ವಿಜಯಪುರ: ಡಾ. ವಿಕ್ರಮ ಸಾರಾಬಾಯ್ ಜನ್ಮ ಶತಮಾನೋತ್ಸವದ ಅಂಗವಾಗಿ ಇಸ್ರೋ ವಿಜ್ಞಾನಿಗಳು ಶಿಕ್ಷಕರೊಂದಿಗೆ ಸಂವಾದ ನಡೆಸಿದರು.
ನಗರದ ಬಿಎಲ್ಡಿ ಶಿಕ್ಷಣ ಸಂಸ್ಥೆಯ ಅಭಿಯಾಂತ್ರಿಕ ಕಾಲೇಜಿನಲ್ಲಿ ಇಸ್ರೋ ವಿಜ್ಞಾನಿ ಡಾ.ವಿಲಾಶ ರಾಠೋಢ ಹಾಗೂ ಡಾ.ಅಲೋಕ ಕುಮಾರ ಪ್ರೌಢಶಾಲಾ ಶಿಕ್ಷಕರೊಂದಿಗೆ ಸಂವಾದ ನಡೆಸಿ ಇಸ್ರೋ ಸಂಸ್ಥೆ ಕಾರ್ಯಗಳು ಹಾಗೂ ಉಪಗ್ರಹ ಉಡಾವಣೆ ಕುರಿತಾಗಿ ಮಾಹಿತಿ ನೀಡಿದರು. ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ವಿಜ್ಞಾನವನ್ನು ಪ್ರಯೋಗಿವಾಗಿ ಮಾರ್ಗದರ್ಶನ ಮಾಡುವ ಕುರಿತಾಗಿ ಡಾ. ವಿಲಾಸ ರಾಠೋಡ್ ಮಾಹಿತಿ ನೀಡಿದರು.
ಬಳಿಕ ವಿಜ್ಞಾನಿ ಅಲೋಕ ಕುಮಾರ ಇಸ್ರೋ ಮುಂದಿರುವ ಸವಾಲುಗಳ ಕುರಿತು ಸಂಪೂರ್ಣ ಮಾಹಿತಿ ನೀಡಿದರು. ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲೆಯ 25 ಕ್ಕೂ ಅಧಿಕ ಶಾಲೆಯ ಶಿಕ್ಷಕರು ಭಾಗಿಯಾಗಿ ವಿಜ್ಞಾನದ ಹಲವು ವಿಷಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು.