ETV Bharat / state

ಸಾರ್ವಜನಿಕರೊಂದಿಗೆ ಪೊಲೀಸ್ ಇಲಾಖೆ ಶಾಂತಿ ಸಭೆ : ಲಾಕ್​ಡೌನ್​ಗೆ ಸಹಕರಿಸುವಂತೆ ಡಿಎಸ್​ಪಿ ಮನವಿ - vijaypur lackdown news

ಧರ್ಮ ಬೇಧ ಮಾಡದೆ ಶಾಂತಿಯುತವಾಗಿ ವರ್ತನೆ ಮಾಡಬೇಕು. ಹಳ್ಳಿಗಳಲ್ಲಿ ಅಗತ್ಯ ಸರಕುಗಳ ಸಾಗಾಣಿಕೆಗೆ ಜಿಲ್ಲಾಡಳಿತದಿಂದ ವ್ಯವಸ್ಥೆ ಮಾಡಲಾಗಿದೆ. ರೈತರಿಗೆ ತರಕಾರಿ, ಹಣ್ಣು ಮಾರಾಟ ಮಾಡಲು ಯಾವುದೇ ಅಡತಡೆ ಇಲ್ಲ.

dsp-request
ಲಾಕ್​ಡೌನ್​ಗೆ ಸಹಕರಿಸುವಂತೆ ಡಿಎಸ್​ಪಿ ಮನವಿ
author img

By

Published : Apr 5, 2020, 2:48 PM IST

ವಿಜಯಪುರ : ಲಾಕ್​ಡೌನ್ ಮುಗಿಯುವವರೆಗೂ ಜನ ಮನೆಯಿಂದ ಹೊರ ಬರಬಾರದು ಎಂದು ಡಿಎಸ್​ಪಿ ಲಕ್ಷ್ಮಿ ನಾರಾಯಣ ಸಾರ್ವಜನಿಕರಿಗೆ ಮನವಿ ಮಾಡಿದರು.

ನಗರದ ಗೋಲ್‌ಗುಮ್ಮಟ ಗ್ರಾಮೀಣ ಪೊಲೀಸ್ ಠಾಣಾ ಆವರಣದಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕೊರೊನಾ ವೈರಸ್​ನಿಂದ ದೇಶ ಸಂಪೂರ್ಣ ಲಾಕ್‌ಡೌನ್ ಆಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅಗತ್ಯ ಸರಕುಗಳನ್ನ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ. ಲಾಕ್‌ಡೌನ್‌ಗೆ ಸಹಕಾರ ನೀಡಿದ್ರೇ ಕೊರೊನಾ ವೈರಸ್ ತಡೆ ಸಾಧ್ಯ.

ಆದರೂ ಕೆಲ ಜನರು ಲಾಕ್‌ಡೌನ್ ಆದೇಶ ಧಿಕ್ಕರಿಸಿ ಓಡಾತ್ತಿದ್ದಾರೆ. ಅವರ ವಾಹನಗಳನ್ನು ಸೀಜ್ ಮಾಡಲಾಗುತ್ತಿದೆ. ಅನಿವಾರ್ಯ ಕಾರಣವಿದ್ದಾಗ ಮಾತ್ರ ಹೊರ ಬರಬೇಕು ಎಂದು ಡಿಎಸ್​ಪಿ ಹೇಳಿದ್ದಾರೆ. ಧರ್ಮ ಬೇಧ ಮಾಡದೆ ಶಾಂತಿಯುತವಾಗಿ ವರ್ತನೆ ಮಾಡಬೇಕು, ಹಳ್ಳಿಗಳಲ್ಲಿ ಅಗತ್ಯ ಸರಕುಗಳ ಸಾಗಾಣಿಕೆಗೆ ಜಿಲ್ಲಾಡಳಿತದಿಂದ ವ್ಯವಸ್ಥೆ ಮಾಡಲಾಗಿದೆ. ರೈತರಿಗೆ ತರಕಾರಿ ಹಣ್ಣು ಮಾರಾಟ ಮಾಡಲು ಯಾವುದೇ ಅಡತಡೆ ಇಲ್ಲ.

ಕೆಲವು ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವ ದೂರು ಕೇಳಿ ಬರುತ್ತಿದ್ದವು. ಅಂತವರ ಬಗ್ಗೆ ಪೊಲೀಸ್ ಇಲಾಖೆ ಮಾಹಿತಿ ನೀಡಬೇಕು ಎಂದರು‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.