ETV Bharat / state

ವ್ಯಾಪಾರ ಮಾಡಲು ಬಿಡದ ಪೊಲೀಸರು : ವಿಜಯಪುರದಲ್ಲಿ ರಸ್ತೆಗೆ ತರಕಾರಿ ಚೆಲ್ಲಿ ರೈತರ ಆಕ್ರೋಶ - ವಿಜಯಪುರದಲ್ಲಿ ವೀಕೆಂಡ್ ಕರ್ಫ್ಯೂ

ರೈತನ ಆಕ್ರೋಶಕ್ಕೆ ಪೊಲೀಸರು ಮೌನವಹಿಸಿದ್ದಾರೆ. ಜಿಲ್ಲೆಯ ಈ ರೈತನ ಜತೆ ಇನ್ನಷ್ಟು ಅನ್ನದಾತರು ಸೇರಿ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ..

Farmer outrage against police in vijayapur
ರಸ್ತೆಗೆ ತರಕಾರಿ ಚೆಲ್ಲಿದ ರೈತ ಭೀಮನಗೌಡ ಬಿರಾದಾರ
author img

By

Published : Jan 16, 2022, 11:38 AM IST

ವಿಜಯಪುರ : ವೀಕೆಂಡ್ ಕರ್ಫ್ಯೂ ಹಿನ್ನೆಲೆ ತರಕಾರಿ ಮಾರಲು ಬಂದ ರೈತನೊಬ್ಬ ಆಕ್ರೋಶಗೊಂಡು ತರಕಾರಿಯನ್ನು ರಸ್ತೆಯಲ್ಲಿ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ಇಂದು (ಭಾನುವಾರ) ತರಕಾರಿ ಮಾರುಕಟ್ಟೆಯನ್ನ ಪೊಲೀಸರು ಬಂದ್‌ ಮಾಡಿದ್ದರಿಂದ ರೈತರೊಬ್ಬರು ಆಕ್ರೋಶಗೊಂಡು ರಸ್ತೆಯಲ್ಲಿಯೇ ತರಕಾರಿ ಚೆಲ್ಲಿ ಕಿಡಿಕಾರಿದ್ದಾನೆ.

ತರಕಾರಿ ಮಾರಾಟಕ್ಕೆ ಅಡ್ಡಿ.. ಪೊಲೀಸರ ವಿರುದ್ಧ ರೈತರ ಆಕ್ರೋಶ

ರೈತ ಭೀಮನಗೌಡ ಬಿರಾದಾರ ಎಂಬುವರು ಹಳ್ಳಿಯಿಂದ ತರಕಾರಿಯನ್ನು ತಂದು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಮುಂದಾದಾಗ ಪೊಲೀಸರು ತಡೆದಿದ್ದಾರೆ. ವೀಕೆಂಡ್ ಕರ್ಫ್ಯೂ ಹಿನ್ನೆಲೆ ಮಾರುಕಟ್ಟೆ ಬಂದ್ ಮಾಡಲಾಗಿದೆ. ತರಕಾರಿ ತೆಗೆದುಕೊಂಡು ಹೋಗು ಎಂದು ಸೂಚನೆ ನೀಡಿದ್ದಾರೆ.‌

ಆದರೆ, ರೈತ ಭೀಮನಗೌಡ ಬಿರಾದಾರ ತಾನು ಬೆಳೆದ ತರಕಾರಿ ಮಾರಾಟ ಮಾಡಲು ಸ್ವಲ್ಪ ಅವಕಾಶ ನೀಡಿ ಎಂದು ಪರಿ ಪರಿಯಾಗಿ ಬೇಡಿಕೊಂಡರು. ಇದಕ್ಕೆ ಒಪ್ಪದ ಪೊಲೀಸರು ಮಾರುಕಟ್ಟೆ ಬಂದ್ ಮಾಡಿಸಿದ್ದಾರೆ.

ಇದರಿಂದ ಆಕ್ರೋಶಗೊಂಡ ರೈತ ತಾನು ತಂದ ತರಕಾರಿಯನ್ನು ರಸ್ತೆಯಲ್ಲಿ ಚೆಲ್ಲಿ ಎಲ್ಲರೂ ಪುಕ್ಕಟ್ಟೆ ತರಕಾರಿ ತೆಗೆದುಕೊಂಡು ಹೋಗಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೊರೊನಾ ಏನು ಮಾಡುತ್ತದೆ? ಎಂದು ಪ್ರಶ್ನಿಸಿದ ಅವರು, ವ್ಯಾಪಾರವಿಲ್ಲದೇ ಹೋದರೆ ಹೊಟ್ಟೆಗೆ ಹಿಟ್ಟು ತಿನ್ನಬೇಕಾ? ಎಂದು ಕಿಡಿಕಾರಿದ್ದಾರೆ.

ರೈತನ ಆಕ್ರೋಶಕ್ಕೆ ಪೊಲೀಸರು ಮೌನವಹಿಸಿದ್ದಾರೆ. ಜಿಲ್ಲೆಯ ಈ ರೈತನ ಜತೆ ಇನ್ನಷ್ಟು ಅನ್ನದಾತರು ಸೇರಿ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕನಕಪುರದಲ್ಲಿ ಸಂಕ್ರಾಂತಿ ದಿನ ಹರಿದ ನೆತ್ತರು: ನಡುರಸ್ತೆಯಲ್ಲೇ ಯುವಕನ ಕೊಲೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.