ETV Bharat / state

ಸಾರಿಗೆ ನೌಕರರ ಬೇಡಿಕೆಗೆ ಸ್ಪಂದಿಸದಿದ್ದರೆ ಕುರ್ಚಿ ಬಿಟ್ಟು ಮನೆಗೆ ಹೋಗಿ: ನಾಡಗೌಡ ವಾಗ್ದಾಳಿ

ಸಾರಿಗೆ ನೌಕರರ ಬೇಡಿಕೆಗಳ ಬಗ್ಗೆ ನ್ಯಾಯ ಒದಗಿಸಲು ಆಗದಿದ್ದರೆ ಸಿಎಂ ಖುರ್ಚಿ ಬಿಟ್ಟು ಮನೆಗೆ ಹೋಗಿ ಎಂದು ಸಾರಿಗೆ ನೌಕರರ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾಜಿ ಶಾಸಕ ಸಿ.ಎಸ್.ನಾಡಗೌಡ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ex mla nadagowda reaction over transporation staffs strike
ಮಾಜಿ ಶಾಸಕ ನಾಡಗೌಡ ವಾಗ್ದಾಳಿ
author img

By

Published : Apr 16, 2021, 11:31 PM IST

ಮುದ್ದೇಬಿಹಾಳ : ಸಾರಿಗೆ ನೌಕರರ ಬೇಡಿಕೆಗಳ ಬಗ್ಗೆ ನ್ಯಾಯ ಒದಗಿಸಲು ಆಗದಿದ್ದರೆ ಸಿಎಂ ಖುರ್ಚಿ ಬಿಟ್ಟು ಮನೆಗೆ ಹೋಗಿ ಎಂದು ಮಾಜಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ತಮ್ಮ ನಿವಾಸಕ್ಕೆ ಶುಕ್ರವಾರ ಆಗಮಿಸಿದ ಸಾರಿಗೆ ನೌಕರರ ಬೇಡಿಕೆಗಳ ಬಗ್ಗೆ ಮನವಿ ಸ್ವೀಕರಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರನೇ ವೇತನ ಆಯೋಗದ ಬೇಡಿಕೆ ಬಗ್ಗೆ ಸರಕಾರ ಸಾರಿಗೆ ನೌಕರರಿಂದ ಸಹಾನುಭೂತಿಯಿಂದ ಕಾಣಬೇಕು. ಬಡ ಜನತೆಗೆ, ನೌಕರರಿಗೆ ಅಲಕ್ಷ್ಯ ಮಾಡುವಂತಹದ್ದು ಸರಿಯಲ್ಲ. ಸರಕಾರ ಕಣ್ಣು ತೆರೆಯಬೇಕು. ನ್ಯಾಯವನ್ನು ಕೊಡುವ ಕೆಲಸ ಮಾಡಬೇಕು. ಸೌಜನ್ಯದಿಂದ ಸ್ಪಂದಿಸುವ ಆಡಳಿತ ನಿಮ್ಮದಾಗದಿದ್ದರೆ ನೀವ್ಯಾಕೆ ಅಲ್ಲಿ ಕೂಡುತ್ತಿರಿ. ಯತ್ನಾಳ ಬಸನಗೌಡರು ಅವರ ಆಡಳಿತದ ಬಗ್ಗೆ ಹೇಳುತ್ತಿದ್ದಾರೆ. ಇವರ ಧೋರಣೆಯ ಬಗ್ಗೆ ಇನ್ನೂ ಬೇರೆ ಸಾಕ್ಷಿ ಬೇಕೆ ಎಂದು ನಾಡಗೌಡ ಪ್ರಶ್ನಿಸಿದರು.

