ETV Bharat / state

ಹೃದಯಾಘಾತದಿಂದ ಗಾಯಕಿ ಶಶಿಕಲಾ ನಿಧನ - ವಿಜಯಪುರ ಲೇಟೆಸ್ಟ್​ ನ್ಯೂಸ್

ಖ್ಯಾತ ಗಾಯಕಿ ಶಶಿಕಲಾ ಶ್ರೀಕಾಂತ ಕುಲಹಳ್ಳಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

Famous musician Shashikala
ಹೃದಯಾಘಾತದಿಂದ ಖ್ಯಾತ ಸಂಗೀತಗಾರ್ತಿ ಶಶಿಕಲಾ ನಿಧನ
author img

By

Published : May 7, 2021, 9:53 AM IST

ವಿಜಯಪುರ: ಆಕಾಶವಾಣಿ ಎ ಗ್ರೇಡ್ ಕಲಾವಿದೆ, ಖ್ಯಾತ ಗಾಯಕಿ ಶಶಿಕಲಾ ಶ್ರೀಕಾಂತ ಕುಲಹಳ್ಳಿ (58) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಶಾಸ್ತ್ರೀಯ ಸಂಗೀತದಲ್ಲಿ ಸ್ನಾತಕೋತ್ತರ ಪದವೀಧರೆಯಾಗಿದ್ದ ಶಶಿಕಲಾ ಅವರು, ಕಿರಾಣಾ ಘರಾಣಾದಲ್ಲಿ ಪ್ರಾವಿಣ್ಯತೆ ಪಡೆದಿದ್ದರು. ಕನ್ನಡ, ಮರಾಠಿ, ಹಿಂದಿ ಭಾಷೆಗಳಲ್ಲಿ ಸಾವಿರಾರು ಹಾಡು ಹಾಡಿದ್ದಾರೆ. ಹಿಂದೂಸ್ತಾನಿ, ಸುಗಮ ಸಂಗೀತ, ಭಾವಗೀತೆ, ಜಾನಪದ, ವಚನ, ಭಜನೆ, ಗಜಲ್, ಮರಾಠಿ ನಾಟ್ಯ ಸಂಗೀತದಲ್ಲೂ ಪರಿಣಿತಿ ಪಡೆದಿದ್ದರು.

ದೆಹಲಿ, ಮುಂಬೈ, ಹೈದರಾಬಾದ್ ಸೇರಿದಂತೆ ದೇಶದ ನಾನಾ ರಾಜ್ಯಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. 1995ರ ಕರ್ನಾಟಕ ಸರ್ಕಾರದ ಶ್ರೇಷ್ಠ ಹಿನ್ನೆಲೆ ಗಾಯಕಿ ಪ್ರಶಸ್ತಿ, ಕರುನಾಡು ಪ್ರಶಸ್ತಿ, ಸಂಗೀತ ಶಾರದೆ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

ಓದಿ: ಚಾಮರಾಜನಗರ ದುರಂತ: ತನಿಖೆ ನಡೆಸಲು ಮುಂದಾದ ಲೋಕಾಯುಕ್ತ ಸಂಸ್ಥೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.