದ್ಧ ಅಸಮಾಧಾನ ಇದೆ. ಕೆಎಂಎಫ್ ಅಧ್ಯಕ್ಷ ಸ್ಥಾನ ನಮ್ಮ ಪಕ್ಷಕ್ಕೆ ನೀಡಬೇಕು ಎಂದು ಹಿರಿಯ ನಾಯಕರು ಒಪ್ಪಂದ ಮಾಡಿಕೊಂಡಿದ್ದರು. ಆದ್ರೆ ಇದೀಗ ರೇವಣ್ಣ ಅವರು ಈ ರೀತಿ ಮಾಡುವುದು ತಪ್ಪು ಎಂದರು.