ವಿಜಯಪುರ: ಎಲ್ಐಸಿ ಹಣಕ್ಕಾಗಿ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ಪ್ರಕರಣ ಮುದ್ದೇಬಿಹಾಳ ತಾಲೂಕಿನ ಸರೂರ ತಾಂಡಾದಲ್ಲಿ ನಡೆದಿದೆ.
ಸರೂರ ತಾಂಡಾದ ನಿವಾಸಿ ಲಕ್ಷ್ಮೀ ಮೋತಿಲಾಲ ಲಮಾಣಿ ಹಲ್ಲೆಗೊಳಗಾಗಿರುವ ಮಹಿಳೆ. ಬೈಕ್ನಿಂದ ಅಡ್ಡಗಟ್ಟಿ ಜೀವವಿಮೆ ಹಣದಲ್ಲಿ ಪಾಲು ನೀಡಲು ಒತ್ತಾಯಿಸಿ ಜೀವ ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ.
ಸರೂರ ತಾಂಡಾದ ಮುತ್ತು ಹನಮಂತ ನಾಯಕ, ರಾಘು ಹನಮಂತ ನಾಯಕ, ಶ್ರೀಕಾಂತ ಕೃಷ್ಣಪ್ಪ ಚವ್ಹಾಣ ಹಾಗೂ ಎಲ್ಐಸಿ ಏಜೆಂಟ್ ಅರ್ಜುನ ಜಾಧವ್ ಮಗ ರಾಹುಲ್ನಿಂದ ಹಲ್ಲೆ ನಡೆದಿದೆ ಎಂದು ಮಹಿಳೆ ಆರೋಪಿಸಿದ್ದಾರೆ.
ಪೊಲೀಸ್ ಠಾಣೆಗೆ ದೂರು ನೀಡಲು ಹೋಗುತ್ತಿದ್ದ ವೇಳೆ ಸರೂರ ಗ್ರಾಮದ ಬಳಿ ಹಲ್ಲೆ ನಡೆದಿದೆ. ಹಲ್ಲೆ ಬಳಿಕ ಮಾಹಿತಿ ನೀಡಿದ್ರೂ ಪೊಲೀಸರು ಕ್ರಮ ಕೈಗೊಂಡಿಲ್ಲವೆಂದು ಗಾಯಗೊಂಡಿರುವ ಆರೋಪಿಸಿದ್ದಾರೆ. ಅಮರಗೋಳ ಗ್ರಾಮಕ್ಕೆ ಮದುವೆ ಮಾಡಿಕೊಡಲಾಗಿತ್ತು. ಲಕ್ಷ್ಮೀಯ ಗಂಡ ಮೋತಿಲಾಲ ಕಳೆದ ವರ್ಷ ಸಾವನ್ನಪ್ಪಿದ್ದ. ಇದರಿಂದ ಆತನ ವಿಮಾ ಹಣ 16.50. ಲಕ್ಷ .ರೂ ಪರಿಹಾರ ಜಮೆ ಆಗಿತ್ತು. ಅದರಲ್ಲಿ ಪಾಲು ಕೊಡುವಂತೆ ಪೀಡಿಸಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಮುದ್ದೇಬಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.