ವಿಜಯಪುರ: ಹೊಲದಲ್ಲಿದ್ದ ಅಂದಾಜು 80 ಕ್ವಿಂಟಾಲ್ ಕಡಲೆ ಬೆಳೆ ಬೆಂಕಿಗಾಹುತಿಯಾದ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದಲ್ಲಿ ಕಳೆದ ಮಧ್ಯರಾತ್ರಿ ನಡೆದಿದೆ.
ಮುಳವಾಡ ಗ್ರಾಮದ ರೈತ ಸಂಗಪ್ಪ ತೋಟದ ಅವರಿಗೆ ಸೇರಿದ ಜಮೀನಿನಲ್ಲಿ ಈ ಘಟನೆ ನಡೆದಿದೆ. ಸುಮಾರು 12 ಎಕರೆಯಲ್ಲಿ ಅಂದಾಜು 5 ಲಕ್ಷ ರೂ. ಮೌಲ್ಯದ ಕಡಲೆ ಬೆಳೆ ಅಗ್ನಿಗಾಹುತಿಯಾಗಿದೆ. ಬೆಳೆ ಹಾನಿಯಿಂದ ರೈತ ಸಂಗಪ್ಪ ತೋಟದ ಕಂಗಾಲಾಗಿದ್ದಾರೆ.
ಈ ಸುದ್ದಿಯನ್ನೂ ಓದಿ: ಮೆಕ್ಕೆಜೋಳದ ರಾಶಿಗೆ ಬೆಂಕಿಯಿಟ್ಟ ಕಿಡಿಗೇಡಿಗಳು : ಲಕ್ಷಾಂತರ ರೂ. ನಷ್ಟ
ಸಾಲ ಮಾಡಿ ಕಡಲೆ ಬೆಳೆ ಬೆಳೆದಿದ್ದರು. ರಾಶಿ ಮಾಡಲೆಂದು ಕಡಲೆ ಒಟ್ಟು ಕೂಡಿಸಿದ್ದರು. ಆದ್ರೀಗ ಉದ್ದೇಶಪೂರ್ವಕವಾಗಿ ಕಡಲೆ ಬೆಳೆಗೆ ದುರ್ಷ್ಕಮಿಗಳು ಬೆಂಕಿ ಹಚ್ಚಿರಬಹುದು ಎಂದು ರೈತ ಸಂಗಪ್ಪ ಸಂಶಯ ವ್ಯಕ್ತಪಡಿಸಿದ್ದಾರೆ. ನಾಲ್ಕೈದು ವರ್ಷಗಳಿಂದ ತನ್ನ ಬೆಳೆಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಲ್ಲದೆ, ಜಮೀನಿನಲ್ಲಿದ್ದ ಕೃಷಿ ಉಪಕರಣಗಳನ್ನು ಕಳ್ಳತನ ಮಾಡಿದ್ದಾರೆಂದು ರೈತ ಸಂಗಪ್ಪ ತೋಟದ ಆರೋಪಿಸಿದ್ದಾರೆ. ಸದ್ಯ ಈ ಕುರಿತು ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.