ETV Bharat / state

ಬಂಗಾರದ ಅಂಗಡಿಗೆ ಬೆಂಕಿ: ಲಕ್ಷಾಂತರ ರೂ. ನಗದು, ಚಿನ್ನಾಭರಣ ಹೊರತಂದ ಮಾಜಿ ಸೈನಿಕ - ಬಂಗಾರದ ಅಂಗಡಿಗೆ ಬೆಂಕಿ

ಬೆಂಕಿ ಹೊತ್ತಿಕೊಂಡಿದ್ದ ಬಂಗಾರದ ಅಂಗಡಿಯಲ್ಲಿನ ನಗದು ಹಣ, ಚಿನ್ನಾಭರಣದ ಹೊರತಂದು ಮಾಜಿ ಸೈನಿಕರೊಬ್ಬರು ಸಾಹಸ ಮೆರೆದಿದ್ದಾರೆ.

ಬಂಗಾರದ ಅಂಗಡಿಗೆ ಬೆಂಕಿ
ಬಂಗಾರದ ಅಂಗಡಿಗೆ ಬೆಂಕಿ
author img

By

Published : Jun 11, 2022, 8:12 AM IST

ವಿಜಯಪುರ: ಜಿಲ್ಲೆಯ ಕೊಲ್ಹಾರ ಪಟ್ಟಣದ ಸ್ವಾಮಿ ವಿವೇಕಾನಂದ ಸರ್ಕಲ್ ಹತ್ತಿರದ ಬಂಗಾರದ ಅಂಗಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು, ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕರಕಲಾದ ಘಟನೆ ನಡೆದಿದೆ.

ಮೌನೇಶ ಬಡಿಗೇರ ಎಂಬುವರಿಗೆ ಸೇರಿದ ಬಂಗಾರದ ಅಂಗಡಿಯಲ್ಲಿ ಗ್ಯಾಸ್ ಚಿಮಣಿಯಿಂದ ಬೆಂಕಿ ಹೊತ್ತಿಕೊಂಡಿತ್ತು. ಈ ವೇಳೆ, ಮಾಜಿ ಸೈನಿಕ ಸದಾಶಿವ ಗಣಿ ಎಂಬುವವರು ಸಾಹಸ‌ ಮೆರೆದು, ಅಂಗಡಿಯಲ್ಲಿನ ಲಕ್ಷಾಂತರ ರೂ. ನಗದು ಹಾಗೂ ಕೆಲ ಚಿನ್ನಾಭರಣ ಹೊರತಂದಿದ್ದಾರೆ.

ಮಾಜಿ ಸೈನಿಕನ ಸಾಹಸಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

(ಇದನ್ನೂ ಓದಿ: ಪ್ಲಾಸ್ಟಿಕ್​ ಗೋದಾಮಿಗೆ ಹೊತ್ತಿಕೊಂಡ ಭಾರಿ ಬೆಂಕಿ: ನಾಲ್ವರು ಸಿಲುಕಿರುವ ಶಂಕೆ, ಮುಂದುವರಿದ ರಕ್ಷಣಾ ಕಾರ್ಯಾಚರಣೆ)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.