ETV Bharat / state

ಮತ್ತೆ ವಿಜಯಪುರದಲ್ಲಿ ನಡುಗಿದ ಭೂಮಿ.. ಹೆದರಿ ಮನೆಯಿಂದ ಹೊರಗೆ ಓಡಿ ಬಂದ ಜನ..

ಎರಡು-ಮೂರು ವರ್ಷಗಳ ಹಿಂದೆ ಈ ಭಾಗದಲ್ಲಿ ಇದೇ ರೀತಿಯ ಶಬ್ಧದೊಂದಿಗೆ ವಾರದಲ್ಲಿ ಮೂರ್ನಾಲ್ಕು ಬಾರಿ ಭೂಕಂಪನ ಆಗುತ್ತಿತ್ತು. ಆದರೆ, ಆಗ ರಿಕ್ಟರ್ ಮಾಪಕದಲ್ಲಿ ದಾಖಲಾಗಿರಲಿಲ್ಲ. ಆಗ ಗಣಿ ಹಾಗೂ ಭೂ ವಿಜ್ಞಾನಿಗಳು ಈ ಗ್ರಾಮಗಳಿಗೆ ಭೇಟಿ ನೀಡಿ ಇದು ಭೂಕಂಪನಲ್ಲ. ಇದೊಂದು ಭೂಮಿಯಲ್ಲಿ ನಡೆಯುವ ನೈಸರ್ಗಿಕ ಪ್ರಕ್ರಿಯೆ ಎಂಬ ಮಾಹಿತಿ ನೀಡಿದ್ದರು..

Earthquake
ಭೂಕಂಪನ
author img

By

Published : Oct 18, 2021, 10:03 PM IST

Updated : Oct 18, 2021, 10:25 PM IST

ವಿಜಯಪುರ : ಜಿಲ್ಲೆಯ ತಿಕೋಟಾ ತಾಲೂಕಿನ ಹಲವು ಗ್ರಾಮಗಳಲ್ಲಿ ತಿಂಗಳಲ್ಲಿ 2ನೇ ಬಾರಿ ಸೋಮವಾರ ರಾತ್ರಿ ಭೂಕಂಪನದ ಅನುಭವವಾಗಿದೆ. ಕಳ್ಳಕವಟಗಿ, ಘೋಣಸಗಿ, ಬಾಬಾನಗರ, ಬಿಜ್ಜರಗಿ, ಹುಬನೂರ, ಸಿದ್ದಾಪುರ ಕೆ. ಟಕ್ಕಳಕಿ, ಸೋಮದೇವರಹಟ್ಟಿ, ಮಲಕನದೇವರಹಟ್ಟಿ ಗ್ರಾಮಗಳಲ್ಲಿ ಈ ಅನುಭವವಾಗಿದೆ.

ಭೂಕಂಪದಿಂದ ಅಂಗಡಿ ವಸ್ತು ಚೆಲ್ಲಾಪಿಲ್ಲಿಯಾಗಿರುವುದು

ಈ ವೇಳೆ ಜೋರಾದ ಶಬ್ಧ ಕೇಳಿ ಬಂದಿದೆ. ಸುಮಾರು 5 ರಿಂದ 10 ಸೆಕೆಂಡ್ ಭೂಮಿ ಕಂಪಿಸಿದೆ. ಆಗ ಜೋರಾದ ಶಬ್ಧ ಉಂಟಾಗಿ ಮನೆಯ ಮೇಲ್ಛಾವಣಿಯಲ್ಲಿನ ಮಣ್ಣು ಉದುರಿದೆ. ಮನೆಯಲ್ಲಿನ ಹಿರಿಯರು ಮಕ್ಕಳೊಂದಿಗೆ ಭಯಗೊಂಡು ಹೊರಗೆ ಓಡಿ ಬಂದಿದ್ದಾರೆ.

ಇದೇ ತಿಂಗಳು ಕೆಲವು ದಿನಗಳ ಹಿಂದೆ ಹೀಗೆಯೇ ಭೂಕಂಪನ ಆಗಿತ್ತು. ರಿಕ್ಟರ್ ಮಾಪನದಲ್ಲೂ ಸಹ ದಾಖಲಾಗಿತ್ತು. ಬಿಜ್ಜರಗಿ ಗ್ರಾಮವು ಭೂಕಂಪನದ ಕೇಂದ್ರವಾಗಿತ್ತು. ಆ ಸಮಯದಲ್ಲಿ ಯಾವ ಅಧಿಕಾರಿಯಾಗಲಿ, ಗಣಿ ಹಾಗೂ ಭೂ ವಿಜ್ಞಾನಿಗಳಾಗಲಿ ಈ ಗ್ರಾಮಗಳಿಗೆ ಭೇಟಿ ನೀಡಿಲ್ಲ.

ಎರಡು-ಮೂರು ವರ್ಷಗಳ ಹಿಂದೆ ಈ ಭಾಗದಲ್ಲಿ ಇದೇ ರೀತಿಯ ಶಬ್ಧದೊಂದಿಗೆ ವಾರದಲ್ಲಿ ಮೂರ್ನಾಲ್ಕು ಬಾರಿ ಭೂಕಂಪನ ಆಗುತ್ತಿತ್ತು. ಆದರೆ, ಆಗ ರಿಕ್ಟರ್ ಮಾಪಕದಲ್ಲಿ ದಾಖಲಾಗಿರಲಿಲ್ಲ. ಆಗ ಗಣಿ ಹಾಗೂ ಭೂ ವಿಜ್ಞಾನಿಗಳು ಈ ಗ್ರಾಮಗಳಿಗೆ ಭೇಟಿ ನೀಡಿ ಇದು ಭೂಕಂಪನಲ್ಲ. ಇದೊಂದು ಭೂಮಿಯಲ್ಲಿ ನಡೆಯುವ ನೈಸರ್ಗಿಕ ಪ್ರಕ್ರಿಯೆ ಎಂಬ ಮಾಹಿತಿ ನೀಡಿದ್ದರು.

ಆದರೆ, ಇದೇ ತಿಂಗಳ ಕೆಲವು ದಿನಗಳ ಹಿಂದೆ ಭೂಕಂಪನ ದಾಖಲಾಗಿದೆ. ಈಗ ಎರಡನೆಯ ಬಾರಿ ಅದೇ ಅನುಭವ ಆಗಿದೆ. ಇದು ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆಯೋ? ಇಲ್ಲವೋ? ಎಂಬುದನ್ನು ಜಿಲ್ಲಾಡಳಿತ ಸ್ಪಷ್ಟಪಡಿಸಬೇಕಿದೆ.

ಓದಿ: ಬಟ್ಟೆ ಶೋಕಿ, ಬಿಟ್ಟಿ ಪ್ರಚಾರ, ಸುಳ್ಳಿನ ಭಾಷಣಗಳೇ ಬಂಡವಾಳ! ಹೆಬ್ಬೆಟ್ಟು ಗಿರಾಕಿ ಮೋದಿಯಿಂದ ದೇಶ ನರಳುತ್ತಿದೆ: ಕೈ ಆಕ್ರೋಶಕಾರಿ ಟ್ವೀಟ್​

Last Updated : Oct 18, 2021, 10:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.