ETV Bharat / state

ತಪ್ಪಾದ ಔಷಧಿ ಸಿಂಪಡಣೆ: ಕಣ್ಣೆದುರೇ ಕಮರಿದ 4 ಎಕರೆ ದ್ರಾಕ್ಷಿ ಬೆಳೆ, ಆತ್ಮಹತ್ಯೆಗೆ ಶರಣಾದ ರೈತ - ತಪ್ಪಾದ ಔಷಧ ಸಿಂಪಡಿಸಿ ಬೆಳೆ ನಾಶ

ವಿಜಯಪುರದಲ್ಲಿ ತಪ್ಪಾದ ಔಷಧ ಸಿಂಪಡಣೆ ಮಾಡಿ ನಾಲ್ಕು ಎಕರೆ ದ್ರಾಕ್ಷಿ ಬೆಳೆ ಕಮರಿ ಹೋಗಿದೆ. ಮನನೊಂದ ರೈತ ಜಮೀನಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

farmer-commits-suicide
ರೈತ ಆತ್ಮಹತ್ಯೆಗೆ ಶರಣು
author img

By

Published : Feb 5, 2023, 12:59 PM IST

Updated : Feb 5, 2023, 2:44 PM IST

ವಿಜಯಪುರ: ಜಿಲ್ಲೆಯಲ್ಲಿ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವುದು ದ್ರಾಕ್ಷಿ ಬೆಳೆ. ರೈತನ ಬದುಕನ್ನು ಸಿಹಿ ಮಾಡಬೇಕಿತ್ತು. ಆದರೆ, ತಪ್ಪಾದ ಔಷಧಿ ಸಿಂಪಡಣೆ ಮಾಡಿದ್ದರಿಂದ ಇಡೀ ತೋಟವೇ ಒಣಗಿದೆ. ನೊಂದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ಘಟನೆ ನಡೆದಿದೆ. ಆತ್ಮಹತ್ಯೆಗೆ ಶರಣಾದ ರೈತನನ್ನು ಮನೋಹರ್​ ಆಯತವಾಡ (55) ಎಂದು ಗುರುತಿಸಲಾಗಿದೆ.‌ ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆಯೇ ಪ್ರಧಾನ ಕೃಷಿ. ರೈತರು ಇದೇ ಬೆಳೆಯನ್ನೇ ಆಧರಿಸಿದ್ದಾರೆ.

5 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿ 4 ಎಕರೆಯಲ್ಲಿ ಮನೋಹರ್​ ದ್ರಾಕ್ಷಿ ಬೆಳೆ ಬೆಳೆಸಿದ್ದರು. ಉತ್ತಮ ಫಸಲು ಕೂಡ ಬಂದಿತ್ತು. ರಕ್ಷಣೆಗಾಗಿ ರೈತ ರಸಗೊಬ್ಬರ ಅಂಗಡಿಯಿಂದ ಕೆಲ ದಿನಗಳ ಹಿಂದೆ ಔಷಧ ಖರೀದಿಸಿ ಸಿಂಪಡಿಸಿದ್ದರು. ಹೀಗೆ ಸಿಂಪಡಿಸಿದ ಕೆಲವೇ ದಿನಗಳಲ್ಲಿ ಇಡೀ ಬೆಳೆ ಕಮರಿದೆ. ದ್ರಾಕ್ಷಿ ಬಳ್ಳಿ ಪೂರ್ಣ ಒಣಗಿ ನೆಲಕ್ಕುರುಳಿದೆ.

