ETV Bharat / state

ವಿಜಯಪುರ: ಕೋಟಿ ವೃಕ್ಷ ಅಭಿಯಾನದ ಪಕ್ಕದಲ್ಲೇ ಜೀವಜಲಕ್ಕೆ ತತ್ವಾರ - Constant wandering for drinking water

ಕೋಟಿ ವೃಕ್ಷ ಅಭಿಯಾನದ ಕೂಗಳತೆ ದೂರದಲ್ಲೇ ಶುದ್ಧ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.

Constant wandering for drinking water
ಜೀವಜಲಕ್ಕೆ ತತ್ವಾರ
author img

By

Published : Feb 28, 2023, 4:33 PM IST

ಕೋಟಿ ವೃಕ್ಷ ಅಭಿಯಾನದ ಸಮೀಪದಲ್ಲೇ ಜೀವಜಲಕ್ಕೆ ತತ್ವಾರ

ವಿಜಯಪುರ: ವಿಜಯಪುರ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಭೂತನಾಳ ಕೆರೆ ಸದ್ಯ ತುಂಬಿದೆ. ಸುಮಾರು 500 ಎಕರೆಯಲ್ಲಿ ಕೋಟಿ ವೃಕ್ಷ ಅಭಿಯಾನದಡಿ ಮಾನವ ನಿರ್ಮಿತ ಅರಣ್ಯ ಬೆಳೆಸುವ ಕಾರ್ಯ ಭರದಿಂದ ಸಾಗಿದೆ. ಹಚ್ಚ ಹಸುರಿನ ಪ್ರದೇಶದ ಸನಿಹದಲ್ಲೇ ಇರುವ ಪುಟ್ಟ ಗ್ರಾಮದಲ್ಲಿ ಕುಡಿಯುವ ನೀರಿಗೆ ತೀವ್ರ ಬರ ಬಂದಿದೆ. ಅಗತ್ಯ ಮೂಲ ಸೌಕರ್ಯಗಳೂ ಇಲ್ಲದೇ ಗ್ರಾಮದ ನಿವಾಸಿಗಳು ನಿತ್ಯ ಪರದಾಡುತ್ತಿದ್ದಾರೆ.

ಜಿಲ್ಲೆಯ ತಿಕೋಟಾ ತಾಲ್ಲೂಕಿನ ಅರಕೇರಿ ಕರಾಡದೊಡ್ಡಿ ಗ್ರಾಮದಲ್ಲಿ ಜೀವಜಲಕ್ಕಾಗಿ ಮೂರು ಕಿ.ಮೀ. ಅಲೆದಾಡಬೇಕಿದೆ. ಗ್ರಾಮದ ಬಹುತೇಕ ವಿದ್ಯಾರ್ಥಿಗಳು ಶಾಲೆಗೆ ಚಕ್ಕರ್​ ಹಾಕಿ, ಕುಡಿಯುವ ನೀರು ಸಂಗ್ರಹಿಸಲು ಕಿ.ಮೀ. ಗಟ್ಟಲೆ ಸಂಚರಿಸಬೇಕಿಗಿದೆ. ಇಲ್ಲವೇ ಬೆಳಗಿನ ಜಾವವೇ ಎದ್ದು ನೀರು ತರಲು ಓಡಾಡಬೇಕು.

ಶಾಲೆ ನಾಲ್ಕು ಕಿ.ಮೀ ದೂರ: ಈ ಗ್ರಾಮದಿಂದ ನಾಲ್ಕು ಕಿ.ಮೀ. ದೂರಲ್ಲಿ ಅರಕೇರಿ ಶಾಲೆ ಇದೆ. ಇಲ್ಲಿನ ವಿದ್ಯಾರ್ಥಿಗಳಿಗೆ ಸಮರ್ಪಕವಾದ ಬಸ್ ವ್ಯವಸ್ಥೆಯೂ ಇಲ್ಲ. ವಿದ್ಯಾರ್ಥಿಗಳು ಬಿಸಿಲು, ಮಳೆ, ಗಾಳಿ ಲೆಕ್ಕಿಸದೇ ನಡೆದುಕೊಂಡೇ ಹೋಗಬೇಕು. ಗ್ರಾಮಕ್ಕೆ ಸಂಪರ್ಕಿಸಲು ಒಂದು ರಸ್ತೆಯೂ ಸರಿಯಾಗಿಲ್ಲ. ಇದರಿಂದಾಗಿ ಯಾವುದೇ ಖಾಸಗಿ ವಾಹನಗಳು ಇತ್ತಕಡೆ ಸುಳಿಯುತ್ತಿಲ್ಲ ಎಂದು ಜನರು ಹೇಳುತ್ತಿದ್ದಾರೆ.

