ಮುದ್ದೇಬಿಹಾಳ: ಲಾಕ್‌ಡೌನ್ ಸಡಿಲಿಕೆಯಾದ ಬಳಿಕ ಅಂಗಡಿಗಳ ಮಾಲೀಕರಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡುವಂತೆ ಅಧಿಕಾರಿಗಳು ಸೂಚಿಸಿದ್ದರೂ ಅದನ್ನು ಲೆಕ್ಕಿಸದೆ ವ್ಯಾಪಾರ ಮಾಡುತ್ತಿದ್ದ ಅಂಗಡಿಗಳ ಮೇಲೆ ಪುರಸಭೆ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದರು.
ಈಟಿವಿ ಭಾರತ ಮೇ 11ರಂದು ‘ಮುದ್ದೇಬಿಹಾಳದಲ್ಲಿ ಕೊರೊನಾಗೆ ದಾರಿ ಮಾಡಿಕೊಡುತ್ತಿರುವ ವ್ಯಾಪಾರಸ್ಥರು’ ಶೀರ್ಷಿಕೆಯಡಿ ವರದಿ ಪ್ರಕಟಿಸುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಅಂಗಡಿಗಳ ಮೇಲೆ ದಾಳಿ ಮಾಡಿದ್ದಾರೆ.
ಪಟ್ಟಣದ ಬಸವೇಶ್ವರ ವೃತ್ತದಿಂದ ಪ್ರತಿ ಅಂಗಡಿಗೂ ತೆರಳಿದ ಪುರಸಭೆ ಕಂದಾಯ ಅಧಿಕಾರಿ ಎಂ.ಬಿ.ಮಾಡಗಿ ನೇತೃತ್ವದ ತಂಡ, ಅಂಗಡಿ ಮಾಲೀಕರಿಗೆ ಕೋವಿಡ್-19 ಸಂದರ್ಭದಲ್ಲಿ ಹೇಗೆಲ್ಲಾ ವರ್ತಿಸಬೇಕು. ಏನೇನು ನಿಯಮ ಪಾಲಿಸಬೇಕು ಎಂಬ ಬಗ್ಗೆ ಕಿವಿಮಾತು ಹೇಳಿದರು. ಅಲ್ಲದೇ ಇಲ್ಲಿಯವರೆಗೆ ಅಂದಾಜು 10 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ. ಮಾಸ್ಕ್, ಸ್ಯಾನಿಟೈಸರ್ ಬಳಕೆ ಮಾಡುವಂತೆ ಹಾಗೂ ಸಾಮಾಜಿಕ ಅಂತರ ಪಾಲನೆ ಮಾಡುವಂತೆ ತಿಳಿ ಹೇಳಲಾಗಿದೆ ಎಂದು ತಿಳಿಸಿದರು.
ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ದೊಡ್ಡ ದೊಡ್ಡ ಬಟ್ಟೆ ಅಂಗಡಿಗಳು, ಜ್ಯುವೆಲರಿ ಶಾಪ್, ಫುಟ್ವೇರ್, ಗೊಬ್ಬರದಂಗಡಿ ಇನ್ನಿತರ ಅಂಗಡಿಗಳಿಗೆ ತೆರಳಿದ ಅಧಿಕಾರಿಗಳು, ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಿದರು.
ಇದನ್ನೂ ಓದಿ: ‘ಮುದ್ದೇಬಿಹಾಳದಲ್ಲಿ ಕೊರೊನಾಗೆ ದಾರಿ ಮಾಡಿಕೊಡುತ್ತಿರುವ ವ್ಯಾಪಾರಸ್ಥರು’