ETV Bharat / state

ಗುಮ್ಮಟ ನಗರಿಯಲ್ಲಿ ಸರಣಿ ಭೂಕಂಪದ ಅನುಭವ: ಆತಂಕದಲ್ಲಿ ಜನತೆ - ವಿಜಯಪುರ ಲೇಟೆಸ್ಟ್​​ ಅಪ್ಡೇಟ್​​ ನ್ಯೂಸ್​​

ಒಂದೇ ವಾರದಲ್ಲಿ ವಿಜಯಪುರ ಜಿಲ್ಲೆಯ ತಿಕೋಟಾ ಸುತ್ತಮುತ್ತ ಮೂರು ಬಾರಿ ಭೂಕಂಪನ‌ದ ಅನುಭವವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.‌

Earthquake
ಸಾಂದರ್ಭಿಕ ಚಿತ್ರ
author img

By

Published : Feb 27, 2023, 10:46 AM IST

ವಿಜಯಪುರ: ಇಂದು ಬೆಳಗ್ಗೆ 9-45ರ ಸುಮಾರಿಗೆ ಗುಮ್ಮಟ ನಗರಿ ವಿಜಯಪುರದಲ್ಲಿ ಮತ್ತೆ ಭೂಕಂಪನದ ಅನುಭವ ಆಗಿದೆ. ಜಿಲ್ಲೆಯ ತಿಕೋಟಾ ಪಟ್ಟಣದ ಸುತ್ತ ಮುತ್ತ ಭೂಮಿ ಕಂಪಿಸಿದೆ ಎಂದು ಜನರು ಹೇಳಿದ್ದಾರೆ. ಭೂಕಂದ ಜತೆಗೆ ಭಾರಿ ಸ್ಪೋಟದ ಸದ್ದಿಗೆ ಜನ ಬೆಚ್ಚಿ ಬಿದ್ದು, ಮನೆಯಿಂದ ಹೊರ ಬಂದಿದ್ದಾರೆ.‌ ಒಂದೇ ವಾರದಲ್ಲಿ ತಿಕೋಟಾ ಸುತ್ತ ಮುತ್ತ ಮೂರು ಬಾರಿ ಭೂಕಂಪನ‌ ಅನುಭವವಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.‌

ಸರಣಿ ಭೂಕಂಪ: ಸರಣಿ ಭೂಕಂಪನಗಳಿಂದ ತಿಕೋಟಾ ಪಟ್ಟಣದ ಜನ ಕಂಗಾಲಾಗಿದ್ದಾರೆ. ತಿಕೋಟಾ ಪಟ್ಟಣ ಸೇರಿ ಸುತ್ತಮುತ್ತಲಿನ ಪ್ರದೇಶಗಳಾದ ಕಳ್ಳಕವಟಗಿ, ಘೋಣ ಸಗಿ, ಬಾಬಾನಗರ, ಟಕ್ಕಳಕಿ, ಹುಬನೂರ, ಸೋಮದೇವರಹಟ್ಟಿ, ಮಲಕನದೇವರಹಟ್ಟಿ ಗ್ರಾಮಗಳಲ್ಲಿ ಫೆ.25ರಂದು ಭೂಕಂಪನದ ಅನುಭವವಾಗಿತ್ತು. ರಾತ್ರಿ 10.32 ರ ಸುಮಾರಿಗೆ ಭಯಾನಕ ಕಂಪನದ ಅನುಭವ ಜನರನ್ನು‌ಮನೆಯಿಂದ ಓಡುವಂತೆ ಮಾಡಿತ್ತು.

ಇದನ್ನೂ ಓದಿ: ಇಂಡೋನೇಷ್ಯಾದಲ್ಲಿ ಕಂಪಿಸಿದ ಭೂಮಿ; ಟರ್ಕಿಯಲ್ಲಿ ಮೃತರ ಸಂಖ್ಯೆ 47 ಸಾವಿರಕ್ಕೇರಿಕೆ

