ETV Bharat / state

ಮಾವ-ಸೊಸೆ ನಡುವೆ ಅನೈತಿಕ ಸಂಬಂಧ ಶಂಕೆ: ಪುತ್ರನಿಂದ ತಂದೆ-ಪತ್ನಿಯ ಬರ್ಬರ ಹತ್ಯೆ - karnataka crime news

ಅನೈತಿಕ ಸಂಬಂಧದ ಶಂಕೆಯಿಂದ ಪುತ್ರನೋರ್ವ ತಂದೆ ಹಾಗೂ ಹೆಂಡತಿಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಇಂಡಿ ತಾಲೂಕಿನ ಖೇಡಗಿ ಕ್ರಾಸ್ ಬಳಿಯ ತೋಟದ ಮನೆಯಲ್ಲಿ ನಡೆದಿದೆ.

ಇಂಡಿ ಬಳಿ ಮಾವ, ಸೊಸೆಯ ಮರ್ಡರ್...
author img

By

Published : Oct 6, 2019, 12:34 PM IST

Updated : Oct 6, 2019, 8:44 PM IST

ವಿಜಯಪುರ: ಅನೈತಿಕ ಸಂಬಂಧದ ಶಂಕೆಯಿಂದ ಪುತ್ರನೊಬ್ಬ ತನ್ನ ತಂದೆ ಹಾಗೂ ಹೆಂಡತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಇಂಡಿ ತಾಲೂಕಿನ ಖೇಡಗಿ ಕ್ರಾಸ್ ಬಳಿಯ ತೋಟದ ಮನೆಯಲ್ಲಿ ನಡೆದಿದೆ.

ಇಂಡಿ ಬಳಿ ಮಾವ, ಸೊಸೆಯ ಮರ್ಡರ್...

ತಾಲೂಕಿನ ಕುಟುಂಬವೊಂದು ಹೊಟ್ಟೆಪಾಡಿಗಾಗಿ ಇಂಡಿ ತಾಲೂಕಿನ ಖೇಡಗಿಯ ಶ್ರೀಶೈಲ ಸೊನ್ನ ಎಂಬುವವರ ಜಮೀನಿನಲ್ಲಿ ನೆಲೆಸಿತ್ತು. ಪುಟ್ಟಣ್ಣ ಪೂಜಾರಿ ಎಂಬಾತ ತನ್ನ ಪತ್ನಿ, ಎರಡು ಮಕ್ಕಳು ಮತ್ತು ತಂದೆ ಜೊತೆ ವಾಸವಿದ್ದ. ನಿನ್ನೆ ಪುಟ್ಟಣ್ಣ ಮನೆಗೆ ಬಂದಾಗ ಸ್ವಂತ ಅಪ್ಪನೇ ಸೊಸೆಯೊಂದಿಗೆ (ಪುಟ್ಟಣ್ಣನ ಪತ್ನಿ) ಸಲ್ಲಾಪದಲ್ಲಿದ್ದನಂತೆ. ಇದನ್ನು ಕಂಡ ಪುಟ್ಟಣ್ಣ ತನ್ನ ತಂದೆ ಹಾಗೂ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ನಂತರ ತನ್ನ ಎರಡು ಮಕ್ಕಳೊಂದಿಗೆ ಪರಾರಿಯಾಗಿದ್ದಾನೆ. ಮಾವ-ಸೊಸೆಯ ಜೋಡಿ ಕೊಲೆಗೆ ಕಾರಣವಾಗಿದ್ದು ಅನೈತಿಕ ಸಂಬಂಧವೋ ಅಥವಾ ಕುಟುಂಬ ಕಲಹವೋ ಎಂಬುದು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಇಂಡಿ ಗ್ರಾಮೀಣ ಠಾಣೆ ಪೊಲೀಸರು, ಕೊಲೆ ಆರೋಪಿ ಪುಟ್ಟಣ್ಣನಿಗಾಗಿ ಜಾಲ ಬೀಸಿದ್ದಾರೆ.

Intro:ವಿಜಯಪುರ Body:ವಿಜಯಪುರ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ
ವಿಜಯಪುರ ಜಿಲ್ಲೆಯಲ್ಲಿ ಮಾವ, ಸೊಸೆಯ ಡಬಲ್ ಮರ್ಡರ್ ನಡೆದಿದೆ.
ಮಾವ ಮಾಳಪ್ಪ ಧರ್ಮಣ್ಣ ಪೂಜಾರಿ(65) ಹಾಗೂ ಸೊಸೆ
ರೇಣುಕಾ ಪುಟ್ಟಣ್ಣ ಪೂಜಾರಿ(35) ಕೊಲೆಯಾದವರು.
ಇಂಡಿ ತಾಲೂಕಿನ ಶಿರಗೂರ ಗ್ರಾಮದ ನಿವಾಸಿಗಳು.
ಇಂಡಿ ತಾಲೂಕಿನ ಖೇಡಗಿ ಕ್ರಾಸ್ ಬಳಿಯ ತೋಟದ ಮನೆಯಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ.
ಖೇಡಗಿಯ ಶ್ರೀಶೈಲ ಸೊನ್ನ ಅವರ ಜಮೀನಿನಲ್ಲಿ ಕೆಲಸಕ್ಕೆ ಇದ್ದ ಕುಟುಂಬ.
ಇಂಡಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆಯಾದ ರೇಣುಕಾಳ ಪತಿ ಪುಟ್ಟಣ್ಣನೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.Conclusion:ವಿಜಯಪುರ
Last Updated : Oct 6, 2019, 8:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.