ಮಾಜಿ ಶಾಸಕ ನಾಡಗೌಡ ವಾಗ್ದಾಳಿ

ಕೊರೊನಾ ಹೆಸರಿನಲ್ಲೂ ಖಾಸಗಿಯವರಿಗೆ ಲಸಿಕೆ ಮಾರಾಟಕ್ಕೆ ಅನುಮತಿ ನೀಡಿ ದೇಶದಲ್ಲಿ ಲಸಿಕೆಯ ಅಭಾವ ಸೃಷ್ಟಿಸಿದ್ದಾರೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಾರಿಗೆ ನೌಕರರ ಪರವಾಗಿ ನಮ್ಮ ಪಕ್ಷ ಸದಾ ಬೆನ್ನೆಲುಬಾಗಿರಲಿದ್ದು, ವಿರೋಧ ಪಕ್ಷದ ನಾಯಕರ ಗಮನಕ್ಕೆ ನಿಮ್ಮ ಬೇಡಿಕೆಯನ್ನು ತಲುಪಿಸುತ್ತೇನೆ ಎಂದು ನಾಡಗೌಡ ನೌಕರರಿಗೆ ಧೈರ್ಯ ತುಂಬಿದರು.

ಅಧಿಕಾರಿಗಳಿಂದ ದೌರ್ಜನ್ಯ ಆರೋಪ

ಸಾರಿಗೆ ನೌಕರರಿಗೆ ಅಧಿಕಾರಿಗಳು ನಿತ್ಯ ಕಿರುಕುಳ ನೀಡುತ್ತಿದ್ದಾರೆ. ಕಾರಣವಿಲ್ಲದೇ 21 ಜನರ ವಿರುದ್ಧ ಈಚೇಗೆ ಘಟಕ ವ್ಯವಸ್ಥಾಪಕರು ಪೊಲೀಸರಿಗೆ ದೂರು ನೀಡಿದ್ದಾರೆ. ಬೆದರಿಕೆ ಹಾಕುವುದು, ಸೇವೆಯಿಂದ ತೆಗೆದು ಹಾಕುವ ಬಗ್ಗೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಶಾಸಕ ನಾಡಗೌಡ, ದೂರಿನ ವಿಚಾರವಾಗಿ ವಕೀಲರನ್ನು ಸಂಪರ್ಕಿಸಿ ಕಾನೂನು ರೀತಿಯಲ್ಲಿ ಹೋರಾಟ ಮಾಡುವಂತೆ ಸಲಹೆ ಮಾಡಿದರು.

ಶಾಸಕ ನಡಹಳ್ಳಿ, ಜಿಪಂ ಉಪಾಧ್ಯಕ್ಷರಿಗೂ ಮನವಿ ಸಲ್ಲಿಕೆ...

ಶಾಸಕ ಎ.ಎಸ್.ಪಾಟೀಲ ನಡಹಳ್ಳಿಗೆ ಸಾರಿಗೆ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಮಾತನಾಡಿದ ಸಾರಿಗೆ ನೌಕರರು, ಆರನೇ ವೇತನ ಆಯೋಗದ ಜಾರಿಗಾಗಿ ಕಳೆದ ಹತ್ತು ದಿನಗಳಿಂದ ಮುಷ್ಕರ ನಡೆಸುತ್ತಿದ್ದೇವೆ. ಆದರೂ ಯಾವುದೇ ರೀತಿಯ ಸ್ಪಂದನೆ ದೊರೆತಿಲ್ಲ. ನಮ್ಮ ಕುಟುಂಬಗಳು ಬೀದಿಗೆ ಬರುವಂತಾಗಿವೆ. ಕೂಡಲೇ ಸಿಎಂ, ಸರಕಾರದ ಸಚಿವರೊಂದಿಗೆ ಮಾತನಾಡಿ ಬೇಡಿಕೆ ಈಡೇರಿಕೆಗೆ ಸ್ಪಂದನೆ ನೀಡುವಂತೆ ಮನವಿ ಮಾಡಿದರು.

ಬಳಿಕ ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಜೆಡಿಎಸ್ ನಾಯಕಿ ಮಂಗಳಾದೇವಿ ಬಿರಾದಾರಗೂ ಸಾರಿಗೆ ನೌಕರರು ಮನವಿ ಸಲ್ಲಿಸಿ ತಮ್ಮ ಹೋರಾಟಕ್ಕೆ ಬೆಂಬಲ ನೀಡುವಂತೆ ಕೋರಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.