ವಿಜಯಪುರ: ಟೋಲ್ಗೇಟ್ಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಕೇಂದ್ರ ಸರ್ಕಾರ ಜಾರಿ ಮಾಡಿರುವ ಫಾಸ್ಟ್ಟ್ಯಾಗ್ ಯೋಜನೆ ಇಂದಿನಿಂದ ಕಡ್ಡಾಯಗೊಳಿಸಲಾಗಿದೆ.
ನಗದು ರಹಿತ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಫಾಸ್ಟ್ಟ್ಯಾಗ್ ಉತ್ತಮ ಯೋಜನೆಯಾಗಿದೆ. ಇಂದು ಬೆಂಗಳೂರು- ವಿಜಯಪುರ ರಾಜ್ಯ ಹೆದ್ದಾರಿಯ ಟೋಲ್ಗೇಟ್ನಲ್ಲಿ ಫಾಸ್ಟ್ಟ್ಯಾಗ್ ಇಲ್ಲದ ವಾಹನಗಳನ್ನು ತಡೆದು ಚಾಲಕರಿಗೆ ಟ್ಯಾಗ್ ನೋಂದಣಿ ಮಾಡಿಸಲಾಗುತ್ತಿದೆ. ಈ ಕುರಿತು ನಮ್ಮ ವಿಜಯಪುರ ಪ್ರತಿನಿಧಿ ಪ್ರತ್ಯಕ್ಷ ವರದಿ ನೀಡಿದ್ದಾರೆ.