ವಿಜಯಪುರ: ನಾಡಿನ ಪ್ರಮುಖ ಹಬ್ಬ ಹಾಗೂ ರೈತನ ಸಂತಸದ ಸಮಯವನ್ನು ಎಳ್ಳು ಅಮಾವಾಸ್ಯೆಯಾಗಿ ಆಚರಿಸಲಾಗುತ್ತದೆ. ಜಿಲ್ಲೆಯಲ್ಲಿ ಎಲ್ಲೆಡೆ ಎಳ್ಳು ಅಮವಾಸ್ಯೆ ಹಬ್ಬವನ್ನು ಚರಗ ಚಲ್ಲುವ ಮೂಲಕ ಆಚರಿಸಲಾಯಿತು. ಇಂಡಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಹಾಗೂ ದೇವರಹಿಪ್ಪರಗಿ, ಮುಳಸಾವಳಗಿ ಗ್ರಾಮದ ಕುಟುಂಬದವರು ಸಂಭ್ರಮದಿಂದ ಚರಗ ಚೆಲ್ಲಿದರು.
ಸಜ್ಜಿರೊಟ್ಟಿ, ಶೇಂಗಾ ಹೋಳಿಗೆ ಸೇರಿದಂತೆ ಉತ್ತರ ಕರ್ನಾಟಕದ ಖ್ಯಾದ್ಯವನ್ನು ತಯಾರಿಸಿ ಜಮೀನಿಗೆ ತೆರಳಿ ಭರ್ಜರಿಯಾಗಿ ಊಟ ಸವಿದರು. ಇದಕ್ಕೂ ಮೊದಲು ಮನೆಯಿಂದ ತಂದಿದ್ದ ಅಡುಗೆಯನ್ನು ಜಮೀನಿನಲ್ಲಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಲಾಯಿತು. ಅಲ್ಲದೇ 'ಸಜ್ಜಿರೊಟ್ಟಿ ಚವಳಿಕಾಯಿ ಚೋಂಗಿ ಬೋಲೊ' ಎಂದು ಬೆಳೆಗೆಲ್ಲ ನೈವೇದ್ಯ ಅರ್ಪಿಸಲಾಯಿತು.
ಇದನ್ನೂ ಓದಿ : ಆಟಿ ಅಮಾವಾಸ್ಯೆ: ಸಪ್ತಪರ್ಣಿ ತೊಗಟೆಯ ಕಷಾಯ ಸೇವಿಸಿದ ಕರಾವಳಿ ಜನತೆ