ETV Bharat / state

ಮುದ್ದೇಬಿಹಾಳದಲ್ಲಿ ಚುನಾವಣೆ ಅಧಿಕಾರಿಗಳಿಂದ ದಾಳಿ: ನಗದು ವಶ!

author img

By

Published : Jun 13, 2022, 8:10 AM IST

ವಿಜಯಪುರದಲ್ಲಿ ಪರಿಷತ್ ಚುನಾವಣೆಯಲ್ಲಿ ಸೋಲಿನ ಭೀತಿ ಎದುರಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಹಣ ಹಂಚುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

Election money seize in Vijayapura, MLC election news, Amount seize in Muddebihal, Muddebihal news, ವಿಜಯಪುರದಲ್ಲಿ ಚುನಾವಣಾ ಹಣ ವಶ, ಪರಿಷತ್​ ಚುನಾವಣಾ ಸುದ್ದಿ, ಮುದ್ದೇಬಿಹಾಳದಲ್ಲಿ ಹಣ ವಶ, ಮುದ್ದೇಬಿಹಾಳ ಸುದ್ದಿ,
ಮುದ್ದೇಬಿಹಾಳದಲ್ಲಿ ಚುನಾವಣೆ ಅಧಿಕಾರಿಗಳಿಂದ ದಾಳಿ

ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ ರಾಂಪೂರ ಲಾಡ್ಜ್ ಮೇಲೆ ವಿಧಾನ ಪರಿಷತ್ತಿನ ಸ್ಥಳೀಯ ಚುನಾವಣಾಧಿಕಾರಿಗಳು ಭಾನುವಾರ ರಾತ್ರಿ 10.45 ರ ಸುಮಾರಿಗೆ ದಾಳಿ ನಡೆಸಿದ್ದರು. ಈ ವೇಳೆ, ವಾಯವ್ಯ ಶಿಕ್ಷಕರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿಗೆ ಸೇರಿದ ಪ್ರಚಾರ ಸಾಮಗ್ರಿ ಮತ್ತು ಅಂದಾಜು 40 ಸಾವಿರ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.

ಓದಿ: ಕಾಂಗ್ರೆಸ್ ಅಭ್ಯರ್ಥಿ ಹುಕ್ಕೇರಿ ವಿರುದ್ಧ ಹಣ ಹಂಚಿಕೆ ಆರೋಪ: ಕ್ರಮಕ್ಕೆ ಬಿಜೆಪಿ ಅಭ್ಯರ್ಥಿ ಆಗ್ರಹ

ಮತದಾರರಿಗೆ ಹಂಚಲು ಈ ಹಣ ತರಲಾಗಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿತ್ತು. ತಹಶೀಲ್ದಾರ್ ಬಿ.ಎಸ್.ಕಡಕಭಾವಿ, ಸಿಪಿಐ ಆನಂದ ವಾಘ್ಮೋಡಿ, ಪಿಎಸೈ ರೇಣುಜಾ ಜಕನೂರ, ಸೆಕ್ಟರ್ ಅಧಿಕಾರಿ ಆರ್​ಎಫ್​ಒ ಎಸ್.ಜಿ.ಸಂಗಾಲಿಕ, ಉಪ ಸೆಕ್ಟರ್ ಅಧಿಕಾರಿ ಆರ್​ಎಫ್​ಒ ರಾಜೀವ ಬಿರಾದಾರ, ಪುರಸಭೆಯ ಅಧಿಕಾರಿಗಳು ಸೇರಿದಂತೆ ಮತ್ತಿತರರು ದಾಳಿಯಲ್ಲಿ ಪಾಲ್ಗೊಂಡಿದ್ದರು. ಈ ಕುರಿತು ಸೆಕ್ಟರ್ ಅಧಿಕಾರಿಯವರು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.