ಔಷಧ ಸಿಂಪಡಣೆ ಬಳಿಕ ಸಂಪೂರ್ಣವಾಗಿ ನಾಶವಾದ ದ್ರಾಕ್ಷಿ ಬೆಳೆ

ಜೀವನಾಧಾರವಾಗಿದ್ದ ಬೆಳೆ ಹಾಳಾಗಿದ್ದು ರೈತ ಮನೋಹರ್​ ಅವರನ್ನು ತೀವ್ರವಾಗಿ ಬಾಧಿಸಿದೆ. 5 ಲಕ್ಷ ರೂಪಾಯಿ ಸಾಲ ಮಾಡಿ ಬೆಳೆದ ಬೆಳೆ ಸಣ್ಣ ತಪ್ಪಿನಿಂದಾಗಿ ಕಣ್ಣೆದುರೇ ನಾಶವಾಗಿದ್ದನ್ನು ನೋಡಲಾಗದೇ ಜಮೀನಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿದ್ಯುತ್​ ತಂತಿ ಸ್ಪರ್ಶಿಸಿ ಕಾರ್ಮಿಕ ಸಾವು: ಬೆಂಗಳೂರಿನಲ್ಲಿ ವಿದ್ಯುತ್​ ಸಂಪರ್ಕ ಕಲ್ಪಿಸುವಾಗ ತಂತಿ ತಗುಲಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ದಾರುಣ ಘಟನೆ ಶನಿವಾರ ರಾತ್ರಿ ನಡೆದಿದೆ. ಕೋಣನಕುಂಟೆಯ ಬಹುಮಹಡಿ ಕಟ್ಟಡವೊಂದರಲ್ಲಿ ನಡೆದ ದುರ್ಘಟನೆಯಲ್ಲಿ ಅಸ್ಸಾಂ ಮೂಲದ ದಿಲೀಪ್ ಹಾಗೂ ತುಮಕೂರು ಜಿಲ್ಲೆಯ ಮಧುಗಿರಿಯ ರಘು ಎಂಬ ಇಬ್ಬರು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ.

ಕಟ್ಟಡದಲ್ಲಿ ರಾತ್ರಿ ವೇಳೆ ಎಸ್​ಟಿಪಿಯಲ್ಲಿ ಕೆಲಸ ಮಾಡುತ್ತಿದ್ದಾಗ ಕರೆಂಟ್ ಶಾಕ್ ತಗುಲಿದೆ. ಇದರಿಂದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಳೆ ತೋಟ ತುಳಿದ ಕಾಡಾನೆ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆ ಕಾಡಾನೆಯೊಂದು ಬಾಳೆ, ಅಡಿಕೆ ತೋಟವನ್ನು ತುಳಿದಾಡಿದೆ. ಕಾಡಂಚಿನಲ್ಲಿ ಆನೆಗಳ ಹಾವಳಿ ತೀವ್ರವಾಗುತ್ತಿದ್ದು ಅಡಿಕೆ, ಬಾಳೆ ತೋಟ ನಾಶವಾಗುತ್ತಿದೆ. ತರೀಕೆರೆ ತಾಲೂಕಿನಲ್ಲಿ ಈ ರೀತಿಯ ಘಟನೆಗಳು ಹೆಚ್ಚಾಗಿವೆ. ನಾಲ್ಕು ಎಕರೆ ಅಡಿಕೆ, ಬಾಳೆ ತೋಟವನ್ನು ಆನೆ ಹಾಳು ಮಾಡಿದೆ ಎಂದು ರೈತರು ಬೇಸರ ಹೊರಹಾಕಿದ್ದರು.

ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶಗೊಂಡಿದ್ದ ರೈತರು, ಅರಣ್ಯಾಧಿಕಾರಿಗಳು ತಕ್ಷಣವೇ ಕ್ರಮ ಕೈಗೊಂಡು ಆನೆಗಳ ಹಾವಳಿಯಿಂದ ಬೆಳೆ ರಕ್ಷಿಸಬೇಕು ಎಂದು ಒತ್ತಾಯಿಸಿದ್ದರು. ಭದ್ರಾ ವನ್ಯಜೀವಿ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಈ ರೀತಿಯ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಮತ್ತು ಶಾಶ್ವತ ಪರಿಹಾರ ನೀಡಬೇಕೆಂದು ಅಧಿಕಾರಿಗಳಲ್ಲಿ ರೈತರು ಮನವಿ ಕೂಡ ಮಾಡಿದ್ದರು.

ಇದನ್ನೂ ಓದಿ: ಬೆಂಗಳೂರು: ಬಹುಮಹಡಿ ಕಟ್ಟಡದಲ್ಲಿ ವಿದ್ಯುತ್​ ಸ್ಪರ್ಶಿಸಿ ಇಬ್ಬರು ಕಾರ್ಮಿಕರು ಸಾವು

Last Updated : Feb 5, 2023, 2:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.