ETV Bharat / state

ವಿಜಯಪುರ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಭೂಕಂಪನದ ಅನುಭವ - ವಿಜಯಪುರದಲ್ಲಿ ಲಘು ಭೂಕಂಪ

ವಿಜಯಪುರ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಭೂಕಂಪನವಾಗಿರುವ ಅನುಭವವಾಗಿದ್ದು, ಜನರು ಭಯಭೀತರಾಗಿದ್ದಾರೆ.

earthquake in vijayapura
earthquake in vijayapura
author img

By

Published : Oct 27, 2020, 1:53 AM IST

ವಿಜಯಪುರ: ಜಿಲ್ಲೆಯ ಕೊಲ್ಹಾರ ತಾಲೂಕಿನ ಮಸೂತಿ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಭಾರಿ ಪ್ರಮಾಣದ ಸದ್ದು ಕೇಳಿ ಬಂದಿದೆ. ಅಲ್ಪಸ್ವಲ್ಪ ಭೂ ಕಂಪನವಾದ ಅನುಭವ ಗ್ರಾಮಸ್ಥರಿಗೆ ಆಗಿದೆ.

ಸೋಮವಾರ ರಾತ್ರಿ 9 ರಿಂದ 9.30ರ ನಡುವೆ ಮೂರು ಬಾರಿ ಭೂಮಿ ಕಂಪನವಾಗಿರುವ ಅನುಭವವಾಗಿದೆ.ಇದರ ಜತೆಗೆ ಭಾರಿ ಪ್ರಮಾಣದ ಸದ್ದು ಕೇಳಿ ಬಂದಿದ್ದು, ಮನೆಗಳಲ್ಲಿನ ಸಾಮಗ್ರಿಗಳು ಕೆಳಗೆ ಬಿದ್ದಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇದರಿಂದ ಬೆಚ್ಚಿಬಿದ್ದ ಗ್ರಾಮಸ್ಥರು ಕೆಲಕಾಲ ಮನೆಯಿಂದ ಹೊರ ಬಂದು, ಭಯ ಭೀತಿಯಲ್ಲಿ ಹೊರಗಡೆ ನಿಂತುಕೊಂಡಿರುವ ಘಟನೆ ನಡೆದಿದೆ.

ಕಳೆದ ಒಂದು ವಾರದ ಹಿಂದೆ ಸಹ ಮಸೂತಿ ಪಕ್ಕದ ಮಲಘಾಣ, ಕೂಡಗಿ ಗ್ರಾಮದಲ್ಲಿಯೂ ಕೂಡ ಇದೆ ರೀತಿಯಲ್ಲಿ ಸ್ಫೋಟ ಮತ್ತು ಭೂಮಿ ಕಂಪಿಸಿರುವ ಘಟನೆ ನಡೆದಿದ್ದು, ಇದೀಗ ಜನರಲ್ಲಿ ಆತಂಕ ಹೆಚ್ಚಳವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.