ವಿಜಯಪುರ : ಮುದ್ದೇಬಿಹಾಳ ಪಟ್ಟಣದ ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ರೈತನೊಬ್ಬ ವಿಷದ ಬಾಟಲಿ ಪ್ರದರ್ಶನ ಮಾಡಿದ ಘಟನೆ ನಡೆದಿದೆ.
ಬೆಳೆವಿಮೆ ಒದಗಿಸುವಂತೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ಅಹೋರಾತ್ರಿ ಧರಣಿ ನಡೆಸಲಾಗುತ್ತಿದೆ. ಅಧಿಕಾರಿಗಳಿಂದ ಸಕಾರಾತ್ಮಕ ಉತ್ತರ ದೊರೆಯದ ಕಾರಣ ಬಸರಕೋಡದ ಗೌಡಪ್ಪಗೌಡ ಬೊಮ್ಮಣ ಜೋಗಿಯಿಂದ ವಿಷದ ಬಾಟಲಿ ಪ್ರದರ್ಶನ ಮಾಡಲಾಯಿತು.
ಐಪಿಎಂಸಿ ಅಧ್ಯಕ್ಷ, ನಿರ್ದೇಶಕ, ತಹಸೀಲ್ದಾರ್, ಸಿಪಿಐ, ಪಿಎಸ್ಐ ಎದುರಿಗೆ ವಿಷದ ಬಾಟಲಿ ಪ್ರದರ್ಶನ ಮಾಡಿದಾಗ ತಕ್ಷಣ ಪೊಲೀಸರು ವಿಷದ ಬಾಟಲಿ ಕಸಿದುಕೊಂಡರು. ಇದರಿಂದ ಆಕ್ರೋಶ ವ್ಯಕ್ತಪಡಿಸಿದ ರೈತ ಗೌಡಪ್ಪಗೌಡ ಬೊಮ್ಮಣಜೋಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ರೈತರಿಗೆ ಆಗುತ್ತಿರುವ ತೊಂದರೆಯನ್ನು ವಿವರಿಸಿದರು.