ವಿಜಯಪುರ: ಚರಂಡಿ ಕುಸಿದು ಪರಿಣಾಮ ಪೌರ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ.
ವಾರ್ಡ್12 ರಲ್ಲಿ ಪೌರ ಕಾರ್ಮಿಕ ಅಶೋಕ ಕಡಿಮನಿ (47) ಶುಚಿತ್ವ ಕಾರ್ಯ ಮಾಡುತ್ತಿದ್ದ, ಈ ವೇಳೆ ಡ್ರೈನೇಜ್ ಕುಸಿದು ಕಾಮಗಾರಿಯ ಕೆಳಭಾಗದಲ್ಲಿ ಕಾರ್ಮಿಕ ಸಿಲುಕಿಕೊಂಡಿದ್ದಾನೆ. ಘಟನಾ ಸ್ಥಳದಲ್ಲಿದ್ದ ಸಾರ್ವಜನಿಕರು ಪೌರ ಕಾರ್ಮಿಕನ ನೆರವಿಗೆ ಧಾವಿಸಿ ಜೆಸಿಬಿ ಮೂಲಕ ಮಣ್ಣು ಅಗೆದು ಆತನನ್ನು ಕಾಪಾಡಿದ್ದಾರೆ.
ಇನ್ನೂ ಯುಜೆಡಿ ಕಳಪೆ ಕಾಮಗಾರಿಯಿಂದ ಡ್ರೈನೇಜ್ ಕುಸಿದು ಪೌರ ಕಾರ್ಮಿಕನಿಗೆ ಗಾಯವಾಗಿದೆ ಎಂಬುದು ಸ್ಥಳೀಯರ ಆರೋಪ. ತುರ್ತು ಚಿಕಿತ್ಸೆಗಾಗಿ ಪೌರ ಕಾರ್ಮಿಕ ಅಶೋಕನನ್ನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಇಂಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.