ETV Bharat / state

ಹಗಲಿನಲ್ಲಿ ಉರಿಯುತ್ತಿರುವ ವಿದ್ಯುತ್ ದೀಪಗಳು: ಅಧಿಕಾರಿಗಳ ನಿರ್ಲಕ್ಷ್ಯ ಆಕ್ರೋಶ

ರಸ್ತೆಯ ಬದಿಯ ವಿದ್ಯುತ್ ದೀಪಗಳು ಹಗಲಿನಲ್ಲಿ ಉರಿಯುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು, ಜವಾಬ್ದಾರಿಯುತ ಅಧಿಕಾರಿಗಳು ಪೋಲಾಗುತ್ತಿರುವ ವಿದ್ಯುತ್​ಅನ್ನು ತಡೆಗಟ್ಟಬೇಕು ಎಂದಿದ್ದಾರೆ.

ಹಗಲಿನಲ್ಲಿ ಉರಿಯುತ್ತಿರುವ ವಿದ್ಯುತ್ ದೀಪಗಳು
author img

By

Published : Apr 25, 2019, 6:46 PM IST

ವಿಜಯಪುರ: ಜಿಲ್ಲೆಯಲ್ಲಿ ವಿದ್ಯುತ್​ ಕೊರತೆ ಸಾಮಾನ್ಯವಾಗಿಟ್ಟಿದೆ. ಆದಾಗ್ಯೂ ರಾತ್ರಿ ಸಾಲದೆಂಬಂತೆ ಹಗಲಿನಲ್ಲಿಯೂ ರಸ್ತೆಯ ಬದಿಯ ವಿದ್ಯುತ್ ದೀಪಗಳು ಉರಿಯುತ್ತಿವೆ ಎಂದು ಸ್ಥಳೀಯರು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಗಲಿನಲ್ಲಿ ಉರಿಯುತ್ತಿರುವ ವಿದ್ಯುತ್ ದೀಪಗಳು

ಮುದ್ದೇಬಿಹಾಳ ತಾಲೂಕಿನ ಕೆಲವು ವಾರ್ಡ್​ಗಳಲ್ಲಿ ಸಂಜೆವರೆಗೂ ವಿದ್ಯುತ್​ ದೀಪಗಳು ಉರಿಯುತ್ತಲೇ ಇರುತ್ತವೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಯಾರೂ ಗಮನ ಹರಿಸುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಯಾರು ಹೊಣೆ ಅಂತ ತಾಲೂಕಿನ ಜನರು ಪ್ರಶ್ನೆ ಮಾಡಲಾರಂಭಿಸಿದ್ದಾರೆ. ಜವಾಬ್ದಾರಿಯುತ ಅಧಿಕಾರಿಗಳು ಪೋಲಾಗುತ್ತಿರುವ ವಿದ್ಯುತ್​ಅನ್ನು ತಡೆಗಟ್ಟಬೇಕು. ಅಲ್ಲದೆ ನಿರ್ಲಕ್ಷ್ಯ ಮಾಡಿದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Intro:ಸ್ಲಗ್: ಹಗಲತ್ತು ಉರಿಯುತ್ತವೆ ಇಲ್ಲಿಯ ಸಾರ್ವಜನಿಕ ವಿದ್ಯುತ್ ದೀಪ್ಗಳು

ಅಧಿಕಾರಿಗಳ ನಿರ್ಲಕ್ಷಕ್ಕೆ ನಗರದ ಜನತೆ ಆಕ್ರೋಶ

Anchor:

