ವಿಜಯಪುರ: ಕಳೆದ ಮೂರು ದಿನಗಳ ಹಿಂದೆಯಷ್ಟೇ ಭೂಕಂಪನದ ಅನುಭವಕ್ಕೊಳಗಾಗಿ ಆತಂಕದಲ್ಲಿದ್ದ ವಿಜಯಪುರ ಜಿಲ್ಲೆಯ ಜನರಿಗೆ ನಿನ್ನೆ ತಡರಾತ್ರಿ ಮತ್ತೊಮ್ಮೆ ಅದೇ ರೀತಿಯ ಅನುಭವವಾಗಿದೆ. ಇದರಿಂದ ಜಿಲ್ಲೆಯ ಜನರು ಮತ್ತಷ್ಟು ಆಘಾತಕ್ಕೊಳಗಾಗಿದ್ದಾರೆ.
ಶನಿವಾರ ರಾತ್ರಿ ಜಿಟಿ ಜಿಟಿ ಮಳೆಯ ಮಧ್ಯೆ ಕೂಡ ವಿಜಯಪುರ ನಗರ ಸೇರಿದಂತೆ ವಿವಿಧೆಡೆ ಭೂಮಿ ಕಂಪಿಸಿರುವ ಅನುಭವವಾಗಿದೆ. ಹೀಗಾಗಿ ಜನರು ಮನೆಯಿಂದ ಹೊರಗಡೆ ಓಡಿ ಬಂದು ಬೀದಿಯಲ್ಲಿ ಕಾಲಕಳೆದಿದ್ದಾರೆ.
ರಾತ್ರಿ ವೇಳೆ 11.45 ಹಾಗೂ ಹಾಗೂ 11.48ರ ವೇಳೆ ಎರಡು ಸಲ ಭೂಮಿ ಕಂಪಿಸಿರುವ ಅನುಭವವಾಗಿದ್ದು, ಇದರಿಂದ ಜನರು ಭಯ ಭೀತರಾಗಿ ತಮ್ಮ ಕುಟುಂಬಸ್ಥರೊಂದಿಗೆ ಮನೆಯಿಂದ ಹೊರಗಡೆ ಬಂದಿದ್ದಾರೆ.
ಇದನ್ನೂ ಓದಿರಿ: ನ್ಯಾಯಾಂಗ ಪ್ರಜಾಪ್ರಭುತ್ವದ ಆಧಾರ ಸ್ತಂಭ :ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ವಿಶೇಷವೆಂದರೆ ವಿಜಯಪುರದ ಕೆಲವೊಂದು ಪ್ರದೇಶಗಳಲ್ಲಿ ಕಳೆದ ಒಂದು ವರ್ಷದಿಂದಲೂ ಭೂಕಂಪನದಂತಹ ಅನುಭವ ಆಗುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಭೂ-ವಿಜ್ಞಾನಿಗಳು ಅಧ್ಯಯನ ಸಹ ಕೈಗೊಂಡಿದ್ದಾರೆ.