ETV Bharat / state

ನೀವೂ ಬೀದಿಗೆ ಬಂದು ನೋಡ್ರಿ ನಮ್ ಕಷ್ಟ ಏನೂ ಅಂತ ಗೊತ್ತಾಗುತ್ತೆ?:  ಸವದಿಗೆ ಸಾರಿಗೆ ನೌಕರನ ಪುತ್ರಿಯ ಸವಾಲು

ಫೀಸ್ ಕಟ್ಟಲು ತೊಂದರೆಯಾಗಿದೆ. ನಿತ್ಯವೂ ಊಟ ಮಾಡಲು ನಿಗಮದಿಂದ ಕೊಡುತ್ತಿರುವ ಸಂಬಳ ಸಾಕಾಗುತ್ತಿಲ್ಲ. ಮಂತ್ರಿಗಳು ಎಸಿ ರೂಂ, ಕಾರ್‌ನಲ್ಲಿ ಅಡ್ಡಾಡುತ್ತೀರಿ. ಆದರೆ ಒಂದು ದಿನ ಸಾಮಾನ್ಯ ಸಾರಿಗೆ ಬಸ್‌ನ ಚಾಲಕರಂತೆ ಸೇವೆ ಮಾಡಿ ನೋಡಿ ಅವರ ಕಷ್ಟ ಏನೆಂಬುದು ತಿಳಿಯುತ್ತದೆ ಎಂದಿದ್ದಾಳೆ.

employee-daughter-questioned-to-dcm-savdi-on-protest-site
ಸವದಿಗೆ ನೌಕರನ ಪುತ್ರಿ ಪ್ರಶ್ನೆ
author img

By

Published : Apr 12, 2021, 7:57 PM IST

ಮುದ್ದೇಬಿಹಾಳ (ವಿಜಯಪುರ): ನಮ್ಮ ತಂದೆ ನಾವು ಬೆಳಗ್ಗೆ ಏಳುವುದರಲ್ಲಿಯೇ ಡ್ಯೂಟಿಗೆ ಹೋಗಿರುತ್ತಾರೆ. ಸಂಜೆ ಮಲಗಿದ ಬಳಿಕ ಮನೆಗೆ ಬರುತ್ತಾರೆ. ಅವರ ಮುಖ ನೋಡಲು ನಮಗೆ ಸಿಗುವುದಿಲ್ಲ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿರುವ ನಮ್ಮ ಕುಟುಂಬದ ನಿರ್ವಹಣೆಗೆ ವೇತನ ಸಾಲುತ್ತಿಲ್ಲ, ನಮ್ಮ ಕಷ್ಟ ಏನು ಅಂತ ಗೊತ್ತಾಗಬೇಕು ಅಂದ್ರೆ ನೀವು ಬೀದಿಗೆ ಬಂದು ನೋಡ್ರಿ ಅಂತ ಸಾರಿಗೆ ನೌಕರನ ಪುತ್ರಿಯೊಬ್ಬಳು ಡಿಸಿಎಂ ಸವದಿಗೆ ಸವಾಲೆಸಿದಿದ್ದಾಳೆ.

ಫೀಸ್ ಕಟ್ಟಲು ತೊಂದರೆಯಾಗಿದೆ. ನಿತ್ಯವೂ ಊಟ ಮಾಡಲು ನಿಗಮದಿಂದ ಕೊಡುತ್ತಿರುವ ಸಂಬಳ ಸಾಕಾಗುತ್ತಿಲ್ಲ. ಮಂತ್ರಿಗಳು ಎಸಿ ರೂಂ, ಕಾರ್‌ನಲ್ಲಿ ಅಡ್ಡಾಡುತ್ತೀರಿ. ಆದರೆ, ಒಂದು ದಿನ ಸಾಮಾನ್ಯ ಸಾರಿಗೆ ಬಸ್‌ನ ಚಾಲಕರಂತೆ ಸೇವೆ ಮಾಡಿ ನೋಡಿ ಅವರ ಕಷ್ಟ ಏನೆಂಬುದು ತಿಳಿಯುತ್ತದೆ ಎಂದಿದ್ದಾಳೆ.

ಡಿಸಿಎಂ ಸವದಿಗೆ ಸಾರಿಗೆ ನೌಕರ ಕುಟುಂಬಸ್ಥರ ಪ್ರಶ್ನೆ

ಸಾರಿಗೆ ನೌಕರನೊಬ್ಬರ ಪತ್ನಿ ರೂಪಾ ಕಡಿ ಮಾತನಾಡಿ, ನಿಮಗೆ ಸಾರಿಗೆ ನೌಕರರ ಕಷ್ಟ ಕೇಳಲು ಆಗದಿದ್ದರೆ ರಾಜಕೀಯ ಏಕೆ ಮಾಡುತ್ತೀರಿ. ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲಿ ಜಪತಪ ಮಾಡಲು ಕುಳಿತುಕೊಳ್ಳಿ ಎಂದು ಹರಿಹಾಯ್ದಿದ್ದಾರೆ.

ಇದನ್ನೂ ಓದಿ: ಆನ್​ಲೈನ್ ಕ್ಲಾಸ್​​ಗಳಿವೆ ಆದರೆ, ಆನ್​ಲೈನ್ ಪರೀಕ್ಷೆ ಸಾಧ್ಯವಿಲ್ಲ: ಅಶ್ವತ್ಥ ನಾರಾಯಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.