ಸ್ಪೋಟದ ರೀತಿ ಕೇಳಿ ಬಂದ ಜೋರಾಗಿ ಕೇಳಿ ಬಂದ ಶಬ್ಧದ ಜೊತೆಗೆ ಕಂಪನದ ಅನುಭವ ಸಹ ಆಗಿದೆ.‌ ಭಯಾನಕ ಸದ್ದಿಗೆ ಹೆದರಿ ಜನ ತಮ್ಮ ತಮ್ಮ ಮನೆಗಳಿಂದ ಹೊರಗೆ ಓಡಿ ಬಂದಿದ್ದರು. ಈ ಹಿಂದಿನಿಗಿಂತಲೂ ಅತಿ ಭಯಾನಕವಾಗಿ ಕೇಳಿ ಬಂದ ಸ್ಫೋಟದ ರೀತಿಯ ಸದ್ದು ಹಾಗೂ ಕಂಪನ ಅನುಭವ ಇದಾಗಿತ್ತು. ಭೂಕಂಪನ ಸದ್ದಿಗೆ ‌ನಾಯಿಗಳು ಸೇರಿದಂತೆ ಮೂಖ ಪ್ರಾಣಿಗಳ ಜೋರಾಗಿ ಕೂಗಾಟ‌ ನಡೆಸಿದ್ದವು. ಮನೆಯಲ್ಲಿದ್ದ ವಸ್ತುಗಳು ಕೆಲವು‌ ಕಡೆ ಅಲುಗಾಡಿ ಕೆಳಗೆ ಬಿದ್ದಿದೆ. ಈ ಕುರಿತು ಅಧಿಕಾರಿಗಳಿಂದ ಯಾವುದೇ ಮಾಹಿತಿ ಇನ್ನು ಲಭ್ಯವಾಗಿಲ್ಲ.

ಮಳೆಯ ಕಾರಣ ನೀಡಿದ್ದ ಅಧಿಕಾರಿಗಳು: ಈ ಹಿಂದೆ ಆಗಸ್ಟ್​ 2022ರಲ್ಲಿ ವಿಜಯಪುರ ಜಿಲ್ಲೆಯ ಭೂಕಂಪನ ಪೀಡಿತ ಪ್ರದೇಶಗಳಿಗೆ ನೈಸರ್ಗಿಕ ವಿಕೋಪ ಪರಿಶೀಲನಾ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಜಿಲ್ಲೆಯಲ್ಲಿ ಪದೇ ಪದೆ ಭೂಕಂಪದ ಅನುಭವವಾಗುತ್ತಿರುವುದಕ್ಕೆ ಆಲಮಟ್ಟಿ ಜಲಾಶಯ ಭರ್ತಿ ಹಾಗೂ ಎನ್‌ಟಿಪಿಸಿ ಕಾರಣವಲ್ಲ ಎಂದು ನೈಸರ್ಗಿಕ ವಿಕೋಪ ಪರಿಶೀಲನಾ ತಂಡದ ಹಿರಿಯ ವೈಜ್ಞಾನಿಕ ಅಧಿಕಾರಿ ಜಗದೀಶ ಈ ಹಿಂದೆ ಸ್ಪಷ್ಟಪಡಿಸಿದ್ದರು.

ವಿಜಯಪುರ ಜಿಲ್ಲೆಯ ಭೂಕಂಪನಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷ ಉತ್ತಮ ಮಳೆಯಾಗಿದೆ. ಮಳೆ ಹೆಚ್ಚಾದಾಗ ಮಾತ್ರ ಭೂಕಂಪನದ ಅನುಭವ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಹಾಗೆ ನೋಡಿದರೆ ಜಿಲ್ಲೆ ಬರಗಾಲ ಪೀಡಿತ ಪ್ರದೇಶ. ಈಗ ಮಳೆ ಪ್ರಮಾಣ ಹೆಚ್ಚಾಗಿರುವ ಕಾರಣ ಒಣಪ್ರದೇಶದಲ್ಲಿ ನೀರು ಹೆಚ್ಚು ನುಗ್ಗಿದ್ದು, ಕಲ್ಲಿನ ಪದರಗಳು ಅಲುಗಾಡುತ್ತವೆ. ಇದರಿಂದ ದೊಡ್ಡ ಶಬ್ಧ ಬರುವ ಕಾರಣ ಕಂಪನ ಸೃಷ್ಟಿಯಾಗುತ್ತಿದೆ ಎಂದು ಹೇಳಿದ್ದರು.

ಇದನ್ನೂ ಓದಿ: ಗುಮ್ಮಟ ನಗರಿಯಲ್ಲಿ‌ ಮತ್ತೆ ಭೂಕಂಪನದ ಅನುಭವ.. ಭಾರಿ ಸದ್ದಿಗೆ ಬೆಚ್ಚಿಬಿದ್ದ ಗ್ರಾಮಸ್ಥರು:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.