ಶೈಕ್ಷಣಿಕ ಭವಿಷ್ಯಕ್ಕೆ ತೊಂದರೆ: ಗ್ರಾಮದಲ್ಲಿರುವ ಬಹುತೇಕರು ಕೂಲಿ ಕಾರ್ಮಿಕರು. ಉದ್ಯೋಗ ಅರಸಿ ನಿತ್ಯ ವಿಜಯಪುರ ನಗರಕ್ಕೆ ಹೋಗಬೇಕು. ಒಂದು ದಿನ ಕೆಲಸ ಬಿಟ್ಟರೂ ಕೂಡ ತುತ್ತಿನ ಚೀಲ ತುಂಬಿಸಿಕೊಳ್ಳಲು ಹೆಣಗಾಡಬೇಕಿದೆ. ಪೋಷಕರು ದುಡಿಯಲು ನಗರಕ್ಕೆ ತೆರಳಿದರೆ, ಮಕ್ಕಳು, ಶಾಲೆ ಬಿಟ್ಟು ಅನಿವಾರ್ಯವಾಗಿ ಕುಡಿಯುವ ನೀರು ಸಂಗ್ರಹಿಸುವ ಕಾರ್ಯದಲ್ಲಿ ನಿರತರಾಗಬೇಕಾಗುತ್ತದೆ. ಇಂತಹ ಪರಿಸ್ಥಿತಿಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವೂ ಮಂಕಾಗುತ್ತಿದೆ.

ಅಧಿಕಾರಿಗಳೇ ಇತ್ತ ಗಮನಹರಿಸಿ!: ''ನಮ್ಮ ಕಷ್ಟಕ್ಕೆ ಸರ್ಕಾರ ತಕ್ಷಣವೇ ಸ್ಪಂದಿಸಬೇಕು. ಇಲ್ಲದಿದ್ದರೆ, ನಾವು ಯಾಕೆ ಮತ ಹಾಕಬೇಕು? ಕರಾಡದೊಡ್ಡಿ ಗ್ರಾಮಕ್ಕೆ ಒಂದೇ ಒಂದು ಸೌಲಭ್ಯವನ್ನೂ ಒದಗಿಸಿಲ್ಲ. ಈ ಬಾರಿ ಮತ‌ ಕೇಳಲು ಬರುವ ಜನಪ್ರತಿನಿಧಿಗಳಿಗೆ ತಕ್ಕ ಶಾಸ್ತಿ ಮಾಡುತ್ತೇವೆ. ಕಳೆದ ಐದು ವರ್ಷ ಗ್ರಾಮಕ್ಕೆ ಏನು ಮಾಡಿದ್ದೀರಿ ಎಂದು‌ ಕೇಳಿದರೆ ಜನಪ್ರತಿನಿಧಿಗಳಲ್ಲಿ ಯಾವುದೇ ಉತ್ತರವಿರಲ್ಲ'' ಎಂದು ಗ್ರಾಮಸ್ಥರೊಬ್ಬರು ಕಿಡಿಕಾರಿದರು.

ಚುನಾವಣೆ ಬಹಿಷ್ಕಾರ ಸಾಧ್ಯತೆ: ''ಶಾಲೆ ಮಕ್ಕಳು ನಾಲ್ಕು‌ ಕಿ.ಮೀ. ದೂರ ತೆರಳಿ ಬಿಂದಿಗೆಯಲ್ಲಿ ನೀರು ತಂದು ಹಾಕುವುದರೊಳಗೆ ತುಂಬಾ ತಡವಾಗುತ್ತದೆ. ಶಾಲೆಗೆ ಸರಿಯಾದ ಸಮಯಕ್ಕೆ ಹೋಗಬೇಕಾದರೆ ಬಸ್​ಗಳೇ ಇರಲ್ಲ. ಪಾಪ‌‌ ಮಕ್ಕಳೇನು ಮಾಡಬೇಕು.‌ ತಡವಾಗಿ ಶಾಲೆಗೆ ಹೋದರೆ ಶಿಕ್ಷಕರಿಂದ ಬೈಗುಳ, ಹೊಡೆತ ತಿನ್ನಬೇಕು. ಈ ಎಲ್ಲ ಅವ್ಯವಸ್ಥೆ ಕಂಡು ಗ್ರಾಮದ ಜನ‌ರು ಈ ಬಾರಿ ಚುನಾವಣೆ ಬಹಿಷ್ಕಾರ ಮಾಡಿದರೂ ಅಚ್ಚರಿ ಇಲ್ಲ.‌ ನಮ್ಮ ಕಷ್ಟ ಪರಿಹರಿಸಿ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಿ" ಎಂದು ಗ್ರಾಮಸ್ಥರು ಅಂಗಲಾಚುತ್ತಿದ್ದಾರೆ.

ಇದನ್ನೂ ಓದಿ: ಚಡಚಣ ಸಹೋದರರ ಜೋಡಿ ಕೊಲೆ: ಆರೋಪಿಗಳು ನ್ಯಾಯಾಲಯಕ್ಕೆ ಹಾಜರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.