ETV Bharat / state

ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಸೆಸ್ ಸಂಗ್ರಹಕ್ಕೆ ಹೊಡೆತ: ಎಪಿಎಂಸಿ ಮಾಜಿ ಅಧ್ಯಕ್ಷ ಆತಂಕ - ಕರ್ನಾಟಕದಲ್ಲಿ ತಿದ್ದುಪಡಿ ಮೊದಲ

ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಅದರಿಂದ ಮುಂದಿನ ದಿನಗಳಲ್ಲಿ ಸೆಸ್ ಸಂಗ್ರಹಕ್ಕೆ ಹೊಡತ ಬೀಳಲಿದೆ ಎಂದು ಎಪಿಎಂಸಿ ನಿಕಟಪೂರ್ವ ಅಧ್ಯಕ್ಷ ಗುರು ತಾರನಾಳ ಹೇಳಿದರು.

Effect on tax Collection by Amendment of APMC Act
ಎಪಿಎಂಸಿ ನಿಕಟಪೂರ್ವ ಅಧ್ಯಕ್ಷ ಗುರು ತಾರನಾಳ
author img

By

Published : Jul 7, 2020, 8:35 PM IST

ಮುದ್ದೇಬಿಹಾಳ: ಬಿಜೆಪಿ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ಸೆಸ್ ಸಂಗ್ರಹದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಕೃಷಿ ಉತ್ಪನ್ನ ಮಾರುಕಟ್ಟೆಯ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ ಎಂದು ಎಪಿಎಂಸಿ ನಿಕಟಪೂರ್ವ ಅಧ್ಯಕ್ಷ ಗುರು ತಾರನಾಳ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಳಿಕೋಟಿ ಕೃಷಿ ಉತ್ಪನ್ನ ಮಾರುಕಟ್ಟೆಯ ಅಧ್ಯಕ್ಷರಾಗಿ ತಮ್ಮ 40 ತಿಂಗಳ ಅವಧಿಯಲ್ಲಿ ₹ 9.75 ಕೋಟಿ ಸೆಸ್ ಸಂಗ್ರಹವಾಗಿದೆ. ಅದರಲ್ಲಿ ₹ 4.50 ಕೋಟಿಯನ್ನು ತಾಳಿಕೋಟಿ, ಮುದ್ದೇಬಿಹಾಳದಲ್ಲಿ ರೈತಭವನ ನಿರ್ಮಿಸಲಾಗಿದೆ ಎಂದರು.

ಎಪಿಎಂಸಿ ನಿಕಟಪೂರ್ವ ಅಧ್ಯಕ್ಷ ಗುರು ತಾರನಾಳ

ಅಲ್ಲದೆ, ಎಪಿಎಂಸಿ ವ್ಯಾಪ್ತಿಯಲ್ಲಿ ವಾಣಿಜ್ಯ ಮಳಿಗೆಗಳ ನಿರ್ಮಾಣ, ಸಂತೆ, ಮಾರುಕಟ್ಟೆ ಹಾಗೂ ಕುಡಿಯುವ ನೀರಿನ ಘಟಕಗಳು, ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿಗಳ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಗೆ ವ್ಯಯಿಸಲಾಗಿದೆ ಎಂದು ಹೇಳಿದರು.

2017-18ರಲ್ಲಿ ₹ 4 ಕೋಟಿ, 2018-19ರಲ್ಲಿ ₹ 3 ಕೋಟಿ ಹಾಗೂ 2019-20ನೇ ಸಾಲಿನಲ್ಲಿ ₹ 2.75 ಕೋಟಿ ಸೆಸ್ ಸಂಗ್ರಹವಾಗಿದೆ. ಈಗ ಕಾಯ್ದೆ ತಿದ್ದುಪಡಿ ತರುವ ಮೂಲಕ ಸೆಸ್​​​ ಸಂಗ್ರಹ ಕುಸಿಯಲಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.