ಬಿಸಿಲುನಗರಿ ಅಂತೆ ಹಣೆಪಟ್ಟಿ ಕಟ್ಟಿಕೊಂಡಿರುವ ವಿಜಯಪುರ ಜಿಲ್ಲೆಯಲ್ಲಿ ಆಗಾಗ ವಿದ್ಯುತ್ ಅಭಾವದ ಕೊರತೆ ಎದ್ದು ಕಾಣುತ್ತಲೆ ಇರುತ್ತದೆ...ಅಷ್ಟೆ ಅಲ್ಲದೆ ಇಲ್ಲಿಯ ಕೆಇಬಿ ಇಲಾಖೆ ಆಗಾಗ ಲೋಡ್ ಶೆಡಿಂಗ್ ಇರುವ ಬಗ್ಗೆ ಮಾಹಿತಿ ಕೂಡ ನೀಡುತ್ತದೆ. ಆದ್ರೆ ರಾತ್ರಿ ಕೊಟ್ಟ ವಿದ್ಯುತ್ ಹಗಲೊತ್ತಾದ್ರೂ ತಗೆಯದೆ ಆ ವಿದ್ಯುತ್ ದೀಪಗಳು ಸಂಜೆವರೆಗೆ ಉರಿಯುತ್ತಲೆ ಇರುತ್ತವೆ. ಇದಕ್ಕೆ ಯಾರು ಹೊಣೆ ಅಂತ ಮುದ್ದೇಬಿಹಾಳ ತಾಲೂಕಿನ ಜನರ ಪ್ರಶ್ನೆಯಾಗಿದೆ.Body:ನಗರದ ಹಲವು ವಾರ್ಡ್ ಗಳಲ್ಲಿ ದಿನನಿತ್ಯ ಸಾರ್ವಜನಿಕ ವಿದ್ಯುತ್ ದೀಪಗಳು ಉರಿಯುತ್ತಲೆ ಇವೆ. ಕೇವಲ 200-300 ಬಿಲ್ ಬಾಕಿ ಇದ್ದರೆ ಕೆಇಬಿ ಇಲಾಖೆಯ ಸಿಬ್ಬಂದಿಗಳು ಮನೆಗೆ ಬಂದು ವಿದ್ಯೂತ್ ಕನೆಕ್ಷನ್ ಕಟ್ಟ್ ಮಾಡಿ ಹೋಗುತ್ತಾರೆ..ಆದ್ರೆ ಇಂತಹ ಬೇಜವಾಬ್ದಾರಿ ಅಧಿಕಾರಿಗಳಿಂದ ಪ್ರತಿದಿನ ಯುನಿಗಟ್ಟಲೇ ವಿದ್ಯುತಗ ಪೋಲಾಗುತ್ತಿದೆ.ಅದನ್ನು ಪ್ರಶ್ನೆ ಮಡುವರು ಯಾರು ಇಲ್ವಾ ಅಂತ ಮುದ್ದೇಬಿಹಾಳ ನಗರದ ಅವಟಿ ವಾರ್ಡಿನ ನಿವಾಸಿಗಳು ಕೆಇಬಿ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ...ಇಲ್ಲಿಯ 21ನೇ ವಾರ್ಡ ಅವಟಿ ಗಲ್ಲಿಯಲ್ಲಿ ಸುಮಾರು 10ರಿಂದ 15 ವಿದ್ಯೂತ್ ದೀಪಗಳು ಪ್ರತಿ ದಿನ ಉರಿಯುತ್ತಲೆ ಇರುತ್ತವೆ. ಸರ್ಕಾರ ಇದರ ನಿರ್ವಹಣೆಗಾಗಿಯೇ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಗಳನ್ನು ನೇಮಕ ಮಾಡಿರುತ್ತದೆ. ಆದ್ರೆ ಇಲ್ಲಿ ಅಧಿಕಾರಿಗಳ ನಿರ್ಲಕ್ಷದಿಂದ ವಿದ್ಯುತ್ ವ್ಯರ್ಥವಾಗುತ್ತಿದ್ದು, ಇಲ್ಲಿಯ ನಿವಾಸಿಗಳು ಕೆಇಬಿ‌ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.Conclusion:ಇನ್ನೂ ಸರ್ಕಾರ ಹೊರರಾಜ್ಯಗಳಿಂದ ಸಾಲ‌ಮಾಡಿ ವಿದ್ಯುತ್ ವನ್ನು ಖರಿದಿಸುತ್ತದೆ. ಆದ್ರೆ ಖರಿದಿ ಮಾಡಿದ ವಿದ್ಯುತವನ್ನು ಈ ರೀತೀಯಾಗಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ವ್ಯರ್ಥವಾಗಿರುತ್ತಿದ್ದಕ್ಕೆ‌ ನಗರದ ನಿವಾಸಿಗಳು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಅಂತ ಆಗ್ರಹಿಸಿದ್ದಾರೆ...

ಬೈಟ್: ರಿಯಾಜ್ ಮುಲ್ಲಾ, ನಿವಾಸಿ..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.