ವಿಜಯಪುರ: ಸಮಾರಂಭ, ಜಾತ್ರೆಗಳಲ್ಲಿ ಆರ್ಕೆಸ್ಟ್ರಾ, ನಾಟಕ ಕಂಪನಿಗಳಿಗೆ ಕಾರ್ಯಕ್ರಮ ನಡೆಸಲು ಅನುಮತಿ ನೀಡುವಂತೆ ಒತ್ತಾಯಿಸಿ ಉತ್ತರ ಕರ್ನಾಟಕ ಕಲಾವಿದರ ಕಲ್ಯಾಣ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ಕೊರೊನಾ ವೈರಸ್ ಕಾಲಾವಿದರ ಜೀವನ ನುಂಗಿದೆ. ಜಾತ್ರೆ, ಸಭೆ, ಸಮಾರಂಭಗಳಿಲ್ಲದೆ ಕಂಗಾಲಾಗಿದ್ದೇವೆ. ದುಡಿಯುವ ಕೈಗಳಿಗೆ ಕೊರೊನಾ ಕೊಕ್ಕೆ ಹಾಕಿದ್ದು, ಕಲಾವಿದರ ಬದಕು ಬೀದಿಗೆ ಬಂದಿದೆ ಎಂದು ಕಲಾವಿದರು ಜಿಲ್ಲಾಧಿಕಾರಿ ಮುಂದೆ ಅಳಲು ತೋಡಿಕೊಂಡರು.
ಕಲಾವಿದರಿಗೆ ಸರ್ಕಾರ ಸರಿಯಾಗಿ ಪರಿಹಾರ ನೀಡದಿರುವುದರಿಂದ ಇಂದು ಕಲಾವಿದರು ಮನೆ ನಿರ್ವಹಣೆ ಮಾಡಲಾಗದ ಸ್ಥಿತಿಯಲ್ಲಿದ್ದಾರೆ. ಕಲಾವಿದರ ನೆರವಿಗೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಕಲಾವಿದರಿಗೆ ಉದ್ಯೋಗವಿಲ್ಲ. ಇತ್ತ ಮನೆ ಬಾಡಿಗೆ ನೀಡುಲು ಆಗುತ್ತಿಲ್ಲ. ಸರ್ಕಾರ ಶೀಘ್ರವಾಗಿ ಸಮಾರಂಭ, ಜಾತ್ರೆ, ಇತರೆ ಕಾರ್ಯಕ್ರಮಗಳಲ್ಲಿ ಆರ್ಕೆಸ್ಟ್ರಾ, ನಾಟಕ ಕಂಪನಿಗಳನ್ನು ನಡೆಸಲು ಅನುಮತಿ ನೀಡುವಂತೆ ಒತ್ತಾಯಿಸಿ ಕಲಾವಿದರು ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು..